FACT CHECK | ಹೆತ್ತ ತಾಯಿಯನ್ನೆ ಮಗ ಮದುವೆಯಾದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆಯೇ?

18 ವರ್ಷಗಳ ಕಾಲ ತನ್ನನ್ನು ಬೆಳೆಸಿದ ನಂತರ ಪಾಕಿಸ್ತಾನದಲ್ಲಿ ಮಗ ತನ್ನ ತಾಯಿಯನ್ನು ಮದುವೆಯಾದ ಗಟನೆ ಪಾಕಿಸ್ತಾನದಲ್ಲಿ ನಡೆದಿದೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

ಫೇಸ್​ಬುಕ್ ಬಳಕೆದಾರರೊಬ್ಬರು ವೀಡಿಯೊವನ್ನು ಹಂಚಿಕೊಂಡು, ‘‘ಪಾಕಿಸ್ತಾನದಲ್ಲಿ ತಮ್ಮ ಸಾಂಪ್ರದಾಯದ ಪ್ರಕಾರ ಸ್ವಂತ ತಾಯಿಯನ್ನೇ ಮದುವೆ ಮಾಡಿಕೊಂಡ ಮಗ..!’’ ಎಂದು ಬರೆದುಕೊಂಡಿದ್ದಾರೆ.

ಹಾಗೆಯೆ ಕನ್ನಡ ಸುದ್ದಿ ಮಾಧ್ಯಮ ಝೀ ಕನ್ನಡ ನ್ಯೂಸ್ ಕೂಡ ‘‘ಹೀಗೂ ಉಂಟು… ಹೆತ್ತ ತಾಯಿಯನ್ನೇ ಮದುವೆಯಾದ ಮಗ: ಇದು ವಿಚಿತ್ರವೋ, ವಿನಾಶವೋ… ಛೇ!!!’’ ಎಂಬ ಶೀರ್ಷಿಕೆಯೊಂದಿಗೆ ಸುದ್ದಿ ಪ್ರಕಟಿಸಿದೆ.

ಹಾಗಿದ್ದರೆ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಸುದ್ದಿ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿರುವ ಈ ಘಟನೆ ನಿಜವಾಗಿಯೂ ನಡೆದಿದೆಯೇ? ಅಥವಾ ಸುಳಲುಸುದ್ದಿ ಇರಬಹುದೇ ಎಂದು ಪರಿಶೀಲಿಸೋಣ.

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದ ಸತ್ಯಾಸತ್ಯತೆಯ್ನು ಪರಿಶಶೀಲಿಸಲು ವಿಡಿಯೋವಿನ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್‌ ರಿವರ್ಸ್‌ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 30 ಡಿಸೆಂಬರ್‌ 2024ರಂದು ಹಿಂದೂಸ್ತಾನ್‌ ಟೈಮ್ಸ್‌ನಲ್ಲಿ ಪ್ರಕಟವಾದ ವರದಿಯೊಂದು ಲಭ್ಯವಾಗಿದೆ. ಇದರಲ್ಲಿ ಪಾಕಿಸ್ತಾನದ ಅಬ್ದುಲ್‌ ಅಹಾದ್‌ ಎಂಬ ವ್ಯಕ್ತಿ ತನ್ನ 18 ವರ್ಷಗಳ ಕಾಲ ತನ್ನನ್ನು ಸಾಕಿ ಬೆಳೆಸಿದ ತಾಯಿಗೆ ಎರಡನೇ ಮದುವೆಗೆ ಅವಕಾಶ ಕಲ್ಪಿಸಿದ್ದಾನೆ ಎಂಬ ಭಾವನಾತ್ಮಕ ವಿಡಿಯೋ ವೈರಲ್‌’’ ಎಂಬ ಶೀರ್ಷಿಕೆಯೊಂದಿಗೆ ಸುದ್ದಿ ಪ್ರಕಟಿಸಿದೆ. ಪಾಕಿಸ್ತಾನದ

ವರದಿಯ ಪ್ರಕಾರ, ‘‘ಪಾಕಿಸ್ತಾನದ ಯುವಕ ಅಬ್ದುಲ್‌ ಅಹಾದ್‌ ಎಂಬಾತ ತನ್ನ ತಾಯಿಗೆ ಎರಡನೇ ಮದುವೆ ಮಾಡಿಸುವ ಮೂಲಕ ಸುದ್ದಿಯಲ್ಲಿದ್ದಾನೆ. ಕಳೆದ 18 ವರ್ಷಗಳಿಂದ ನನ್ನ ಯೋಗ್ಯತೆಗೆ ಅನುಗುಣವಾಗಿ ಅಮ್ಮನಿಗೆ ವಿಶೇಷ ಜೀವನವನ್ನು ನೀಡಲು ಪ್ರಯತ್ನಿಸಿದ್ದೇನೆ. ಆಕೆ ನಮಗಾಗಿ ತನ್ನ ಇಡೀ ಜೀವನವನ್ನೇ ತ್ಯಾಗ ಮಾಡಿದ್ದಾಳೆ. ಅವಳು ಕೂಡಾ ಸ್ವಂತ ಶಾಂತಿಯುತ ಜೀವನವನ್ನು ನಡೆಸಲು ಅರ್ಹಳು, ಆಕೆಗೂ ಜೀವನ ಮತ್ತು ಪ್ರೀತಿಯಲ್ಲಿ ಎರಡನೇ ಅವಕಾಶವನ್ನು ಪಡೆಯುವ ಹಕ್ಕಿದೆ ಎನ್ನುತ್ತಾ ತನ್ನ ತಾಯಿಯ ಖುಷಿಗಾಗಿ ಅಹದ್‌ ಅಮ್ಮನಿಗೆ ಎರಡನೇ ಮದುವೆಯನ್ನು ಮಾಡಿಸಿದ್ದಾನೆ’’ ಎಂದು ಬರೆಯಲಾಗಿದೆ.

ಈ ವಿಡಿಯೋದಲ್ಲಿ ಮಗ ಅಬ್ದುಲ್‌ ತನ್ನ ತಾಯಿಗೆ ಎರಡನೇ ಮದುವೆ ಮಾಡಿಸುತ್ತಿರುವುದನ್ನು ಕಾಣಬಹುದಾಗಿದೆ.

ಈ ಮಾಹಿತಿಯನ್ನು ಬಳಸಿಕೊಂಡು, ನಾವು ಅಬ್ದುಲ್ ಅಹದ್ ಎಂಬ ವ್ಯಕ್ತಿಯ ಇನ್​ಸ್ಟಾಗ್ರಾಮ್ಖಾತೆಯನ್ನು ಖಾತೆಯನ್ನು ಪರಿಶೀಲಿಸಿದಾಗ. ಡಿಸೆಂಬರ್ 18, 2024 ರಂದು ಪೋಸ್ಟ್ ಮಾಡಲಾದ ಅದೇ ವೀಡಿಯೊವನ್ನು ನಾವು ಕಂಡುಕೊಂಡಿದ್ದೇವೆ. ವಿಡಿಯೋದಲ್ಲಿ, ಅವರು ತಮ್ಮ ತಾಯಿಯೊಂದಿಗೆ ಕಳೆದ ಅಮೂಲ್ಯ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ ಮತ್ತು ಅವರ ತಾಯಿ 18 ವರ್ಷಗಳ ಕಾಲ ಮಕ್ಕಳನ್ನು ಹೇಗೆ ನೋಡಿಕೊಂಡಿದ್ದಾರೆ ಎಂದು ಬರೆದುಕೊಂಡಿದ್ದಾರೆ. ನಮಗಾಗಿ ತನ್ನ ಸಂತೋಷವನ್ನು ಸಹ ಆಕೆ ತ್ಯಾಗ ಮಾಡಿದ್ದಾಳೆ. ಆದ್ದರಿಂದ ತನ್ನ ತಾಯಿ ಇನ್ನಾದರು ಶಾಂತಿಯುತ ಮತ್ತು ಪ್ರೀತಿಯ ಜೀವನವನ್ನು ಹೊಂದಬೇಕೆಂದು ನಾನು ಬಯಸುತ್ತೇನೆ ಎಂದು ಅಬ್ದುಲ್ ಹೇಳಿದರು. ಇದೇ ಕಾರಣಕ್ಕೆ ಅಬ್ದುಲ್‌ 2ನೇ ಮದುವೆ ಮಾಡಲು ನಿರ್ಧರಿಸಿದ್ದಾನೆ ಎಂದು ಹೇಳಿದ್ದಾರೆ. ಇಂಡಿಯಾ ಟುಡೆಯಲ್ಲಿ ಪ್ರಕಟವಾದ ಇದೇ ರೀತಿಯ ವರದಿ ಲಭ್ಯವಾಗಿದೆ.

ಈ ಮಾಹಿತಿಯನ್ನು ಬಳಸಿಕೊಂಡು, ನಾವು ಅಬ್ದುಲ್ ಅಹದ್ ಎಂಬ ವ್ಯಕ್ತಿಯ ಇನ್​ಸ್ಟಾಗ್ರಾಮ್ಖಾತೆಯನ್ನು ಕಂಡುಕೊಂಡಿದ್ದೇವೆ. ಡಿಸೆಂಬರ್ 18, 2024 ರಂದು ಪೋಸ್ಟ್ ಮಾಡಲಾದ ಅದೇ ವೀಡಿಯೊವನ್ನು ನಾವು ಕಂಡುಕೊಂಡಿದ್ದೇವೆ. ವಿಡಿಯೋದಲ್ಲಿ, ಅವರು ತಮ್ಮ ತಾಯಿಯೊಂದಿಗೆ ಕಳೆದ ಅಮೂಲ್ಯ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ ಮತ್ತು ಅವರ ತಾಯಿ 18 ವರ್ಷಗಳ ಕಾಲ ಮಕ್ಕಳನ್ನು ಹೇಗೆ ನೋಡಿಕೊಂಡಿದ್ದಾರೆ ಎಂದು ಬರೆದುಕೊಂಡಿದ್ದಾರೆ. ನಮಗಾಗಿ ತನ್ನ ಸಂತೋಷವನ್ನು ಸಹ ಆಕೆ ತ್ಯಾಗ ಮಾಡಿದ್ದಾಳೆ. ಆದ್ದರಿಂದ ತನ್ನ ತಾಯಿ ಇನ್ನಾದರು ಶಾಂತಿಯುತ ಮತ್ತು ಪ್ರೀತಿಯ ಜೀವನವನ್ನು ಹೊಂದಬೇಕೆಂದು ನಾನು ಬಯಸುತ್ತೇನೆ ಎಂದು ಅಬ್ದುಲ್ ಹೇಳಿದರು. ಇದೇ ಕಾರಣಕ್ಕೆ ಅಬ್ದುಲ್‌ 2ನೇ ಮದುವೆ ಮಾಡಲು ನಿರ್ಧರಿಸಿದ್ದಾನೆ ಎಂದು ಹೇಳಿದ್ದಾರೆ.

ಇನ್ನು ಡಿಸೆಂಬರ್ 20, 2024 ರಂದು ಅವರ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ ವೈರಲ್ ಕ್ಲೈಮ್‌ನೊಂದಿಗೆ ಹಂಚಿಕೊಂಡಿರುವ ಫೋಟೋ ಇಲ್ಲಿ ನೋಡಬಹುದು.

ಮಹಿಳೆಯನ್ನು ಮದುವೆಯಾಗುತ್ತಿರುವ ವ್ಯಕ್ತಿ ಸಹಿ ಹಾಕುತ್ತಿರುವ ತುಣುಕನ್ನು ಕೂಡ ಅಬ್ದುಲ್‌ ಹಂಚಿಕೊಂಡಿರುವುದು ಕಂಡು ಬಂದಿದೆ.
ಮಹಿಳೆಯನ್ನು ಮದುವೆಯಾಗುತ್ತಿರುವ ವ್ಯಕ್ತಿ ಸಹಿ ಹಾಕುತ್ತಿರುವ ತುಣುಕನ್ನು ಕೂಡ ಅಬ್ದುಲ್‌ ಹಂಚಿಕೊಂಡಿರುವುದು ಕಂಡು ಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಪಾಕಿಸ್ತಾನದ ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ತಾಯಿಯನ್ನೇ ಮದುವೆಯಾಗಿದ್ದಾನೆ ಎಂದು ಸುಳ್ಳು ಮತ್ತು ಮುಸ್ಲಿಂ ಕುರಿತು ತಪ್ಪು ಅಭಿಪ್ರಾಯ ಮೂಡಿಸುವಂತ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ವಾಸ್ತವವಾಗಿ 18 ವರ್ಷಗಳ ನಂತರ ಮಗನೇ ಮುಂದೆ ನಿಂತು ತನ್ನ ತಾಯಿಗೆ ಎರಡನೆ ಮದುವೆಯನ್ನು  ಮಾಡಿಸಿದ್ದಾನೆ. ಹಾಗಾಗಿ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಭಾರತದ ಬಾಹ್ಯಾಕಾಶ ತ್ಯಾಜ್ಯ ಕೀನ್ಯಾದ ಗ್ರಾಮವೊಂದರಲ್ಲಿ ಬಿದ್ದಿರುವುದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights