FACT CHECK | ಅಹಮದಾಬಾದ್ನ ವಿಮಾನ ಅಪಘಾತ ಎಂದು AI ಚಿತ್ರ ಹಂಚಿಕೆ
242 ಪ್ರಯಾಣಿಕರನ್ನು ಹೊತ್ತು ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ (AI 171) ಅಹಮದಾಬಾದ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ಅಪಘಾತಕ್ಕೀಡಾಯಿತು. ಇದೇ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು ವಿಡಿಯೋಗಳು ಅಹಮದಾಬಾದ್ನಲ್ಲಿ ನಡೆದ ವಿಮಾನ ಅಪಘಾತದ ದೃಶ್ಯಗಳು ಎಂದು ಪ್ರತಿಪಾದಿಸಿ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.

ಇದರಲ್ಲಿ ಘಟನೆ ನೈಜ ದೃಶ್ಯಗಳಾಗಿದ್ದರೆ, ಇನ್ನೂ ಕೆಲವು ಫೇಕ್ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇನ್ಸ್ಟಾಗ್ರಾಮ್ ಬಳಕೆದಾರ ರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡು, ‘‘ಇದು ನಿಜಕ್ಕೂ ತುಂಬಾ ನೋವು ತುಂಬಿದ ಕ್ಷಣ.. ಇಂದು ಅಹಮದಾಬಾದ್ನಿಂದ ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ AI-171 ದುರಂತವಾಗಿ ಪತನಗೊಂಡಿದೆ. ಈ ಭಯಾನಕ ಅಪಘಾತದಲ್ಲಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಸುದ್ದಿ ತೀವ್ರ ನೋವು ತಂದಿದೆ’’ ಎಂದು ಬರೆದುಕೊಂಡಿದ್ದಾರೆ.
ಇದಾದ ಸ್ವಲ್ಪ ಸಮಯದ ನಂತರ, ನಿರ್ಮಾಣ ಹಂತದಲ್ಲಿರುವ ಕಟ್ಟಡದ ಮುಂದೆ ಏರ್ ಇಂಡಿಯಾ ವಿಮಾನವು ನೆಲದ ಮೇಲೆ ಬೆಂಕಿಯಲ್ಲಿ ಮುಳುಗುತ್ತಿರುವುದನ್ನು ಮತ್ತು ರಕ್ಷಣಾ ತಂಡಗಳ ಸದಸ್ಯರು ಉರಿಯುತ್ತಿರುವ ವಿಮಾನವನ್ನು ನಂದಿಸುವ ಕಾರ್ಯದಲ್ಲಿ ತೊಡಗಿರುವುದನ್ನು ತೋರಿಸಲಾಗಿದೆ.
ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು ಸೂಕ್ಷ್ಮವಾಗಿ ಚೆಕ್ ಮಾಡಿದಾಗ, ವೈರಲ್ ಚಿತ್ರವು ಅಸಹಜವಾಗಿ ಕಾಣ್ಣುತ್ತಿದ್ದು, ಒಂದೇ ಕಡೆ ಬೆಳಕು ಮತ್ತು ಹೊಗೆಯಿಂದ ಕೂಡಿದೆ. ಈ ಫೋಟೊ ಅಸ್ಪಷ್ಟವಾಗಿದ್ದು, ನೈಜ ಅಪಘಾತ ದೃಶ್ಯಗಳಿಗಿಂತ ಭಿನ್ನವಾಗಿದೆ. ಈ ಚಿತ್ರವನ್ನು ಕೃತಕವಾಗಿ ರಚಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ.

ವೈರಲ್ ಚಿತ್ರವನ್ನು ಪತ್ತೆ ಮಾಡಲು, AI ಪತ್ತೆ ಸಾಧನ ಹೈವ್ ಮಾಡರೇಶನ್ ಮತ್ತು ಸೈಟ್ ಎಂಜಿನ್ ಮೂಲಕ ರನ್ ಮಾಡಿದಾಗ ಚಿತ್ರವು AI- ರಚಿತ ಅಥವಾ ಡೀಪ್ಫೇಕ್ ಆಗಿರುವ ಸಾಧ್ಯತೆಯನ್ನು ಶೇಕಡಾ 99.9 ರಷ್ಟಿದೆ ಎಂಬ ಫಲಿತಾಂಶ ಲಭ್ಯವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಅಹಮದಾಬಾದ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲೆ ಅಪಘಾತವಾಗಿದೆ ಎಂದು ಹಂಚಿಕೊಳ್ಳಲಾಗುತ್ತಿರುವ ಚಿತ್ರವು AI- ರಚಿತವಾಗಿದ್ದು, ಇದು ನಿಜವಾದ ವಿಮಾನ ಅಪಘಾತದ ಘಟನೆಯನ್ನು ಚಿತ್ರಿಸುವುದಿಲ್ಲ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನ್ನು ಓದಿರಿ FACT CHECK | ಹಿರಿಯ ನಾಗರಿಕರಿಗೆ ಜೂನ್ 15ರಿಂದ ಉಚಿತ ಪ್ರಯಾಣ ಎಂದು ಕೇಂದ್ರ ಸರ್ಕಾರ ಘೋಷಿಸಿಲ್ಲ

