ಮತ್ತಷ್ಟು ತುಟ್ಟಿ: ಅಡುಗೆ ಅನಿಲ (ಎಲ್‌ಪಿಜಿ) ಬೆಲೆ 25 ರೂ ಏರಿಕೆ!

ಕೊರೊನಾ ಬಿಕ್ಕಟ್ಟಿನ ನಡುವೆಯೂ ಇಂಧನ ಬೆಲೆಯಲ್ಲಿ ಭಾರೀ ಏರಿಕೆಯಾಗುತ್ತಿದೆ. ಹಲವಾರು ರಾಜ್ಯಗಳಲ್ಲಿ ಪೆಟ್ರೋಲ್‌ ಬೆಲೆ 100 ರೂ ದಾಟಿದೆ. ಇದೀಗ, ಅಡುಗೆ ಅನಿಲದ ಬೆಲೆಯನ್ನೂ 25.5 ರೂ ಏರಿಕೆಯಾಗಿದೆ.

ನಾಲ್ಕು ಮೆಟ್ರೋ ಸಿಟಿಗಳಾದ ದಿಲ್ಲಿ, ಮುಂಬೈ, ಚೆನ್ನೈ ಹಾಗೂ ಕೋಲ್ಕತ್ತಾದಲ್ಲಿ ಸಬ್ಸಿಡಿ ರಹಿತ ಎಲ್‌ಪಿಜಿ ಬೆಲೆ 25.5 ರೂ ಏರಿಕೆಯಾಗಿದ್ದು, ಈ ಬೆಲೆ ಜುಲೈ 01 ರಿಂದಲೇ ಜಾರಿಗೆ ಬರಲಿದೆ. ಹೀಗಾಗಿ  ದಿಲ್ಲಿ, ಮುಂಬೈ ಹಾಗೂ ಕೋಲ್ಕತ್ತಾದಲ್ಲಿ ಪ್ರತಿ ಸಿಲಿಂಡರ್‌ ((14.2 ಕೆಜಿ)ಗೆ ರೂ. 834.50 ಆಗಿರುತ್ತದೆ. ಎಂದು ಭಾರತೀಯ ತೈಲ ನಿಗಮ ತಿಳಿಸಿದೆ.

ಚೆನ್ನೈನಲ್ಲಿ ಎಲ್‌ಪಿಜಿ ಸಿಲಿಂಡರ್‌ ಬೆಲೆ ತುಂಬಾ ತುಟ್ಟಿಯಾಗಿದ್ದು, 850.50 ರೂ ಇದೆ. ಕಳೆದ ಆರು ತಿಂಗಳಲ್ಲಿ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ಗೆ 140 ರೂ ಗಳಷ್ಟು ಏರಿಕೆಯಾಗಿದೆ ಎಂದು ತಿಳಿದು ಬಂದಿದೆ.

ಉಳಿದಂತೆ, 19 ಕೆಜಿ ವಾಣಿಜ್ಯ ಸಿಲಿಂಡರ್‌ನ ಬೆಲೆಯನ್ನೂ 76 ರೂ ಏರಿಸಲಾಗಿದೆ.

ಇದನ್ನೂ ಓದಿ: ಕನ್ನಡದಲ್ಲಿರುವ ಗ್ರಾಮಗಳ ಹೆಸರನ್ನು ಮಲೆಯಾಳಂಗೆ ಬದಲಾಯಿಸುವ ಉದ್ದೇಶ ಸರ್ಕಾರಕ್ಕಿಲ್ಲ: ಪಿಣರಾಯಿ ವಿಜಯನ್‌ ಸ್ಪಷ್ಟನೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights