ವಾಂತಿ ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಗು ಸಾವು : ಪಾಲಕರು ಪೊಲೀಸರ ವಶ
ವಾಂತಿ ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಗು ಸಾವನ್ನಪ್ಪಿದ ಘಟನೆ ರಾಯಚೂರಿನ ರಿಮ್ಸ್ ನಲ್ಲಿ ನಡೆದಿದೆ.
ಯಶೋದಾ ಎಂಬ ಎರಡು ವರ್ಷದ ಮಗು ಸಾವನ್ನಪ್ಪಿದೆ. ಲಿಂಗಸಗೂರು ತಾಲೂಕಿನ ಮಾಚನೂರಿನ ಯಶೋದಾ, ನಿನ್ನೆ ರಾಯಚೂರಿನ ರಿಮ್ಸ್ ಗೆ ದಾಖಲಾಗಿದ್ದರು. ದಾಖಲಾದ ಸ್ವಲ್ಪ ಸಮಯಕ್ಕೆ ಮಗು ಸಾವನ್ನಪ್ಪಿದೆ. ಮಗು ಸಾವಿಗೆ ವೈದ್ಯರ ನಿರ್ಲಕ್ಷ್ಯ ವೇ ಕಾರಣ ಎಂದು ಪಾಲಕ ಆರೋಪ ಮಾಡುತ್ತಿದ್ದು, ಮಗು ಸಾವಿನ ನಂತರ ಗದ್ದಲ ಮಾಡಿದ್ದಾರೆ ಎಂಬ ಕಾರಣಕ್ಕೆ ಮಗುವಿನ ಚಿಕ್ಕಪ್ಪನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಾರ್ಕೆಟ್ ಯಾರ್ಡ್ ಪೊಲೀಸರಿಂದ ಚಿಕ್ಕಪ್ಪ ನರಸಣ್ಣನನ್ನು ವಶಕ್ಕೆ ಪಡೆಯಲಾಗಿದೆ. ಈ ಘಟನೆಯ ಬಗ್ಗೆ ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.