ಸಾಲಬಾಧೆ ತಾಳದೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ರೈತ..!
ಸಾಲಬಾಧೆ ತಾಳದೆ ರೈತನೊಬ್ಬ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡದ ನವಲಗುಂದ ತಾಲೂಕಿನ ತಡಹಾಳ ಗ್ರಾಮದಲ್ಲಿ ನಡೆದಿದೆ.
ಉಮೇಶ ಬಳೂಲಿ (46) ಆತ್ಮಹತ್ಯೆ ಮಾಡಿಕೊಂಡ ರೈತ. ಎಸ್.ಬಿ.ಐ, ಕೆವಿಜಿ ಬ್ಯಾಂಕ್ ಸ್ಥಳೀಯ ಸೊಸೈಟಿ ಸೇರಿ 15 ಲಕ್ಷ ಸಾಲಮಾಡಿದ್ದ ಉಮೇಶ್ ಸಾಲ ತೀರಿಸಲಾಗದ ನೋವಿತ್ತು. ಸಾಲದ ಬಗ್ಗೆ ಹೆಂಡತಿ ಪದೇ ಪದೇ ಕೇಳಿದ್ದರಿಂದ ಮನನೊಂದು ಡೆತ್ನೋಟ್ ಬರೆದಿದ್ದು ನೇಣಿಗೆ ಶರಣಾಗಿದ್ದಾರೆ.
ನವಲಗುಂದ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದ್ದು ಪೊಲೀಸರು ವಿಚಾರಣೆ ನಡೆಸಿದ್ದಾರೆ.