ಶಿಕ್ಷಕರ ಕೊರತೆ : ಶಾಸಕರೆದುರೇ ಬಿಇಒ ಗೆ ಫೋನಿನಲ್ಲಿ ತರಾಟೆ ತೆಗೆದುಕೊಂಡ ಬಾಲಕಿ…!
ಶಾಲೆ ಶಿಕ್ಷಕರ ಕೊರತೆ ಇರುವ ಹಿನ್ನೆಲೆ ಬಾಲಕಿಯೊಬ್ಬಳ ಶಾಸಕರೆದುರೇ ಬಿಇಒ ಗೆ ಫೋನಿನಲ್ಲಿ ತರಾಟೆ ತೆಗೆದುಕೊಂಡ ಘಟನೆ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಮಲ್ಲಟದಲ್ಲಿ ನಡೆದಿದೆ.
ಮಲ್ಲಟದ ಸರಕಾರಿ ಪ್ರೌಢ ಶಾಲೆಯಲ್ಲಿ ಕಳೆದು ಮೂರು ವರ್ಷದಿಂದ ಶಿಕ್ಷಕರೇ ಇಲ್ಲಿ ೧೦೦ ವಿದ್ಯಾರ್ಥಿಗಳಿದ್ದಾರೆ, ಆದರೆ ಇಲ್ಲಿ ಶಿಕ್ಷಕರೇ ಇರಲಿಲ್ಲ. ಈಗ ಅತಿಥಿ ಶಿಕ್ಷಕರ ನೇಮಕ ಮಾಡಲಾಗಿದೆ, ಶಿಕ್ಷಕರ ಕೊರತೆ ಹಿನ್ನೆಲೆ ಮಲ್ಲಟದ ಮೋನಿಕಾ ಎಂಬ ವಿದ್ಯಾರ್ಥಿನಿ ಶಾಸಕರಿಗೆ ಫೋನು ಮಾಡಿ ಕರೆಸಿಕೊಂಡಿದ್ದು ಅಲ್ಲದೆ ಶಾಸಕರ ಫೋನಿನಲ್ಲಿಯೇ ಬಿಇಒ ಗೆ ತರಾಟೆಗೆ ತೆಗೆದುಕೊಂಡಿದ್ದಾಳೆ.
ಒಂದು ದಿನದಲ್ಲಿ ಶಾಲೆಗೆ ಭೇಟಿ ನೀಡಿ ಶಿಕ್ಷಕರ ನಿಯೋಜಿಸಬೇಕು ಇಲ್ಲದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾಳೆ. ವಿದ್ಯಾರ್ಥಿನಿ ತರಾಟೆಯಿಂದಾಗಿ ಬಿಇಒ ವೆಂಕಟೇಶ ಶಾಲೆ ಭೇಟಿ ನೀಡಿ ಅತಿಥಿ ಶಿಕ್ಚಕರು ಹಾಗು ವಿಷಯವಾರು ಶಿಕ್ಷಕರ ನಿಯೋಜಿಸಿದ್ದಾರೆ. ಇದು ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಮಂಜೂರಾದ ಶಾಲೆಯಾಗಿದ್ದು ಈ ಶಾಲೆಗೆ ಶಿಕ್ಷಕರ ಹುದ್ದೆ ಸೃಷ್ಢಿಗೆ ಡಿಡಿಪಿಐ ಹಾಗು ಕಲಬುರಗಿ ಶಿಕ್ಷಣ ಆಯುಕ್ತರ ಗಮನಕ್ಕೆ ತರಲಾಗಿದೆ.