ಗ್ರಾಮಕ್ಕೆ ನುಗ್ಗಿದ ಮೊಸಳೆ : ಬೆಳ್ಳಂಬೆಳಿಗ್ಗೆ ಗ್ರಾಮಸ್ಥರು ಶಾಕ್..!

ಇಂದು ಬೆಳ್ಳಂಬೆಳಿಗ್ಗೆ ಗ್ರಾಮಕ್ಕೆ ಮೊಸಳೆ ನುಗ್ಗಿ ಗ್ರಾಮಸ್ಥರಿಗೆ ಬಿಗ್ ಶಾಕ್ ಕೊಟ್ಟಿದೆ. ಬೃಹತ್ ಗಾತ್ರದ ಮೊಸಳೆ ಗ್ರಾಮದಲ್ಲಿ ಓಡಾಡುವುದನ್ನ ಕಂಡ ಗ್ರಾಮಸ್ಥರು ಭಯಭೀತಿಗೊಂಡಿದ್ದಾರೆ.

ಹೌದು… ಉತ್ತರ ಕನ್ನಡ ಜಿಲ್ಲೆಯ ದಾಂಡೆಲಿಯ ಹತ್ತಿರದಲ್ಲಿರುವ ಕೊಗಿಲಬನ ಗ್ರಾಮಕ್ಕೆ ಮೊಸಳೆ ನುಗ್ಗಿ ದೊಡ್ಡ ಅವಾಂತರವೇ ಸೃಷ್ಟಿ ಮಾಡಿದೆ. ಎಷ್ಟೋ ಜನ ಪ್ರವಾಸಿಗರು ಮೊಸಳೆಗಳನ್ನು ನೋಡಲು ದಾಂಡೆಲಿಗೆ ಬರುತ್ತಾರೆ. ಆದರೆ ಮೊಸಳೆಯೊಂದು ಇಂದು ಗ್ರಾಮಕ್ಕೆ ನುಗ್ಗಿ ಭೀತಿ ಹುಟ್ಟಿಸಿತ್ತು. ಭಯಗೊಂಡ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಅಧಿಕಾರಿಗಳು ಮೊಸಳೆಯನ್ನು ರಕ್ಷಿಸಿ ಕಾಳಿ ನದಿಗೆ ಬಿಟ್ಟಿದ್ದಾರೆ.

ಸಾಮಾನ್ಯವಾಗಿ ಇಲ್ಲಿನ ಮೊಸಳೆಗಳನ್ನು ಜನ ಸ್ನೇಹಿ ಮೊಸಳೆಗಳು ಎಂದು ಕರೆಯಲಾಗುತ್ತದೆ. ಯಾಕೆಂದರೆ ಇಲ್ಲಿನ ಮೊಸಳೆಗಳಿಂದ ತೊಂದರೆಯಾದ ದಾಖಲೆಯಿಲ್ಲ. ಹೀಗಾಗಿ ಗ್ರಾಮಕ್ಕೆ ಮೊಸಳೆ ನುಗ್ಗಿ ರಾಜಾರೋಷವಾಗಿ ಅಡ್ಡಾಡಿದರೂ ಜನ ಅಷ್ಟಾಗಿ ಭಯಗೊಂಡಿಲ್ಲ. ಕೆಲವರು ಮಾತ್ರ ಮೊಸಳೆಯನ್ನು ಕಂಡು ಭಯಭೀತಿಗೊಂಡಿದ್ದಾರೆ. ಈ ಜನಸ್ನೇಹಿ ಮೊಸಳೆಯನ್ನು ಅರಣ್ಯ ಅಧಿಕಾರಿಗಳು ಕಾಳಿನದಿಗೆ ಬಿಟ್ಟಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights