ಲಾಕ್‌ಡೌನ್ ನಿರುದ್ಯೋಗ: ಉದ್ಯೋಗ ಸೃಷ್ಟಿಗೆ MNREGA ಒಂದೇ ಮಾರ್ಗವಾ?

ಕೊರೊನಾ ಲಾಕ್‌ಡೌನ್‌ನಿಂದಾಗಿ ವಲಸೆ ಕಾರ್ಮಿಕರು ತಮ್ಮೂರುಗಳಿಗೆ ಮರಳುತ್ತಿದ್ದಾರೆ. ಕರ್ನಾಟಕದಲ್ಲಿ ಕಲ್ಯಾಣ ಕರ್ನಾಟಕ ಜಿಲ್ಲೆಯ ಜನರು ಗಣನೀಯವಾಗಿ ತಮ್ಮೂರು ಸೇರಿಸಿದ್ದಾರೆ.  ಇದರಿಂದಾಗಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MNREGA) ಯೋಜನೆಯಡಿ ಹೆಚ್ಚಿನ ಉದ್ಯೋಗಗಳನ್ನು ಒದಗಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ವ್ಯಕ್ತಿ ದಿನಗಳನ್ನು ರಚಿಸುವ ಜವಾಬ್ದಾರಿ ಇದೆ.

ಈ ಯೋಜನೆ ಸುತ್ತಲೂ ಹಲವಾರು ಸಮಸ್ಯೆಗಳಿರುವುದು ಒಂದೆಡೆಯಾದರೆ, ಯೋಜನೆಯಡಿಯಲ್ಲಿ ಎಲ್ಲರಿಗೂ ಉದ್ಯೋಗ ಸಿಗುವುದಿಲ್ಲ ಎಂಬುದು ವಾಸ್ತವ.

ಮರು ವಲಸೆಯ ಬಂದಿರುವ ಬಹು ಸಂಖ್ಯೆಯ ಎಲ್ಲರಿಗೂ ಒಂದೇ ಯೋಜನೆಯಡಿಯಲ್ಲಿ ಉದ್ಯೋಗವನ್ನು ಸೃಷ್ಟಿಸಲು ಸರ್ಕಾರಕ್ಕೆ ಅಸಾಧ್ಯವಾಗಿದೆ. ನರೇಗಾ ಉದ್ಯೋಗ ಸೃಷ್ಟಿಸುವ ಪ್ರಮುಖ ಭಾಗವಾಗಿದ್ದರೂ, ಇಂದಿನ ಸಂದರ್ಭದಲ್ಲಿ ಅದು ಉದ್ಯೋಗ ಸೃಷ್ಟಿಗೆ ಪೂರಕವಾಗಿರುತ್ತದೆ ಅಷ್ಟೇ.

Nirmala Sitharaman: MNREGA wage increased by Rs 2000 for 5 crore ...

ರಿಯಾಲಿಟಿ ಪರಿಶೀಲನೆಯ ಸಮಯದಲ್ಲಿ, ಕೆಲವರು ಪರ್ಯಾಯ ಉದ್ಯೋಗಗಳನ್ನು ಕಂಡುಕೊಂಡಿದ್ದಾರೆ ಹಾಗೂ ಹುಡುಕುತ್ತಿದ್ದಾರೆ. ಆದರೂ, ಕೆಲವು ಸಂದರ್ಭಗಳಲ್ಲಿ ಪದವೀಧರರು ಸಹ ಇತರ ಉದ್ಯೋಗಗಳಿಲ್ಲದೆ ನರೇಗಾವನ್ನೇ ಅವಲಂಬಿಸುತ್ತಿದ್ದಾರೆ. ಅದಲ್ಲದೆ, ಹಳ್ಳಿಗಳ ಮಟ್ಟದಲ್ಲಿ ಭ್ರಷ್ಟಾಚಾರ ಮತ್ತು ಅಸಹಕಾರವಿದೆ ಎಂದು ರೈತ ಸಂಘಟನೆಗಳು ದೂರುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ, ದೊಡ್ಡ ನಗರಗಳಿಂದ ಮರಳಿದ ಕಾರ್ಮಿಕರನ್ನು ನರೇಗಾ ಮೂಲಕ ಉದ್ಯೋಗ ನೀಡಲು ವ್ಯಾಪಕ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಾರೆ. “ಊರುಗಳಿಗೆ ಮರಳಿರುವ ಅಂದಾಜು 6,000 ಕಾರ್ಮಿಕರು ಸೇರಿದಂತೆ ಒಂದು ತಿಂಗಳಲ್ಲಿ 9,000 ಜಾಬ್ ಕಾರ್ಡ್‌ಗಳನ್ನು ನೀಡಿದ್ದೇವೆ. ಮೇ 26 ರವರೆಗೆ ನಾವು ದಿನಕ್ಕೆ 90,000 ವ್ಯಕ್ತಿ ದಿನಗಳನ್ನು ನಿಗದಿ ಮಾಡಿದ್ದೇವೆ” ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ವಿ. ರಾಜೇಂದ್ರ.

