ಮೈಸೂರಿನಲ್ಲಿ ಪ್ರಾಮಾಣಿಕತೆ ಮೆರೆದ ಆಟೋ ಡ್ರೈವರ್ ನನ್ನು ಮೆಚ್ಚಿದ ಮಂದಿ….
ಮೈಸೂರಿನಲ್ಲಿ ಆಟೋ ಡ್ರೈವರ್ ಒಬ್ಬರು ಪ್ರಾಮಾಣಿಕತೆ ಮೆರೆದ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಆಟೋಚಾಲಕ ಅಬ್ದುಲ್ ಸಮತ್ ಪ್ರಾಮಾಣಿಕತೆ ಮೆರೆದವರು. ಪ್ರಯಾಣಿಕರೊಬ್ಬರು ಬಿಟ್ಟೋಗಿದ್ದ ಐಫೋನ್ ಹಿಂದಿರುಗಿಸಿ ಮಾನವೀಯತೆ ಮೆರೆದಿದ್ದಾರೆ.
ನಗರ ಪೊಲೀಸ್ ಆಯುಕ್ತರ ಕಚೇರಿಗೆ ಐಫೋನ್ ಹಿಂದಿರುಗಿಸಿದ ಅಬ್ದುಲ್ ಅವರ ಬಗ್ಗೆ ನಗರ ಪೋಲೀಸ್ ಆಯುಕ್ತ ಚಂದ್ರಗುಪ್ತ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಚಾಲಕ ಅಬ್ದುಲ್ ಪ್ರಾಮಾಣಿಕತೆಗೆ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.