ಸಾವಯವ ಕೃಷಿಯಲ್ಲಿ ಬದುಕು ಕಟ್ಟಿಕೊಂಡ ಕಾಫಿನಾಡಿನ ಮಾದರಿ ರೈತ..
ಹತ್ತಾರು ವರ್ಷಗಳ ಕಾಲ ಟೈಲರ್ ವೃತ್ತಿ ಮಾಡಿ, ಇದೀಗ ಸಂಪೂರ್ಣ ಸಾವಯವ ಕೃಷಿ ಹಾಗೂ ಹೈನುಗಾರಿಕೆ ಯಲ್ಲಿ ತಮ್ಮನ್ನ ತಾವು ತೊಡಗಿಸಿಕೊಳ್ಳೋ ಮೂಲಕ ಕಾಫಿನಾಡಿನ ವೀರಣ್ಣ ಅದೆಷ್ಟೋ ರೈತರಿಗೆ ಮಾದರಿಯಾಗಿದ್ದಾರೆ. ರಾಸಾಯನಿಕ ಗೊಬ್ಬರಗಳಿಗೆ ಇವ್ರ ತೋಟದೊಳಕ್ಕೆ ಎಂಟ್ರಿ ಕೊಟ್ಟಿಲ್ಲ, ಸಾವಯವ ಮಾದರಿಯ ಕೃಷಿ ಪದ್ಧತಿಯನ್ನ ಅಳವಡಿಸಿಕೊಂಡು ಬಂಪರ್ ಇಳುವರಿಯನ್ನ ಪಡೀತಾ ನೆಮ್ಮದಿಯ ಜೀವನವನ್ನ ರೂಪಿಸಿಕೊಂಡು ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ.

ಇತ್ತೀಚೆಕೆ ಕೃಷಿಯ ವಿಫಲತೆ ಹಾಗೂ ಸಾಲದ ಸೂಲಕ್ಕೆ ಬಡ್ಡಿ ಕಟ್ಟಲಾರದೇ ಮನನೊಂದ ಅನ್ನದಾತ ನೇಣಿನ ಕುಣಿಕೆಗೆ ಕೊರಳೊಡ್ಡುತ್ತಿದ್ದಾನೆ. ಆದ್ರೆ, ಕಾಫಿನಾಡಿನ ವೀರಣ್ಣ ಎಂಬ ರೈತ ಫುಲ್ ಡಿಫರೆಂಟ್. ಇವರಿಗಿರೋ 16 ಎಕರೆ ಜಮೀನಿನಲ್ಲಿ ವಿವಿಧ ಬೆಳೆ ಬೆಳೆಯೋ ಮೂಲಕ ಮಿಶ್ರ ಬೆಳೆಗಾರನಾಗಿ ಯಶಸ್ವಿ ರೈತನಾಗಿದ್ದಾನೆ. ಇನ್ನು ಹೈನುಗಾರಿಕೆಯಲ್ಲೂ ಯಶಸ್ವಿಯಾಗಿದ್ದಾರೆ ವೀರಣ್ಣ.
ವೀರಣ್ಣ ವಯಸ್ಸು 65ರ ಹಾಸುಪಾಸು. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ವಿಟ್ಲಾಪುರ ನಿವಾಸಿ. ಓದಿರೋದು 9ನೇ ತರಗತಿ. ಮಾಡೋ ಕೆಲಸ ಹೆಮ್ಮೆಯ ಕೃಷಿ. ವೀರಣ್ಣ 30ಕ್ಕೂ ಹೆಚ್ಚು ದೇಸಿಯ ಹಸುಗಳನ್ನು ಸಾಕಿದ್ದಾರೆ. ಅಮೃತ್ ಮಹಲ್, ಹಳ್ಳಿಕಾರ್, ದೇವನಿಗಿ, ಗೀರ್ ಸೇರಿದಂತೆ ಐದಾರು ತಳಿಯ ಹಸುಗಳನ್ನ ಸಾಕಿದ್ದಾರೆ.

