ವಿಜಯಪುರ ಕಾಂಗ್ರೆಸ್ ನಾಯಕಿ ರೇಶ್ಮಾ ಪಡೇಕನೂರ ಕೊಲೆ ಆರೋಪಿ ಪತ್ನಿಗೆ ಟಿಕೆಟ್….
ನೆನ್ನೆಯಷ್ಟೇ ಮಹಾರಾಷ್ಟ ಹಾಗೂ ಹರಿಯಾಣದಲ್ಲಿ ವಿಧಾನಸಭೆ ಚುನಾವಣೆಗೆ ಡೇಟ್ ಫಿಕ್ಸ್ ಆಗುತ್ತಿದ್ದಂತೆ ಚುನಾವಣೆ ಕಣಕ್ಕಿಳಿಯಲು ಅಭ್ಯರ್ಥಿಗಳ ಆಯ್ಕೆಗೆ ಸಿದ್ದತೆ ನಡೆಯುತ್ತಿದೆ.
ಇದರ ನಡುವೆ ವಿಜಯಪುರ ಕಾಂಗ್ರೆಸ್ ನಾಯಕಿ ರೇಶ್ಮಾ ಪಡೇಕನೂರ ಕೊಲೆ ಆರೋಪಿ ಪತ್ನಿಗೆ ಮಾಹಾರಾಷ್ಟ್ರದ ವಿಧಾನಸಭೆ ಚುನಾವಣೆಗೆ ಟಿಕೆಟ್ ನೀಡಲಾಗಿದೆ. ಮಹಾರಾಷ್ಟ್ರದ ಸೋಲಾಪುರ ದಕ್ಷಿಣ ಕ್ಷೇತ್ರದಿಂದ ತೌಫಿಕ ಶೇಖ್ ಉರ್ಫ್ ಪೈಲ್ವಾನ್ ಪತ್ನಿ ಅಖಾಡಕ್ಕೆ ಇಳಿಯಲಿದ್ದಾರೆ.
ಕಾಂಗ್ರೆಸ್ ನಾಯಕಿ ರೇಷ್ಮಾ ಪಡೆಕನೂರ ಹತ್ಯೆಯ ಆರೋಪಿ ತೌಫಿಕ್ ಶೇಖ್ ಪೈಲ್ವಾನ್ ಪತ್ನಿಗೆ ಟಿಕೆಟ್ ಫೈನಲ್ ಆಗಿದೆ.
ಮಾಹಾರಾಷ್ಟ್ರದ ವಿಧಾನಸಭೆ ಚುನಾವಣೆಯಲ್ಲಿ ಸೋಲಾಪುರ ದಕ್ಷಿಣ ಮತಕ್ಷೆತ್ರದ ಎಐಎಂಐಎಂ ಅಭ್ಯರ್ಥಿಯಾಗಿ ಸುಫೀಯಾ ತೌಫಿಕ್ ಶೇಖ್ ಕಣಕ್ಕೆ ಇಳಿದಿದ್ದಾರೆ.