ಲಾಕ್ ಡೌನ್ ನಂತರ ಜಾಬ್ ಕಾರ್ಡ್‌ಗಳ ಬೇಡಿಕೆ ಹೆಚ್ಚಾಗಿದೆ ಮತ್ತು ಇದರ ಪರಿಣಾಮವಾಗಿ ನರೇಗಾ ಅಡಿಯಲ್ಲಿ ಉದ್ಯೋಗ ಪಡೆಯಲು ಮುಂದಾಗಿದ್ದಾರೆ, ಉದ್ಯೋಗಕ್ಕಾಗಿ ಬೇಡಿಕೆ ಹೆಚ್ಚಾಗಿದೆ ಎಂದು ಧಾರವಾಡ ಜಿಲ್ಲಾ ಪಂಚಾಯತ್ ಸಿಇಒ ಬಿ.ಸಿ.ಸತೀಶ್‌ ತಿಳಿಸಿದ್ದಾರೆ.

ಸಮಸ್ಯೆಗಳು ಮುಂದುವರೆಯುತ್ತಿವೆ

ನರೇಗಾ ಯೋಜನೆಯಡಿಯಲ್ಲಿನ ಸಮಸ್ಯೆಗಳು ಉಳಿದಿವೆ. ಗ್ರಾಮ ಮಟ್ಟದ ಅಧಿಕಾರಿಗಳು ಈ ಯೋಜನೆಯ ಬಗ್ಗೆ ಉತ್ಸಾಹ ತೋರುತ್ತಿಲ್ಲ ಎಂದು ಕಾರ್ಯಕರ್ತರು ದೂರಿದ್ದಾರೆ.

“ಕೊರೊನಾ ಭಯದಿಂದಾಗಿ, ಹೆಚ್ಚಿನ ಅಧಿಕಾರಿಗಳು ಉದ್ಯೋಗದ ಪರಿಶೀಲನೆ ಅಥವಾ ಕಾರ್ಮಿಕರನ್ನು ಭೇಟಿಯಾಗುವುದನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದ ಹಳ್ಳಿಗಳಲ್ಲಿ ನರೇಗಾ ಕೆಲಸಗಳನ್ನು ಪ್ರಾರಂಭಿಸಲು ಹಿಂದೆಸರಿಯುತ್ತಿದ್ದಾರೆ. ಜನರು ಕೆಲಸ ಅರಸಿ ಪಂಚಾಯತ್ ಕಚೇರಿಗಳಿಗೆ ಹೋದಾಗ ಅವರನ್ನು ವಾಪಸ್ ಕಳುಹಿಸಲಾಗುತ್ತದೆ” ಎಂದು ಮಹಾಲಕ್ಷ್ಮಿ ಸ್ತ್ರೀಶಕ್ತಿ ಸಂಘದ ಭಾರತಿ ಕದಮ್ ಹೇಳಿದ್ದಾರೆ.

MNREGA world's largest public works program in world, says Wordl ...

“ಕೆಲವು ಅಧಿಕಾರಿಗಳು ಅವರು ಕೊರೊನಾ ಸಂಬಂಧಿತ ಕೆಲಸಗಳಲ್ಲಿ ನಿರತರಾಗಿದ್ದಾರೆ. ಕ್ವಾರಂಟೈನ್ ಕೇಂದ್ರಗಳನ್ನು ಸ್ಥಾಪಿಸುವ ಅಥವಾ ಮನೆ-ಮನೆ ಆರೋಗ್ಯ ಸಮೀಕ್ಷೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದು, ನರೇಗಾ ವಿಚಾರದಲ್ಲಿ ಅಧಿಕಾರಿಗಳು ಗಂಭೀರವಾಗಿಲ್ಲ”ಎಂದು ಜಾಗೃತ ಮಹಿಳಾ ಒಕ್ಕೂಟದ ಶರದಾ ಗೋಪಾಲ್ ಅವರು ಹೇಳಿದರು.

“ಕೆಲವು ಹಳ್ಳಿಗಳಲ್ಲಿ ಅಧಿಕಾರಿಗಳು ಕಾರ್ಮಿಕರ ಹೆಸರು ನೊಂದಣಿ ಮಾಡಿಸಿಕೊಳ್ಳಲು ಪ್ರತಿಯೊಬ್ಬರಿಗೂ 20 ರೂಗಳ ಬೇಡಿಕೆ ಇಡುತ್ತಾರೆ. ಐದು ಕಾರ್ಮಿಕರು ಒಟ್ಟುಗೂಡಿ 100 ರೂ ಕೊಟ್ಟು ನೊಂದಣಿ ಮಾಡಿಸಿಕೊಳ್ಳಬೇಕಾಗಿದೆ. ಈ ಬಗ್ಗೆ ಎಷ್ಟೇ ದೂರುಗಳನ್ನು ಕೊಟ್ಟರೂ ಉಪಯೋಗವಾಗಿಲ್ಲ” ಕೂಲಿಕಾರರು ಆರೋಪಿಸಿದ್ದಾರೆ.

ಪರ್ಯಾಯ ಉದ್ಯೋಗಗಳು

ಜಾಬ್ ಕಾರ್ಡ್‌ಗಳಿಗಾಗಿ ಕಾಯುತ್ತಿರುವವರ ಮಧ್ಯೆ, ಕೆಲವು ಜನರು ಪರ್ಯಾಯ ಉದ್ಯೋಗಗಳನ್ನು ಹುಡುಕಿಕೊಂಡಿದ್ದಾರೆ. ಕಟ್ಟಡ ಕಾರ್ಮಿಕ ಕೆಲಸ, ಗಾರೆ ಕೆಲಸ, ವಿದ್ಯುತ್, ಕೊಳಾಯಿ ಮತ್ತು ಫ್ಯಾಬ್ರಿಕೇಶನ್‌ನಂತಹ ಪರ್ಯಾಯ ಉದ್ಯೋಗಗಳನ್ನು ಸುತ್ತಮುತ್ತಲಿನ ನಗರ ಹಾಗೂ ಹಳ್ಳಿಗಳಲ್ಲಿ ಹುಡುಕಿಕೊಂಡು ದುಡಿಯುತ್ತಿದ್ದಾರೆ. ಆದರೆ, ಹಳ್ಳಿ ಪ್ರದೇಶಗಳಲ್ಲಿ ಇಂತಹ ಕೆಲಸಗಳೂ ವಿರಳ. ಹಾಗಾಗಿ, ಲಾಕ್‌ಡೌನ್‌ ಮುಗಿಯುತ್ತಿದ್ದಂತೆಯೇ ಮತ್ತೆ ಬೆಂಗಳೂರು, ಮುಂಬೈನಂತಹ ಪಟ್ಟಣಗಳಿಗೆ ಪುನಃ ವಲಸೆ ಹೋಗಲು ಸಿದ್ದರಾಗಿದ್ದಾರೆ. ಅವರಿಗೆ ನರೇಗಾ ಅಡಿಯಲ್ಲೂ ಅಗತ್ಯವಿರುವಷ್ಟು ದುಡಿಮೆ ಸಾಧ್ಯವಿಲ್ಲ ಎಂದೆನಿಸಿದೆ.

