FACT CHECK | ಕೊಯಮತ್ತೂರಿನ ಬೂತ್‌ವೊಂದರಲ್ಲಿ ಅಣ್ಣಾಮಲೈಗೆ ಕೇವಲ ಒಂದೇ ಒಂದು ಮತ ಬಿದಿದ್ದು ನಿಜವೇ

‘ಬಿಜೆಪಿಯ ಭವಿಷ್ಯದ ಪ್ರಧಾನಿ, ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರು ಒಂದು ಬೂತ್‌ನಲ್ಲಿ ಕೇವಲ 1 ಮತ ಪಡೆದಿದ್ದಾರೆ, ಕೊಯಮತ್ತೂರಿನ ಜನರ ವಿಶ್ವಾಸವನ್ನು ಗಳಿಸುವಲ್ಲಿ ಅಣ್ಣಾಮಲೈ ವಿಫಲರಾಗಿದ್ದಾರೆ ಎಂದು ಲೇವಡಿ ಮಾಡಿದ್ದಾರೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

2024ರ ಲೋಕಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬಂದಿದೆ. ತಮಿಳುನಾಡಿನಲ್ಲಿ ಕಮಲವನ್ನು ಅಳಿಸುತ್ತೇನೆ ಎಂದು ಪಣತೊಟ್ಟಿದ್ದ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಸೋತಿದ್ದಾರೆ. ಡಿಎಂಕೆ ಅಭ್ಯರ್ಥಿ ಗಣಪತಿ ಅಣ್ಣಾಮಲೈ ವಿರುದ್ಧ ಗೆದ್ದಿದ್ದಾರೆ. ಕೊಯಮತ್ತೂರು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಅಣ್ಣಾಮಲೈ  ಒಂದು ಬೂತ್‌ನಲ್ಲಿ ಕೇವಲ ಒಂದು ಮತ ಪಡೆದಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

fact anna body 11

 

ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಇದೇ ಫೋಟೋವನ್ನು ತಮ್ಮ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಅದನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು  ಗೂಗಲ್‌ನಲ್ಲಿ ರಿವರ್ಸ್‌ ಇಮೇಜನಲ್ಲಿ ಸರ್ಚ್‌ ಮಾಡಿದಾಗ, ವೈರಲ್ ಚಿತ್ರವನ್ನು ತಮಿಳುನಾಡಿನ ಬಿಜೆಪಿ ಯುವ ಘಟಕದ ಉಸ್ತುವಾರಿ ಪ್ರವೀಣ್ ರಾಜ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಇದೊಂದು ತಿರುಚಿದ ಫೋಟೋ ಎಂದು ಸ್ಪಷ್ಟನೆ ನೀಡಿದ್ದಾರೆ.

 

ಈ ಕುರಿತಾಗಿ ಹೆಚ್ಚಿನ ತನಿಖೆ ನಡೆಸಿದ ವೇಳೆ, ಕೊಯಮತ್ತೂರು ಲೋಕಸಭಾ ಕ್ಷೇತ್ರದ ಆರಂಭಿಕ ಸುತ್ತಿನ ಮತ ಎಣಿಕೆಯ ನಂತರ ಡಿಎಂಕೆ ಅಭ್ಯರ್ಥಿ ಗಣಪತಿ ರಾಜ್‌ ಕುಮಾರ್ ಅವರು ಮುನ್ನಡೆಯಲ್ಲಿದ್ದಾರೆ ಎಂದು ಹೇಳುವ ಸನ್ನಿವೇಶದಲ್ಲಿ ಸನ್ ನ್ಯೂಸ್ ತನ್ನ ಪರಿಶೀಲಿಸಿದ ಎಕ್ಸ್‌ ಖಾತೆಯಲ್ಲಿ ಇದೇ ಫೋಟೋ ಹಂಚಿಕೊಂಡಿರುವುದು ಲಭ್ಯವಾಗಿದೆ.

‘ಬಿಸಿಯುಎಎಫ್ 07464’ ಸಂಖ್ಯೆಯ ಬೂತ್‌ನಲ್ಲಿ ಅಣ್ಣಾಮಲೈ ಅವರಿಗೆ 101 ಮತಗಳು ದಾಖಲಾಗಿವೆ ಎಂದು ಸನ್ ನ್ಯೂಸ್ ಹಂಚಿಕೊಂಡಿರುವ ನೋಟಿಸ್‌ನಲ್ಲಿ ಮಾಹಿತಿ ನೀಡಲಾಗಿತ್ತು.

fact anna body 111

ಇದೀಗ ವೈರಲ್ ಆಗಿರುವ ಚಿತ್ರ ಹಾಗೂ ಸನ್ ನ್ಯೂಸ್ ಹಂಚಿಕೊಂಡಿದ್ದ ಚಿತ್ರದೊಂದಿಗೆ ಹೋಲಿಕೆ ಮಾಡಿ ನೋಡಿದಾಗ ಎರಡೂ ಚಿತ್ರಗಳ ಎಲ್ಲಾ ಅಂಶಗಳು ಒಂದೇ ಆಗಿವೆ ಎಂದು ತಿಳಿಯುತ್ತದೆ. ಆದರೆ 07464’ ಸಂಖ್ಯೆಯ ಬೂತ್‌ನಲ್ಲಿ ಅಣ್ಣಾಮಲೈ ಅವರಿಗೆ ದೊರೆತ 101 ಮತಗಳನ್ನು ತಿರುಚಿ 1 ಎಂದು ಎಡಿಟ್ ಮಾಡಿ ಹಂಚಿಕೊಂಡಿರುವುದು ಸ್ಪಷ್ಟವಾಗಿದೆ.

fact anna body 2

ಒಟ್ಟಾರೆಯಾಗಿ ಹೇಳುವುದಾದರೆ, ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರು ಸ್ಪರ್ಧಿಸಿದ್ದ ಕೊಯಮತ್ತೂರಿನ ಲೋಕಸಭಾ ಕ್ಷೇತ್ರದ 07464’ ಸಂಖ್ಯೆಯ ಬೂತ್‌ನಲ್ಲಿ 101 ಮತಗಳು ದೊರೆತಿದ್ದು ಅದನ್ನು ತಿರುಚಿ ಕೇವಲ 1 ಮತ ತೊರೆತಿದೆ  ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights