ಸಂತೆಯಲ್ಲಿ ಕಲ್ಲು ತೂರಿದ ದುಷ್ಕಮಿ೯ಗಳು : ಮೂವರಿಗೆ ಗಾಯ, ೧೨ವಾಹನಗಳು ಜಖಂ…

ಕ್ಷುಲ್ಲಕ ಕಾರಣಕ್ಕೆ ದುಷ್ಕಮಿ೯ಗಳಿಂದ ವಾಹನದ ಮೇಲೆ ಕಲ್ಲು ತೂರಾಟ ಮಾಡಿದ ಘಟನೆ ಬಾಗಲಕೋಟೆ ಜಿಲ್ಲೆಯ ಅಮೀನಗಡದಲ್ಲಿ ನಿನ್ನೆ ನಡೆದಿದೆ.

ದಾರಿ ಬಿಡುವಂತೆ ಕೇಳಿದವರ ಮೇಲೆಯೇ ಸಂತೆ ವ್ಯಾಪಾರಸ್ಥರಿಂದ ಹಲ್ಲೆ ನಡೆದಿದೆ. ಇದರಲ್ಲಿ  ಮೂವರು ಗಾಯಗೊಂಡಿದ್ದು, ೧೨ವಾಹನಗಳು ಜಖಂಗೊಂಡಿವೆ. ರಸ್ತೆ ಪಕ್ಕದಲ್ಲಿಯೇ ನಡೆಯುತ್ತಿದ್ದ ಕುರಿ ಸಂತೆಯಲ್ಲಿ  ವ್ಯಾಪಾರ ವಹಿವಾಟು ನಡೆಸೋ ವೇಳೆ ದಾರಿ ಬಿಡುವಂತೆ ಕೇಳಿದ ಚಾಲಕ ಹಾಗೂ ವ್ಯಾಪಾರಸ್ಥರ ಮಧ್ಯೆ ವಾಗ್ವಾದ ಉಂಟಾಗಿದೆ.

ಈ ವೇಳೆ ದುಷ್ಕಮಿ೯ಗಳಿಂದ ವಾಹನದ ಮೇಲೆ ಕಲ್ಲು ತೂರಾಟ ನಡೆದಿದೆ. ಘಟನೆಯಲ್ಲಿ ಮಹಾಂತೇಶ, ಸಂಗಪ್ಪ, ಸಂಜೀವ ಎಂಬುವವರು ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೋಲಿಸರು ಪರಿಸ್ಥಿತಿ ನಿಯಂತ್ರಿಸು ವೇಳೆ ಕಲ್ಲೆಸೆದ ದುಷ್ಕಮಿ೯ಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಅಮೀನಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights