ದೇಶದಲ್ಲಿ ಒಂದೇ ದಿನಕ್ಕೆ 6,654 ಕೊರೊನಾ ಪಾಸಿಟಿವ್ : ಹಾಟ್ ಸ್ಪಾಟಾಗುತ್ತಾ ಭಾರತ..?

ಭಾರತದಲ್ಲಿ ಕೊರೊನಾ ಆಂತಕ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಸೋಂಕಿತರ ಸಂಖ್ಯೆ ಅಪಯಾಕಾರಿಯಾಗಿ ಏರಿಕೆಯಾಗುತ್ತಿದ್ದು ಶುಕ್ರವಾರ ಒಂದೇ ದಿನದಲ್ಲಿ 6,654 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಜೊತೆಗೆ 137 ಮಂದಿಯನ್ನು ಬಲಿ ಪಡೆದುಕೊಂಡಿದೆ.

ಹೌದು… ಲಾಕ್ ಡೌನ್ ಸಡಿಲಗೊಳ್ಳುತ್ತಿದ್ದಂತೆ ದೇಶದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ನೂರಲ್ಲಾ, ಒಂದು ಸಾವಿರವಲ್ಲಾ, ಊದಾರು ಸಾವಿರದವರೆಗೆ ಸೋಂಕಿತರು ಪ್ರತಿನಿತ್ಯ ದಾಖಲಾಗುತ್ತಿದ್ದಾರೆ. ಇದರಿಂದ ದೇಶದಲ್ಲಿ ಈವರೆಗೆ 1,25,101 ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದು, ಇವರಲ್ಲಿ 3720 ಮಂದಿ ಸಾವನ್ನಪ್ಪಿದ್ದಾರೆ. 48,534 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ದೇಶದ ಸೋಂಕಿರ ಸಂಖ್ಯೆಯಲ್ಲಿ ಮುಂಚೂಣಿಯಲ್ಲಿರುವ ಮಹಾರಾಷ್ಟ್ರದಲ್ಲಿ ಶುಕ್ರವಾರ ಒಂದೇ ದಿನ 2940 ಮಂದಿಯಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಮಡಿದೆ. ಆ ಮೂಲಕ ಸೋಂಕಿತರ ಸಂಖ್ಯೆ ಒಟ್ಟು 44,582ಕ್ಕೆ ತಲುಪಿದೆ.ಮುಂಬೈ ನಗರಿಯೊಂದರಲ್ಲಿಯೇ ಶುಕ್ರವಾರ 1751 ಹೊಸ ಸೋಂಕಿತರು ಪತ್ತೆಯಾಗಿದ್ದು, ಅಲ್ಲಿ ವೈರಸ್ ಸೋಂಕಿತರ ಸಂಖ್ಯೆ 27,068ಕ್ಕೆ ಏರಿದೆ.

ಮಹಾರಾಷ್ಟ್ರದಲ್ಲಿ ಒಟ್ಟು 44,582 ಪ್ರಕರಣಗಳು, ತಮಿಳುನಾಡಲ್ಲಿ 14,753, ಗುಜರಾತ್ ನಲ್ಲಿ ಒಟ್ಟು 13,273, ರಾಜಸ್ಥಾನ 6,494, ಉತ್ತರ ಪ್ರದೇಶ 5,619, ಪಶ್ಚಿಮ ಬಂಗಾಳ 3,322, ಬಿಹಾರ 2,105, ಪಂಜಾಬ್  2,029, ತೆಲಂಗಾಣ 1,761, ಕರ್ನಾಟಕ 1,743, ಜಮ್ಮು ಮತ್ತು ಕಾಶ್ಮೀರ 1,489, ಹರಿಯಾಣ 1,067, ಕೇರಳ 732, ಜಾರ್ಖಂಡ್ 323, ಅಸ್ಸಾಂ 259, ಹಿಮಾಚಲ ಪ್ರದೇಶ 166, ಉತ್ತರಾಖಂಡ 153, ಗೋವಾ 54 ಪ್ರಕರಣಗಳು ದಾಖಲಾಗಿವೆ.

ಹೀಗಾಗಿ ಭಾರತ ಕೋವಿಡ್ -19 ವೈರಸ್ ನ ಹೊಸ ಹಾಟ್ ಸ್ಪಾಟಾ? ಎನ್ನುವ ಪ್ರಶ್ನೆಗೆ ಹೌದು ಎನ್ನುತ್ತಿವೆ ಅಂಕಿ ಅಂಶಗಳು. ಸಕ್ರೀಯ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಇಟಲಿ, ಸ್ಪೇನ್ ಅನ್ನು ಮೀರಿಸಿ ಭಾರತ ಟಾಪ್ -5ರ ಸ್ಥಾನಕ್ಕೇರಿದೆ.

ಈಗಾಗಲೇ ಅಮೆರಿಕಾ, ರಷ್ಯಾ, ಬ್ರೆಜಿಲ್ ಮುಂತಾದ ರಾಷ್ಟ್ರಗಳಲ್ಲಿ ಕೋವಿಡ್ 19 ಮಹಾಮಾರಿ ಅಬ್ಬರಿಸಿಸುತ್ತಿದ್ದು, ಹಲವಾರು ಪ್ರಾಣಗಳು ಬಲಿಯಾಗಿವೆ. ಭಾರತದಲ್ಲೂ ಹೊಸ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದ್ದು, ಭಾರತ್ ಕೊರೊನಾ ಹಾಸ್ಪಾಟ್ ಆಗುವ ಆತಂಕ ಮನೆಮಾಡಿದೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights