ಸಖತ್ ಟ್ರೆಂಡ್ ಆದ ವಿಂಟರ್ ಹಿಯರ್ ಮಫ್ಸ್ : ಕಲರ್ ಫುಲ್ ಬ್ಯಾಂಡ್ ಗೆ ಮಕ್ಕಳು ಫಿದಾ

ಚುಮು… ಚುಮು… ಚಳಿ… ಬೆಚ್ಚಗಿರಬೇಕು ಎನ್ನುವ ಮನಸ್ಸು. ಮನಸ್ಸು ಬಯಸುವಂತೆಯೇ ಇಷ್ಟವಾಗುವ ಉಡುಪುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಚಳಿಗಾಲ ಬಂತೂ ಅಂದ್ರೆ ಸ್ವೆಟರ್, ಜರ್ಕಿನ್, ಥರ್ಮಲ್ ವೇರುಗಳಿಗೆ ಬಹು ಬೇಡಿಕೆ. ಜೊತೆಗೆ ರಗ್ಗು, ಕರಿಕಂಬಳಿಗಳಿಗೂ. ದೊಡ್ಡವರಿಗಿಂತ ಚಿಕ್ಕವರಿಗೆ ಇಂಥಹ ವಿಂಟರ್ ಕಲೆಕ್ಷನ್ಸ್ ಜಾಸ್ತಿ. ಯಾಕೆಂದ್ರೆ ವೆರಾಯಿಟಿ ಕಿಡ್ಸ್ ವಿಂಟರ್ ವೇರ್, ಹ್ಯಾಂಡ್ ಗ್ಲೌಸ್, ಸಾಕ್ಸ್, ಕ್ಯಾಪ್ ಸಾಕಷ್ಟು ಕಲೆಕ್ಷನ್ಸ್ ಸಿಗುತ್ತಿವೆ. ಜೊತೆ ಜೊತೆಗೆ ಈ ಬಾರಿ ಹಿಯರ್ ಮಫ್ಸ್ ಮಕ್ಕಳ ಅಚ್ಚುಮೆಚ್ಚಿನ ವಿಂಟರ್ ಹೆಡ್ ಬ್ಯಾಂಡ್ ಸ್ಮಾರ್ಟ್ ಕ್ಯಾಪ್ಸ್ ಕೂಡ ಒಂದು.

 

ಏನಿದು ಅಂದ್ರೆ..? ಎಷ್ಟೋ ಜನಕ್ಕೆ ವಿಂಟರ್ ಹೆಡ್ ಬ್ಯಾಂಡ್ ಸ್ಮಾರ್ಟ್ ಕ್ಯಾಪ್ಸ್ ಅಥವಾ ಹಿಯರ್ ಮಫ್ಸ್ ಬಗ್ಗೆ ಗೊತ್ತೇ ಇಲ್ಲ. ಮಾರುಕಟ್ಟೆಗೆ ಹೋಗುವಂತಹ ಪ್ರತಿಯೊಬ್ಬರಿಗೂ ಈ ಹಿಯರ್ ಮಫ್ಸ್ ಬಗ್ಗೆ ಬಹುತೇಕ ಗೊತ್ತಿರುತ್ತದೆ. ಚಳಿಗಾಲಕ್ಕೆ ಬೆಚ್ಚಗಿರಲು ಹಿಯರ್ ಫೋನ್ ನಂತೆ ಕಿವಿ ಮುಚ್ಚುವಂತೆ ಹಾಕಿಕೊಳ್ಳುವ ಮಫ್ಸ್ ಇದಾಗಿದೆ.

ಮಕ್ಕಳಿಗಂತು ಈ ಮಫ್ಸ್ ತುಂಬಾನೇ ಪ್ರೀತಿ ಸಂಜೆ ಆದ್ರೆ ಸಾಕು ಮಕ್ಕಳು ಮಫ್ಸ್ ಹಾಕಿಕೊಂಡು ಖುಷಿ ಪಡ್ತಾರೆ. ನಾನಾ ಆಕಾರದಲ್ಲಿ, ಕಾರ್ಟೂನ್ ರೂಪದಲ್ಲಿರುವ ಮಫ್ಸ್ ಮಕ್ಕಳನ್ನು ಆಕರ್ಷಿಸುತ್ತಿವೆ. ಕೇವಲ ಮಕ್ಕಳು ಮಾಥ್ರವಲ್ಲದೇ ಹಿರಿಯ ನಾಗರೀಕರಿಂದ ಹಿಡಿದು  ಚಿಕ್ಕಮಕ್ಕಳವರೆಗೂ ಈ ಮಫ್ಸ್ ಅಚ್ಚುಮೆಚ್ಚು.

ಚಳಿಗಾಲದಲ್ಲಿ ದೇಹಕ್ಕೆ ಚಳಿಯಾದರೂ ಕೂಡ ಕೈ, ಕಾಲು ಮತ್ತು ಕಿವಿ ಬೆಚ್ಚಗಿರಬೇಕು. ಕೈಗೆ ಹ್ಯಾಂಡ್ ಗ್ಲೌಸ್, ಕಾಲಿಗೆ ಸಾಕ್ಸ್ ಹಾಕಿದ ಬಳಿಕ ಕಿವಿಗೆ ಚೂರು ಕಾಟನ್ ಇಟ್ಟುಕೊಳ್ಳುವುದು ರೂಢಿಯಲ್ಲಿತ್ತು. ಆದ್ರೀಗ ಹಿಯರ್ ಮಫ್ಸ್ ಹಾಕಿಕೊಳ್ಳುವುದು ಟ್ರೆಂಡ್ ಆಗಿದೆ. ನಾನಾ ಶೈಲಿಯ ಹಿಯರ್ ಮಫ್ಸ್ ಎಲ್ಲೆಡೆ ಸದ್ದು ಮಾಡ್ತಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.