ಸರಕು ಸಾಗಣೆ ಮಾಡುತ್ತಿದ್ದ ಎರಡು ಲಾರಿ ಮುಖಾಮುಖಿ ಡಿಕ್ಕಿ : ಇಬ್ಬರು ಸ್ಥಳದಲ್ಲೇ ಸಾವು..
ಸರಕು ಸಾಗಣೆ ಮಾಡುತ್ತಿದ್ದ ಎರಡು ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಭೀಕರ ಘಟನೆ ಹಾಸನ ಜಿಲ್ಲೆ, ಆಲೂರು ತಾಲ್ಲೂಕಿನ, ಸಿಂಗಾಪುರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ ೭೫ ರಲ್ಲಿ ನಡೆದಿದೆ.
ಒಂದು ಕಂಟೈನರ್ ನಲ್ಲಿದ್ದ ದಿಲೀಪ್ (25) ಚಂದ್ರು(36) ಮೃತರು. ದಿಲೀಪ್, ಸಕಲೇಶಪುರದ ಜಾತಹಳ್ಳಿಯವರು ಚಂದ್ರು, ಹಾಸನ ತಾಲ್ಲೂಕಿನ ಅಂಚೆಹಳ್ಳಿ ನಿವಾಸಿ. ಮತ್ತೊಂದು ಕಂಟೈನರ್ ನಲ್ಲಿದ್ದವರು ಪರಾರಿಯಾಗಿದ್ದಾರೆ.
ಲಾರಿಯೊಳಗೆ ಸಿಲುಕಿರುವ ಮೃತದೇಹ ಹೊರ ತೆಗೆಯಲು ಸ್ಥಳೀಯರು, ಪೊಲೀಸರ ಹರಸಾಹಸ ಪಡುತ್ತಿದ್ದಾರೆ. ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.