ರಾಜ್ಯ ಸರ್ಕಾರಕ್ಕಿಲ್ಲ ನೆರೆ ಪರಿಹಾರದ ಚಿಂತೆ : ಉಪ ಚುನಾವಣೆಯಲ್ಲಿ ಗೆಲ್ಲಲು ದ.ಕ 8 ವಿಧಾನಸಭೆ ಕ್ಷೇತ್ರಗಳಲ್ಲಿ ಸಭೆ
ರಾಜ್ಯದ ಬಹುತೇಕ ಜಿಲ್ಲೆಗಳು ಅಧಿಕ ಮಳೆಗೆ ತತ್ತರಿಸಿ ಹೋಗಿ ಅಪಾರ ಹಾನಿಯುಂಟಾಗಿದೆ. ಅಪಾರ ಪ್ರಮಾಣದ ಆಸ್ತಿ, ಜನ-ಜಾನುವಾರಗಳು ನೀರು ಪಾಲಾಗಿದೆ. ಇರಲು ಸೂರು ಇಲ್ಲದೆ ಅನೇಕ ಜನ ನಿರ್ಗತಿಕರಾಗಿದ್ದಾರೆ. ಆದ್ರಿನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಪರಿಹಾರಕ್ಕೆ ಕೈ ಚಾಚಿಲ್ಲ. ಹೀಗಿರಾವಾಗ ಸಂತ್ರಸ್ತರಿಗೆ ಪರಿಹಾರ ನೀಡುವತ್ತ ಯೋಚನೆ ಮಾಡಬೇಕಿದ್ದ ರಾಜ್ಯ ಬಿಜೆಪಿ ಸರ್ಕಾರ ಉಪಚುನಾವಣೆ ಬಗ್ಗೆ ಯೋಚನೆ ಮಾಡ್ತಾಯಿದೆ.
ನೆರೆ ಸಂತ್ರಸ್ತರಿಗೆ ನೆರೆ ಪರಿಹಾರ ಕೊಡುವುದಿರಲ್ಲಿ ಬಿಜೆಪಿ ನಾಯಕರುಗಳು ನೆರೆ ಪ್ರದೇಶದತ್ತ ಕಣ್ಣಾಯಿಸಿ ಕೂಡ ನೋಡಿಲ್ಲ. ನಾಮಕಾವಸ್ತೆ ಭೇಟಿ ನೀಡಿ ಪರಿಹಾರ ಕೊಡುವ ಭರವಸೇ ಮಾತ್ರ ನೀಡುತ್ತಿದ್ದಾರೆ. ಹೀಗಿರುವಾಗ ನೆರೆ ಪ್ರದೇಶಗಳ ಸಂತ್ರಸ್ತರ ಕಾಪಾಡುವತ್ತ ಗಮನ ಹರಿಸುವ ಬದಲಿಗೆ ಬಿಜೆಪಿ ಉಪ ಚುನಾವಣೆಯಲ್ಲಿ ತನ್ನ ಸ್ಥಾನ ಗಟ್ಟಿಪಡಿಸಿಕೊಳ್ಳುವ ಯೋಚನೆ ಹಾಕ್ತಾಯಿದೆ. ಎಂಥಹ ದುರ್ಗತಿ ಬಂದೊದಗಿದೆ ನಮ್ಮ ರಾಜ್ಯಕ್ಕೆ ನೋಡಿ.
ಹೌದು.. ಉಪ ಚುನಾವಣೆಯಲ್ಲಿ ಬಿಜೆಪಿಗೆ ಸೋಲಿನ ಭಯ ಶುರುವಾಗಿರುವುದರಿಂದ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ನೇತೃತ್ವದಲ್ಲಿ ದಕ್ಷಿಣ ಕರ್ನಾಟಕದ 8 ವಿಧಾನಸಭೆ ಕ್ಷೇತ್ರಗಳ ಸಭೆ ನಡೆಸಲಾಗುತ್ತಿದೆ. ಅನರ್ಹರ ಶಾಸಕರಿಗೆ ಕಗ್ಗಂಟಾಗಿರುವ ಮೂಲ ಬಿಜೆಪಿಗರೊಂದಿಗೆ ಸಂಜೆ ಐದು ಗಂಟೆಯವರೆಗೂ ಸಭೆ ನಡೆಸಲಾಗಿತ್ತಿದೆ. ಬಿಜೆಪಿ ರಾಜ್ಯಾಧ್ಯಕ ನಳೀನ್ ಕ್ಷೇತ್ರದ ಪ್ರಮುಖರು, ಟಿಕೆಟ್ ಆಕಾಂಕ್ಷಿಗಳ ಜೊತೆ ಸಭೆ ನಡೆಸಲಿದ್ದಾರೆ.
ಆರ್ ಅಶೋಕ್, ಡಾ.ಅಶ್ವತ್ ನಾರಾಯಣ್ ಸೇರಿದಂತೆ ಪ್ರಮುಖರು ಭಾಗಿಯಾಗಲಿದ್ದು, ಸಭೆಯ ಬಳಿಕ ಸಂಜೆ ಆರು ಗಂಟೆಗೆ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಲಾಗುವುದು. ಉಪಚುನಾವಣೆಯ ಸಿದ್ಧತೆ ಕುರಿತು ಕೋರ್ ಕಮಿಟಿಯಲ್ಲಿ ಚರ್ಚೆ ಮಾಡುತ್ತದೆ. ಜೊತೆಗೆ ಅನರ್ಹ ಭವಿಷ್ಯ ಕೋರ್ಟ್ ನಲ್ಲಿ ಏನಾಗತ್ತೆ ಎನ್ನುವುದರ ಮೇಲೆ ಬಿಜೆಪಿ ನಾಯಕರ ಮುಂದಿನ ತೀರ್ಮಾನವಾಗಿರುತ್ತದೆ. ಬಂಡಾಯವೆದ್ದ ಮೂಲ ಬಿಜೆಪಿಗರ ಸಮಾಧಾನ ಮಾಡುವ ಬಗ್ಗೆಯು ಇಂದಿನ ಕೋರ್ ಕಮಿಟಿಯಲ್ಲಿ ಚರ್ಚಿಸಿ ನಿರ್ಧಾರ ಮಾಡಲಿದೆ.
ನಳೀನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಮೊದಲ ಉಪಚುನಾವಣೆ ಸವಾಲು ಎದುರಿಸುತ್ತಿದ್ದು, ಜಾಗುರೂಕತೆಯಿಂದ ನಿಭಾಯಿಸುತ್ತಿದ್ದಾರೆ.
ಆದರೆ ಈ ಸಭೆ ಗೈರಾಗಬೇಕಿದ್ದ ಸಿಎಂ ಯಡಿಯೂರಪ್ಪ, ಕಟೀಲ್ ಅನರ್ಹ ಕ್ಷೇತ್ರಗಳಿಗೆ ಎರಡೇರಡು ಹೆಸರು ಕಳಿಸಲು ಮುಂದಾಗಿದ್ದಾರೆ ಎನ್ನುವ ಮಾಹಿತಿ ಗೊತ್ತಾಗ್ತಿದ್ದಂತೆಯೆ ದಿಢೀರ್ ಅಂತಾ ಬಿಜೆಪಿ ಕಚೇರಿಗೆ ಆಗಮಿಸಿದ್ದಾರೆ.
ಕೇಂದ್ರ ಚುನಾವಣಾ ಸಮಿತಿಗೆ ಅನರ್ಹ ಶಾಸಕರ ಹೆಸರಿನೊಂದಿಗೆ ಮತ್ತೊಂದು ಹೆಸರು ಸೇರಿಸಲು ಮುಂದಾಗಿದ್ದ ಕಟೀಲ್ ಗೆ ಒಂದು ಕ್ಷೇತ್ರಕ್ಕೆ ಒಂದೇ ಹೆಸರು, ಅದೂ ಅನರ್ಹ ಶಾಸಕರ ಹೆಸರು ಮಾತ್ರ ನಿಗದಿ ಮಾಡುವಂತೆ ಬಿಎಸ್ ಯಡಿಯೂರಪ್ಪ ತಾಕೀತು ಮಾಡಿದ್ದಾರೆ.