ಸಮಾರಂಭದಲ್ಲಿ ಜೇನು ಹುಳಗಳ ಅವಾಂತರ : ಎಂಟು ಜನರಿಗೆ ಗಾಯ
ಸಮಾರಂಭದಲ್ಲಿ ಜೇನು ಹುಳಗಳು ಹಬ್ಬಿ ಸುಮಾರು ಏಳರಿಂದ ಎಂಟು ಜನರಿಗೆ ಗಾಯವಾದ ಘಟನೆ ಕೊಪ್ಪಳದ ಯಲಬುರ್ಗಾದಲ್ಲಿ ನಡೆದಿದೆ.
ಹೌದು.. ಕೊಪ್ಪಳ ಕಟ್ಟಡಗಳ ಅಡಿಗಲ್ಲು ಸಮಾರಂಭದಲ್ಲಿ ಅಡುಗೆ ಮಾಡುವ ಸಮಯದಲ್ಲಿ ಎದ್ದ ಜೇನು ಹುಳಗಳಿಂದ ದೊಡ್ಡ ಅವಾಂತರವೇ ಸೃಷ್ಟಿಯಾಗಿದೆ. ಜೇನು ಹುಳುಗಳು ಕಚ್ಚಿ ಸುಮಾರು ಏಳರಿಂದ ಎಂಟು ಜನರಿಗೆ ಗಾಯವಾದ್ದು, ಯಲಬುರ್ಗಾ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಶಾಸಕ ಹಾಲಪ್ಪ ಆಚಾರ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.