ಸಂಸದ ತೇಜಸ್ವಿ ಸೂರ್ಯ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಕೊಲೆ ಸ್ಕೆಚ್ ಫೇಲ್ ಆಗಿದ್ದು ಹೇಗೆ..?

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆದಿದ್ದವು. ಆದರೆ, ಸಿಎಎಯಿಂದ ದೇಶದ ಅಲ್ಪಸಂಖ್ಯಾತರಿಗೆ ಯಾವುದೆ ತೊಂದರೆ ಆಗದು ಎನ್ನುವ ಬಗ್ಗೆ ಜಾಗೃತಿ ಮೂಡಿಸಲು ಬೆಂಗಳೂರಿನಲ್ಲಿ ಕಾರ್ಯಕ್ರಮ ಹಮ್ಮಿಕೋಳ್ಳಲಾಗಿತ್ತು. ಈ ವೇಳೆ ಸಂಸದ ತೇಜಸ್ವಿ ಸೂರ್ಯ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಕೊಲೆಗೆ ಸ್ಕೆಚ್ ನಡೆದಿತ್ತು ಎನ್ನುವ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ.

ಡಿ. 22ರಂದು ಟೌನ್​ಹಾಲ್ ಬಳಿ ಸಿಎಎ ಜಾಗೃತಿ ಜಾಥಾ ನಡೆದಿತ್ತು. ಇದರಲ್ಲಿ ತೇಜಸ್ವಿ ಸೂರ್ಯ, ಚಕ್ರವರ್ತಿ ಸೂಲಿಬೆಲೆ ಸೇರಿ ಅನೇಕ ಪ್ರಮುಖರು ಪಾಲ್ಗೊಂಡಿದ್ದರು. ಸಿಎಎ ಜಾಥಾ ಮುಗಿಸಿ ತೆರಳುವಾಗ ಆರ್​ಎಸ್​ಎಸ್​ ಕಾರ್ಯಕರ್ತ ವರುಣ್ ಮೇಲೆ ಜೆ.ಸಿ ನಗರದ ರಸ್ತೆಯಲ್ಲಿ 6 ಜನ ಎಸ್​ಡಿಪಿಐ ಕಾರ್ಯಕರ್ತರಿಂದ ಕೊಲೆಗೆ ಯತ್ನ ನಡೆದಿತ್ತು.

ಆದರೆ ಈ ಪ್ಲಾನ್ ಫೇಲವರ್ ಆಗಿದ್ದು ಹೇಗೆ..? ಅನ್ನೋದನ್ನ ಕೂಡ ಆರೋಪಿಗಳು ವಿಚಾರಣೆ ವೇಳೆ ತಿಳಿಸಿದ್ದಾರೆ. ಆರೋಪಿಗಳ ಟಾರ್ಗೇಟ್  ತೇಜಸ್ವಿ ಸೂರ್ಯ ಹಾಗೂ ಚಕ್ರವರ್ತಿ ಸೂಲಿಬೆಲೆಯನ್ನು ಹತ್ಯೆ ಆಗಿತ್ತು. ಹೀಗಾಗಿ ಅಂದು ಬೆಳಿಗ್ಗೆ 5.30ಕ್ಕೆ ಒಂದೆಡೆ ಸೇರ್ತಾರೆ 6 ಆರೋಪಿಗಳು. ಹತ್ಯೆ ಬಳಿಕೆ ತಮ್ಮ ಮೇಲೆ ಯಾವುದೇ ಅನುಮಾನ ಬಾರದಿರಲು ತಮ್ಮ ಮೊಬೈಲ್ ಫೋನ್ ಗಳನ್ನ ಮನೆಯಲ್ಲಿಯೇ ಬಿಟ್ಟು ಸಮಾವೇಶಕ್ಕೆ ಬಂದಿದ್ದರು. ಬರುವ ಮುನ್ನ ತಮ್ಮ ಬೈಕ್ ಗಳಿಗೆ ಕಪ್ಪು ಬಣ್ಣ ಹಚ್ಚಿ ಜೊತೆಗೆ ನಂಬರ್ ಪ್ಲೇಟ್ ಕೂಡ ಚೇಂಜ್ ಮಾಡಿಸಿದ್ದರು.