ಮತ್ತೂ ಕೆಲವರು ರೈತರಿಂದ ನೇರವಾಗಿ ಹಣ್ಣುಗಳನ್ನು ಖರೀದಿಸಿ  ಹೆದ್ದಾರಿಗಳ ಬದಿಯಲ್ಲಿ ಮಾರಾಟು ಮಾಡುತ್ತಿದ್ದಾರೆ. ಸದ್ಯದ ತಾತ್ಕಾಲಿಕ ದುಡಿಮೆಯನ್ನು ಅದು ಒದಗಿಸಿದೆ. ಆದರೆ, ಮುಂದಿನ ದಿನಗಳಲ್ಲಿ ಅದೂ ಕಷ್ಟವೇ ಆಗಿದೆ. ಲಾಕ್‌ಡೌನ್‌ ಸಡಿಲಿಕೆಯಾಗಿ ಎಲ್ಲವೂ ತೆರೆದುಕೊಂಡಾಗ ವ್ಯಾಪಾರ ದುಡಿಮೆ ನಿಂತುಹೋಗಬಹುದು ಎಂಬ ಆತಂಕದಲ್ಲಿಯೂ ಇದ್ದಾರೆ.

ಹಿರಿಯ ಪತ್ರಕರ್ತ ದೌಲತ್ರೈ ವಾಡ್ವಾಡಗಿ ಅವರ ಪ್ರಕಾರ, ವಲಸೆ ಕಾರ್ಮಿಕರಿಗೆ ಉತ್ತಮ ಆಯ್ಕೆಯೆಂದರೆ ನರೆಗಾ ಮಾತ್ರ. ಏಕೆಂದರೆ ಕೇವಲ 20% ಕಾರ್ಮಿಕರಿಗೆ ಕಲ್ಲುಗಣಿಗಳಲ್ಲಿ ಮತ್ತು ಕೃಷಿ ಚಟುವಟಿಕೆಗಳಲ್ಲಿ ಉದ್ಯೋಗ ಸಿಗುತ್ತದೆ. ಈ ಉದ್ಯೋಗಗಳು ಎಲ್ಲರ ಅಗತ್ಯಗಳನ್ನೂ ಪೂರೈಸಲಾರದು. ಹಾಗಾಗಿ ನರೇಗಾಗೇ ಹೆಚ್ಚಿನ ಒತ್ತುಕೊಡಬೇಕು ಎಂದು ಅವರು ಹೇಳಿದ್ದಾರೆ.

ಲಾಕ್‌ಡೌನ್‌ ನಂತರದಲ್ಲಿ ಹೆಚ್ಚುತ್ತಿರುವ ಬೇಡಿಕೆ

ಇದೆಲ್ಲದರ ಮದ್ಯೆಯೂ, ಕೊರೊನಾ ಭೀತಿಯಿಂದ ಮತ್ತೆ ನಗರಗಳಿಗೆ ಮರಳಲು ಹಲವಾರು ವಲಸೆ ಕಾರ್ಮಿಕರು ಹಿಂದೆಸರಿಯುತ್ತಿದ್ದಾರೆ. ತಮ್ಮೂರುಗಳಲ್ಲಿಯೇ ಉದ್ಯೋಗ  ಹುಡುಕಲು ಸಿದ್ದರಾಗಿದ್ದಾರೆ. ಅವರೆಲ್ಲರೂ ನರೆಗಾ ಮೇಲೆ ಅವಲಂಬಿತರಾಗಿದ್ದಾರೆ. ಅದಕ್ಕಾಗಿ ಜಾಬ್‌ ಕಾರ್ಡ್‌ ಹಾಗೂ ನರೆಗಾಗೆ ನೊಂದಣಿ ಮಾಡಿಸಿಕೊಂಡು ಉದ್ಯೋಗಕ್ಕಾಗಿ ಕಾಯುತ್ತಿದ್ದಾರೆ.

ಉಜ್ವಲ ಭವಿಷ್ಯದ ಕನಸು ಕಂಡಿದ್ದ, ಪದವಿ ಪಡೆದ ಪದವೀಧರರೂ ಉದ್ಯೋಗ ಸಿಗದೆ ನರೆಗಾ ಅಡಿಯಲ್ಲಿ ಕೆಲಸ ಮಾಡಲು ಸ್ವಯಂಪ್ರೇರಿತರಾಗಿದ್ದಾರೆ. ಅವರಲ್ಲಿ ಕೆಲವರು ಈಗಾಗಲೇ “ವಿವಿಧ ಖಾಸಗಿ ಕಂಪನಿಗಳಲ್ಲಿ ಮಾರಾಟ ಸಿಬ್ಬಂದಿ, ಗುಮಾಸ್ತರು ಮತ್ತು ಅಕೌಂಟೆಂಟ್‌ಗಳಾಗಿ ಕೆಲಸ ಮಾಡಿದ್ದವರೂ ಈಗ ಯೋಜನೆಯಡಿ ದೈಹಿಕ ಕೆಲಸಗಳನ್ನು ಮಾಡುತ್ತಿದ್ದಾರೆ.

Extending MGNREGA to urban areas will create 50 million jobs ...

ಅಜಿಮ್ ಪ್ರೇಮ್‌ ಜಿ ವಿಶ್ವವಿದ್ಯಾಲಯವು ಲಾಕ್‌ಡೌನ್‌ ಸಂದರ್ಭದಲ್ಲಿ ನಡೆಸಿದ ಸರ್ವೆಯ ಪ್ರಕಾರ, ಕರ್ನಾಟಕದಲ್ಲಿ ಒಟ್ಟು 72% (ಅಂದರೆ 100ರಲ್ಲಿ 70) ಜನರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ಅವರೆಲ್ಲರೂ ಮತ್ತೆ ಉದ್ಯೋಗವನ್ನು ಅರಸಿದ್ದಾರೆ. ಇಷ್ಟು ದೊಡ್ಡ ಪ್ರಮಾಣದ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಸೃಷ್ಟಿಯ ಸವಾಲಾಗಿದೆ.

ಖಾಸಗೀ ಕಂಪನಿಗಳು ಉದ್ಯೊಗಿಗಳ ಸಂಖ್ಯೆಯನ್ನು ಕಡಿಮೆಗೊಳಿಸಲು ಮುಂದಾಗಿದ್ದಾರೆ.  ಲಾಕ್‌ಡೌನ್‌ಗೂ ಮುಂಚೆಯೇ ಹಲವಾರು ಮಧ್ಯಮ ಪ್ರಮಾಣದ ಆಟೋ-ಮೊಬೈಲ್ಸ್‌ ಕೈಗಾರಿಕೆಗಳು ಮುಚ್ಚಿದ್ದವು, ಮುಂದೆಯೂ ಈ ಸರಣಿ ಮುಂದುವರೆಯಲಿದೆ.  ಈ ಎಲ್ಲಾ ಕಾರಣಗಳಿಂದಾಗಿ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಗೆ ನಗೆರಾ ಯೋಜನೆ ಅಗತ್ಯವಾಗಿದೆ.

ಆದರೂ ಸ್ಥಳೀಯ ಅಧಿಕಾರಿಗಳ ಭ್ರಷ್ಟಾಚಾರ ಹಾಗೂ ನಿರುತ್ಸಾಹದಿಂದಾಗಿ ಯೋಜನೆಯ ಫಲಾನುಭವಿಗಳ ಸಂಖ್ಯೆ ಹಲವೆಡೆ ಕಡಿಮೆ ಪ್ರಮಾಣದಲ್ಲಿದೆ. ಎಲ್ಲಾ ಸಮಸ್ಯೆಗಳನ್ನು ಸರಿಪಡಿಸುವುದರ ಜೊತೆಗೆ ಗ್ರಾಮೀಣ ಮಟ್ಟದಲ್ಲಿ ಉದ್ಯೋಗ ಸೃಷ್ಟಿಸುವ ಸವಾಲು ಸರ್ಕಾರದ ಮುಂದಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights