ಯಾರಾಗ್ತಾರೆ ಬಿಬಿಎಂಪಿ ಮೇಯರ್…? : ಬಿಜೆಪಿಯಲ್ಲಾದ ಎರಡು ಬಣ – ಗೆಲುವು ಯಾರಿಗೆ?

ಬಿಬಿಎಂಪಿ ಎಲೆಕ್ಷನ್ ಪ್ರಾರಂಭದಿಂದಲೂ ಬಿಜೆಪಿ ನಾಯಕರಿಗೆ ದೊಡ್ಡ ತಲೆ ನೋವು ಆಗಿದೆ. ಯಾಕೆಂದ್ರೆ ಬಿಜೆಪಿಯಲ್ಲೇ ಬಿಬಿಎಂಪಿ ಮೇಯರ್ ಸ್ಥಾನಕ್ಕೆ ಎರಡು ಬಣಗಳು ಸೃಷ್ಟಿಯಾಗಿದ್ದು, ಬಿಜೆಪಿಯಿಂದ ಮೇಯರ್ ಸ್ಥಾನಕ್ಕೆ ಇಬ್ಬರು ನಾಮಪತ್ರ ಸಲ್ಲಿಸಿದ್ದಾರೆ. ಇನ್ನೂ ಉಪಮೇಯರ್ ಸ್ಥಾನಕ್ಕೆ ಮೂವರಿಂದ ನಾಮಪತ್ರ ಸಲ್ಲಿಕೆಯಾಗಿದೆ. ಹೀಗಾಗಿ ಯಾರನ್ನ ಸಮಧಾನ ಮಾಡಬೇಕು ಅನ್ನೋದೇ ಬಿಜೆಪಿಗೆ ದೊಡ್ಡ ಚಾಲೆಂಜ್ ಆಗಿದೆ.

ಬಿಜೆಪಿಯಿಂದ ಗೌತಮ್ ಕುಮಾರ್ ಹಾಗೂ ಪದ್ಮನಾಭ ರೆಡ್ಡಿ ಇಬ್ಬರೂ ಕೂಡ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಹೀಗಾಗಿ ನಾಯಕರು ಇಬ್ಬರು ಅಭ್ಯರ್ಥಿಗಳಲ್ಲಿ ಒಬ್ಬರು ನಾಮಪತ್ರ ಹಿಂಪಡೆಯಲು ಮನವೊಲಿಸುವಲ್ಲಿ ಹರಸಾಹಸವೇ ಪಡುತ್ತಿದ್ದಾರೆ.

ಆದರೆ ಇಬ್ಬರೂ ಕೂಡ ನಾಮಪತ್ರ ಹಿಂಪಡೆಲು ತಯಾರಿಲ್ಲ. ಹೀಗಾಗಿ ಇದರ ಲಾಭವನ್ನ ಕಾಂಗ್ರೆಸ್ ಗೆ ಏನಾದರೂ ಬೆಂಬಲ ಸಿಗುವ ಸಾಧಱಯತೆ ಇದಿಯಾ..? ಅನ್ನೋ ಆತಂಕ ಕೂಡ ಇಲ್ಲಿ ಬಿಜೆಪಿಯಲ್ಲಿ ಚಿಗುರಿದೆ.

ಒಟ್ಟಿನಲ್ಲಿ ಯಾರನ್ನ ಮನವೊಲಿಸಿದರೆ ಪಕ್ಷದ ಹಿತ ಕಾಪಾಡುವಲ್ಲಿ ಸಾಧ್ಯತೆ ಇದೆ. ಯಾರಲ್ಲಿ ಮನಸ್ಥಾಪ ಬಂದರೆ ಪಕ್ಷಕ್ಕೆ ಬಿಟ್ಟು ವಿರೋಧ ಪಕ್ಷಕ್ಕೆ ಬೆಂಬಲ ಸಿಗುವ ಸಾಧ್ಯತೆ ಇದೆ ಅನ್ನೋದರ ತಾಳೆಯನ್ನ ಸದ್ಯ ಬಿಜೆಪಿ ನಾಯಕರು ನೋಡುತ್ತಿದ್ದಾರೆ. ಹೀಗಾಗಿ ಪಕ್ಷ ಯಾರನ್ನ ಉಲಿಸಿಕೊಳ್ಳುತ್ತದೆ. ಯಾರು ಪಕ್ಷದ ಮಾತಿಗೆ ಬೆಲೆ ಕೊಟ್ಟು ನಾಮಪತ್ರ ವಾಪಸ್ಸು ಪಡೆಯುತ್ತಾರೆ..? ಅಥವಾ ಪಕ್ಷದ ವಿರೋಧ ಕಟ್ಟಿಕೊಂಡು ವಿರೋಧ ಪಕ್ಷಗಳ ಕೈ ಜೋಡಿಸುತ್ತಾರೋ..? ಅನ್ನೋದನ್ನ ಕೆಲವೇ ಗಂಟೆ ಕಾದು ನೋಡಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights