ಜೈಲಿಗೆ ಹೋಗಿ ಬಂದವರನ್ನು ರಾಜಾಹುಲಿ ಎನ್ನಬೇಡಿ: ಯತ್ನಾಳ್‌

ಜೈಲಿಗೆ ಹೋಗಿ ಬಂದವರನ್ನು ರಾಜಹುಲಿ ಎಂದು ಹೊಗಳಬೇಡಿ. ಯಾರ್ಯಾರು ಜೈಲಿಗೆ ಹೋಗಿದ್ದಾರೆ ಎಂದು ಲಿಸ್ಟ್‌ ತೆಗೆಯಿರಿ. ಹಾಲಿ ಸಿಎಂ ಜೈಲಿಗೆ ಹೋಗಿ ಬಂದಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಯತ್ನಾಳ್‌ ಹೇಳಿದ್ದಾರೆ.

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗುವುದು ಖಚಿತ. ರಾಜಕೀಯದಲ್ಲಿ ಏನೂ ಬೇಕಾದರೂ ಯಾವಾಗ ಬೇಕಾದರೂ ಆಗುತ್ತದೆ. ಇನ್ನೆರಡು ವರ್ಷ ಸಿಎಂ ಬದಲಾವಣೆ ವಿಚಾರ ಇಲ್ಲ ಎಂದು ವಿಜಯೇಂದ್ರ ಹೇಳಿಕೆ ನೀಡಿದ್ದಾರೆ. ಅವರು ಸಿಎಂ ಮಗ ಆಗಿರುವುದರಿಂದ ಹಾಗೆ ಹೇಳುತ್ತಾರೆ. ನಾನು ಸಿಎಂ ಆಗಿದ್ರೂ ಹೀಗೆ ಹೇಳುತ್ತಿದೆ ಎಂದು ಅವರು ಹೇಳಿದ್ದಾರೆ.

ನಮ್ಮ ಪ್ರಧಾನಿಗಳಿಂದ ಭವಿಷ್ಯದ ಭಾರತ ನಿರ್ಮಾಣವಾಗುತ್ತಿದೆ. ಭ್ರಷ್ಟಾಚಾರಕ್ಕೆ ನಮ್ಮ ಪಕ್ಷ ಯಾವತ್ತು ಬಿಡಲ್ಲ. ಆದರೆ ಎಲ್ಲದಕ್ಕೂ ಕಾಲ ಕೂಡಿ ಬರಬೇಕು. ಕೌರವರ ನಾಶ ಹೇಗಾಯ್ತು ಅಂತ ಗೊತ್ತಲ್ಲ. ದುಷ್ಟರಿಗೆ ಏನು ಶಿಕ್ಷೆಯಾಗುತ್ತದೆ ಗೊತ್ತಾಗುತ್ತದೆ ಎಂದು ಯತ್ನಾಳ್ ಕಿಡಿಕಾರಿದರು.

ಇದೇ ವೇಳೆ ಪಂಚಮಸಾಲಿ ಮೀಸಲಾತಿ ಹೋರಾಟ ನಿಂತಿಲ್ಲ. ಆ ಹೋರಾಟದಲ್ಲಿ ಒಬ್ಬ ರಾಜಕಾರಣಿ ನಗ್ನನಾಗಿದ್ದಾನೆ. ಅವನು ತನ್ನ ಉದ್ಧಾರಕ್ಕೆ ಸಮಾಜಕ್ಕೆ ಬಳಸಿಕೊಂಡಿದ್ದಾನೆ. ಇದರ ಹಿಂದೆ ಒಬ್ಬ ಉದ್ಯಮಿ ಮಂತ್ರಿ ಇದ್ದಾನೆ. ಅವನನ್ನ ಹೋಗಿ ಕೇಳಿ ಹೇಳ್ತಾನೆ. ಏನಾಯ್ತು ಹೇಗಾಯ್ತು ಅನ್ನೋದನ್ನ ಹೇಳ್ತಾನೆ ಎಂದು ಪರೋಕ್ಷವಾಗಿ ಮುರುಗೇಶ್ ನಿರಾಣಿ ವಿರುದ್ಧ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.