ಪ್ಲಾನ್ ನಂತೆ ಸಮಾವೇಶದಲ್ಲಿ 7 ಬಾರಿ ಕಲ್ಲು ಎಸೆಯುತ್ತಾರೆ. ಇದು ಪ್ರತಿಭಟನಾಕಾರರನ್ನು ಚದುರಿಸುವ ಮತ್ತು ಭಯ ಹುಟ್ಟಿಸುವ ತಂತ್ರವಾಗಿತ್ತು. ಭಯ ಹುಟ್ಟಿಸಿದರೆ ಮುಖಂಡರು ಓಡಿ ಹೋಗಲು ಪ್ರಯತ್ನಿಸುತ್ತಾರೆ. ಈ ವೇಳೆ ಅವರನ್ನು ಹಿಡಿದು ತಮ್ಮ ಬಳಿ ಇದ್ದ ಹಲ್ಲೆ ಮಾಡಲು ಸ್ಕೆಚ್ ಹಾಕಿದ್ದರು. ಆದರೆ ಪ್ರತಿಭಟನಾಕಾರರು ಕಲ್ಲು ತೂರಾಟದ ವೇಳೆ ಚದುರಲಿಲ್ಲ. ಪೊಲೀಸ್ ಬಿಗಿ ಬಂದೋಬಸ್ತು ನಡುವೆ ಹಲ್ಲೆ ಮಾಡುವುದು ಕಷ್ಟವಾಗಿ ಹೋಯಿತು.

2 ಬೈಕ್​ಗಳಲ್ಲಿ ಬಂದಿದ್ದ ಆರೋಪಿಗಳು ವರುಣ್ ಮೇಲೆ ರಾಡ್ ಹಾಗೂ ಲಾಂಗ್​ಗಳಿಂದ ಹಲ್ಲೆ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಸಾಧಿಕ್, ಅಕ್ಬರ್ ಸೇರಿ ಆರು ಜನರನ್ನ ಪೊಲೀಸರು ಬಂಧಿಸಿದ್ದರು. ಈ ಆರೋಪಿಗಳ ವಿಚಾರಣೆಯಲ್ಲಿ ಶಾಕಿಂಗ್ ವಿಚಾರ ಬೆಳಕಿಗೆ ಬಂದಿದೆ. ವರುಣ್ ಇವರ ಟಾರ್ಗೆಟ್​ ಆಗಿರಲಿಲ್ಲವಂತೆ. ​ತೇಜಸ್ವಿ ಸೂರ್ಯ ಹಾಗೂ ಚಕ್ರವರ್ತಿ ಸೂಲಿಬೆಲೆಯನ್ನು ಹತ್ಯೆ ಮಾಡುವುದು ನಮ್ಮ ಮುಖ್ಯ ಉದ್ದೇಶ ಆಗಿತ್ತು ಎಂದು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.ಆರೋಪಿಗಳ ಪೈಕಿ ಒಬ್ಬ ಶಿವಾಜಿನಗರದ ನಿವಾಸಿ, ಉಳಿದವರು ಆರ್ ಟಿ ನಗರದ ನಿವಾಸಿಗಳಾಗಿರುತ್ತಾರೆ. ಬಂಧಿತರು ಮುಸ್ಲಿಂ ದರ್ಂದ ಕಟ್ಟಾ ಅನುಯಾಯಿಗಳಾಗಿದ್ದಾರೆ. ಸದ್ಯ ಇವರು ಪೊಲೀಸ್ ವಶದಲ್ಲಿ ಇದ್ದು, ವಿಚಾರಣೆಗೆ ಒಳಪಡಿಸಲಾಗಿದೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.