ಜನರನ್ನು ಸುಲಿಗೆ ಮಾಡುತ್ತಿದೆ ಎಸ್‌ಬಿಐ ಬ್ಯಾಂಕು; ವಿವಿಧ ರೀತಿಯ ಶುಲ್ಕ – ಜಿಎಸ್‌ಟಿ ಜಾರಿ!
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಗ್ರಾಹಕರಿಂದ ಹಲವು ರೀತಿಯ ಶುಲ್ಕಗಳನ್ನು ವಿಧಿಸಲು ಮುಂದಾಗಿದ್ದು, ಖಾತೆದಾರರಿಂದ ವಿವಿಧ ರೀತಿಯಲ್ಲಿ ಶುಲ್ಕ ವಸೂಲಿಗೆ ಮುಂದಾಗಿದೆ. ಎಟಿಎಂ ಮಾತ್ರವಲ್ಲದೆ ಶಾಖೆಗಳಲ್ಲಿಯೂ ಹಣವನ್ನು ವಿತ್‌ಡ್ರಾ (ಹಿಂಪಡೆಯುವಿಕೆ)ಗೂ ಜುಲೈ 01ರಿಂದ ಶುಲ್ಕ ವಿಧಿಸುವುದಾಗಿ ಎಸ್‌ಬಿಐ ಮಾಹಿತಿ ನೀಡಿದೆ.
ಎಸ್‌ಬಿಐ ಬ್ಯಾಂಕುಗಳಲ್ಲಿ ಉಳಿತಾಯ ಖಾತೆ (ಬಿಎಸ್‌ಬಿಡಿ) ಯನ್ನು ಹೊಂದಿರುವ ಖಾತೆದಾರರಿಗೆ ಎಂಟಿಎಂ ಮತ್ತು ಬ್ಯಾಂಕ್ ಶಾಖೆಗಳಲ್ಲಿ ಹಣವನ್ನು ವಿತ್‌ಡ್ರಾ ಮಾಡಿದರೂ ಶುಲ್ಕ ವಿಧಿಸಲಾಗುವುದು. ತಿಂಗಳಲ್ಲಿ ಮೊದಲ ನಾಲ್ಕು ಬಾರಿ ಎಟಿಎಂನಿಂದ ಅಥವಾ ಬ್ಯಾಂಕ್‌ನಿಂದ ಹಣ ವಿತ್‌ಡ್ರಾ ಮಾಡಲು ಯಾವುದೇ ಶುಲ್ಕವಿಲ್ಲ. ಆದರೆ, ನಾಲ್ಕು ಬಾರಿಗಿಂತ ಹೆಚ್ಚು ಬಾರಿ ಹಣ ಡ್ರಾ ಮಾಡದರೆ, 15 ರಿಂದ 75 ರೂಗಳ ವರೆಗೆ ಶುಲ್ಕ ಮತ್ತು ಜಿಎಸ್‌ಟಿ ವಿಧಿಸುವುದಾಗಿ ತಿಳಿಸಿದೆ. ಆದರೆ, ಹಣಕಾಸು ವರ್ಗಾವಣೆ ವಹಿವಾಟಿಗೆ ಸಂಬಂಧಿಸಿದಂತೆ ಯಾವುದೇ ಶುಲ್ಕವಿಲ್ಲ ಎಂದು ಹೇಳಿದೆ.
ಚೆಕ್‌ಬುಕ್‌ಗಳ ಮೇಲೂ ಶುಲ್ಕ:
ಉಳಿತಾಯ ಖಾತೆದಾರನಿಗೆ ಮೊದಲ ಬಾರಿಗೆ ನೀಡಲಾಗುವ 10 ಎಲೆಗಳುಳ್ಳ ಚೆಕ್‌ಬುಕ್‌ಅನ್ನು ಉಚಿತವಾಗಿ ನೀಡಲಾಗುವುದು. ನಂತರ ಪಡೆಯುವ ಚೆಕ್‌ಬುಕ್‌ಗೆ 40 ರೂ ಶುಲ್ಕ ಮತ್ತು ಜಿಎಸ್‌ಟಿ ವಿಧಿಸಲಾಗುವುದು. ಅಲ್ಲದೆ, 25 ಎಲೆಗಳ ಚೆಕ್‌ಬುಕ್‌ಗೆ 75 ರೂ ಶುಲ್ಕ ಮತ್ತು ಜಿಎಸ್‌ಟಿ ವಿಧಿಸಲಾಗುವುದು. ತುರ್ತಾಗಿ ಪಡೆಯುವ ಚೆಕ್ ಪುಸ್ತಕ(10 ಎಲೆ)ಕ್ಕೆ 50 ರೂ ಮತ್ತು ಜಿಎಸ್‌ಟಿ ವಿಧಿಸಲಾಗುವುದು ಎಂದು ತಿಳಿಸಿದೆ.
ಆದರೆ, ಹಿರಿಯ ನಾಗರಿಕರಿಗೆ ಈ ನಿಯಮಗಳು ಅನ್ವಯಿಸುವುದಿಲ್ಲ ಎಂದು ಎಸ್‌ಬಿಐ ಹೇಳಿದೆ.
ಬಿಎಸ್ ಬಿಡಿ ಖಾತೆಯು ಪ್ರಾಥಮಿಕವಾಗಿ ಕಾರ್ಮಿಕ ವರ್ಗಕ್ಕೆ ಮೀಸಲಾಗಿರುವುದರಿಂದ, ಈ ಹೊಸ ನಿಯಮವು ಅವರ ಬ್ಯಾಂಕಿಂಗ್ ಪ್ರವೇಶದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ.
ದುಡಿಯುವ ವರ್ಗವನ್ನು ಹೂಡಿಕೆ ಮಾಡಲು ಮತ್ತು ಅವರ ಹಣವನ್ನು ಉಳಿತಾಯ ಮಾಡುವುದಕ್ಕಾಗಿ ಉಳಿತಾಯ ಖಾತೆ ಅಥವಾ ಜಿರೋ ಬ್ಯಾಲೆನ್ಸ್ ಅಕೌಂಟ್‌ಗಳನ್ನು ತೆರೆಯಲು ಪ್ರೋತ್ಸಾಹಿಸಿ ಖಾತೆಗಳನ್ನು ತೆರೆಸಲಾಯಿತು. ಆದರೆ, ಇದೀಗ ಎಸ್‌ಬಿಐ ಈ ಪ್ರಮಾಣದಲ್ಲಿ ಶುಲ್ಕ ಮತ್ತು ಜಿಎಸ್‌ಟಿ ವಿಧಿಸುತ್ತಿರುವುದರಿಂದಾಗಿ ಅವರ ಅವರನ್ನು ಕಷ್ಟಕ್ಕೆ ದೂಡಲಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಲಕ್ಷದ್ವೀಪ: ಪ್ರಫುಲ್ ಪಟೇಲ್‌ಗೆ ಹಿನ್ನಡೆ; ಕರಾವಳಿ ಮನೆಗಳನ್ನು ದ್ವಂಸಗೊಳಿಸಂತೆ ಹೈಕೋರ್ಟ್ ತಡೆ!