ಗಂಜಲದಿಂದ ವಿಶೇಷವಾಗಿ ಗೋಮುತ್ರವನ್ನ ಇವರೇ ತಯಾರು ಮಾಡ್ತಾರೆ. ಪ್ರತಿ ದಿನ 5 ಗಂಟೆಗೆ ಹತ್ತು ಲೀ ಗೋಮುತ್ರವನ್ನ ಇಡಿದು, ಬಟ್ಟಿ ಇಳಿಸುವ ಮಾದರಿಯಲ್ಲಿ ಬಟ್ಟಿ ಇಳಿಸುತ್ತಾರೆ. ಅಂದ್ರೆ ಹೊಲೆಯ ಮೇಲೆ ಮಡಕೆ ಇಟ್ಟು ವಿಧಾನವಾಗಿ ಗೋಮುತ್ರವನ್ನ ಇವರೇ ತಯಾರು ಮಾಡಿಕೊಂಡು ಬರ್ತಿದ್ದಾರೆ. ಇನ್ನು ಈ ತಯಾರಿಸುವ ಗೋಮುತ್ರವನ್ನ 50 ವರ್ಷಗಳ ಕಾಲ ಶೇಖರಣೆ ಮಾಡಬಹುದು. ಗೋಮುತ್ರ ದೇಸಿಯ ಹಸುಗಳಿಂದ ಬರುವಂತಹ ಒಂದು ಸಂಜೀವಿನಿ ಅಂತಾರೆ ವೀರಣ್ಣ. ಗೋಮುತ್ರ 90 ಕ್ಕೂ ಹೆಚ್ಚು ಖಾಯಿಲೆಗಳಿಗೆ ಅನುಕೂಲವಾಗುತ್ತೆ, ಇದನ್ನ ದಿನಂಪ್ರತಿ ಸೇವನೆ ಮಾಡಿದ್ರೆ ಆರೋಗ್ಯದಲ್ಲಿ ಬರುವ ಬಿಪಿ, ಶುಗರ್, ಹಸ್ತಮಾ, ಹೃದಯ ಸೇರಿದಂತೆ ನಾನಾ ಖಾಯಿಲೆಗಳಿಗೆ ಇದೊಂದು ರಾಮಬಾಣವಂತೆ.

ಚಿಕ್ಕಮಗಳೂರಿನಲ್ಲಿ ಸಮಗ್ರ ಕೃಷಿ ಮಾಡ್ತಿರೋ ವೀರಣ್ಣ 16 ಎಕರೆ ಜಾಗದಲ್ಲಿ ಅಡಿಕೆ, ಬಾಳೆ, ತೆಂಗು, ಕಾಳುಮೆಣಸು, ಕೋಕೋ, ಜಾಯಿಕಾಯಿ, ಏಲಕ್ಕಿ, ರಾಗಿ, ಭತ್ತ, ಕಬ್ಬು, ಮಾವು, ಸಬೋಟ ಸೇರಿ 20 ಕ್ಕೂ ಬೆಳೆಗಳನ್ನ ಬೆಳೆದಿದ್ದಾರೆ. ಕಳೆದ 30 ವರ್ಷದಿಂದಲೂ ಇವ್ರ ತೋಟದೊಳಕ್ಕೆ ರಾಸಾಯನಿಕ ಗೊಬ್ಬರಕ್ಕೆ ಪ್ರವೇಶ ಕೊಟ್ಟಿಲ್ಲ. ಇವ್ರ ತೋಟಕ್ಕೆ ಬೇಕಾದ ಎಲ್ಲಾ ರೀತಿಯ ಗೊಬ್ಬರಗಳನ್ನ ಇವ್ರ ತಯಾರಿಸಿಕೊಳ್ತಿದ್ದಾರೆ. ತೋಟಕ್ಕೆ ಬೇಕಾಗುವಷ್ಟು ಎರೆಹುಳು ಗೊಬ್ಬರವನ್ನು ಇವರೇ ತಯಾರಿಸುತ್ತಿದ್ದಾರೆ. ಮೊದಲು ಎರೇಹುಳು ಗೊಬ್ಬರವನ್ನ ಇತರರಿಗೂ ಮಾರಾಟ ಮಾಡ್ತಿದ್ರು. ಇವ್ರ 16 ಎಕರೆ ತೋಟದಲ್ಲಿ ಬೆಳೆದಿರೋ ಒಂದು ಗರಿಕೆ ಕೂಡ ಸಾವಯವ ಕೃಷಿಯದ್ದೇ ಆಗಿದೆ.

ವೀರಣ್ಣಗೆ ಮೊದಲು ಅಡಿಕೆ, ಅಡಿಕೆ ನಂತರ ತೆಂಗು, ನಂತರ ಮಾವು, ಸಪೋಟ, ಕಬ್ಬು, ಕೋಕೋ, ಜಾಯಿ ಕಾಯಿ, ಬಾಳೆ ಹೀಗೆ ಒಂದಾದ ಮೇಲೆ ಒಂದು ನನಗೆ ಹಣ ನೀಡ್ತಿವೆ. ವೀರಣ್ಣ ವಯಸ್ಸು 65 ದಾಟಿದೆ, ಆದ್ರು, ಜಮೀನಿನಲ್ಲಿ ತಾವೇ ಎಲ್ಲಾ ಕೆಲಸ ಮಾಡ್ತಾರೆ, ಕೃಷಿಯಲ್ಲಿ ತಾನೂ ಅಭಿವೃದ್ಧಿ ಒಂದೋದ್ರ ಜೊತೆಗೆ, ಬೇರೆಯವರು ಕೃಷಿಯಲ್ಲಿ ತೊಡಗಬೇಕು ಅನ್ನೋದು ಇವರ ಉದ್ದೇಶವಾಗಿದೆ.

ಕೇವಲ ವೀರಣ್ಣ ಮಾತ್ರವಲ್ಲ, ಅವರ ಕುಟುಂಬ ವರ್ಗ ಕೂಡ ಈ ರೀತಿಯ ಸಮಗ್ರ ಕೃಷಿಗೆ ಸಾಥ್ ನೀಡಿದೆ. ಸದ್ಯ ವೀರಣ್ಣ ಒಂದು ವರ್ಷಕ್ಕೆ 20 ರಿಂದ 25 ಲಕ್ಷ ಆದಾಯ ಗಳಿಕೆ ಮಾಡಿಕೊಂಡು ನೆಮ್ಮದಿ ಬದುಕು ಸಾಗಿಸುತ್ತಿದ್ದಾರೆ. ಇನ್ನು ವೀರಣ್ಣ ವಿಶೇಷವಾಗಿ ಬಿದರನ್ನ ಕೂಡ ಬೆಳೆಯಲಾಗ್ತಿದೆ, ಇತ್ತೀಚೆಗೆ ಬಿದರು ಕಣ್ಮರೆಯಾಗ್ತಿರೋದ್ರಿಂದ ಬೇಸತ್ತು ಬಿದರನ್ನ ಕೂಡ ಬೆಳೆಯುತ್ತಿದ್ದಾರೆ. ವೀರಣ್ಣ ರ ವಿಟ್ಲಾಪುರ ದ ಜಮೀನಿಗೆ ಪ್ರತಿನಿತ್ಯ ಹತ್ತಾರು ರೈತರು ಬಂದು ಇವ್ರ ಸಲಹೆ ಪಡೆದು ತಾವೂ ಕೃಷಿಯಲ್ಲಿ ತೊಡಗಿಸಿಕೊಳ್ತಿದ್ದಾರೆ. ಇವ್ರ ಈ ಸಾಧನೆ ಇವ್ರಿಗೆ ಖುಷಿ ತಂದಿದೆ. ಕೃಷಿಯಲ್ಲಿ ತಾನೂ ಅಭಿವೃದ್ಧಿ ಹೊಂದೋದ್ರ ಜೊತೆಗೆ, ನಗರಗಳತ್ತ ಮುಖ ಮಾಡಿದ ಯುವ ಜನತೆಯನ್ನ ಕೃಷಿಗಾಗಿ ಮತ್ತೆ ಹಳ್ಳಿಗಳತ್ತ ಕರೆತರಬೇಕೆಂಬುದು ಇವ್ರ ಉದ್ದೇಶವಾಗಿದೆ.

ಇನ್ನು ಇತರರ ತೋಟಗಳಿಗೂ ಹೋಗಿ ಬೆಳೆಯನ್ನ ವೀಕ್ಷಿಸಿ ಸಲಹೆಯನ್ನ ನೀಡ್ತಾರೆ. ಬೇರೆ-ಬೇರೆ ಊರುಗಳಿಂದ್ಲೂ ಇವ್ರ ತೋಟವನ್ನ ನೋಡೋಕೆ ರೈತರು, ವಿದ್ಯಾರ್ಥಿಗಳು ಆಗಮಿಸ್ತಾರೆ.

ಮೇವಿಗೆ ಹೋದ ದನಕರುಗಳು ಮನೆಗೆ ಬಂದು ನೀರು ಕುಡಿಯೋ ರಭಸ ನೋಡಿ ವೀರಣ್ಣ ಮನ ಕರಗಿತ್ತು. ಕೈಯಲ್ಲಿ ಐದು ಲಕ್ಷ ಹಣ ಇಟ್ಕೊಂಡು ರಾಸುಗಳಿಗಾಗಿ ಕೆರೆ ಕಟ್ಬೇಕೆಂದು ಶಪಿಸಿದ್ರು. ಅರಣ್ಯ ಹಾಗೂ ಗ್ರಾಮದ ಗಡಿಯಲ್ಲಿ ಸುಮಾರು ಒಂದು ಎಕರೆ ವಿಸ್ತೀರ್ಣದಲ್ಲಿ ಕೆರೆ ಕಟ್ಟಿ, ಗೋ ಕಟ್ಟೆ ಅಂತ ಹೆಸರಿಟ್ರು, ಜಾನುವಾರುಗಳು ನೀರು ಕುಡಿಯೋದ್ನ ಕಂಡು ಖುಷಿಪಟ್ರು. ಕೆರೆಯನ್ನೇನೋ ಕಟ್ಟಿದ್ರು ಅರೆಮಲೆನಾಡಲ್ಲಿ ನೀರನ್ನೇಲ್ಲಿಂದ ತರೋದು.

ಹೆದರಲೇ ಇಲ್ಲ. 5-6 ಕಿ.ಮೀ. ಅರಣ್ಯ ಸುತ್ತಿದ್ರು, ಅನಾವಶ್ಯಕವಾಗಿ ಹರಿದೋಗೋ ಮಳೆ ನೀರಿಗೆ ತಡೆ ಹಾಕಿ. ಆ ನೀರಿಗೆ ಕೆರೆ ದಾರಿ ತೋರ್ಸಿದ್ರು. ಇಂದು ಕೆರೆ ತುಂಬಾ ನೀರು. ಮೇವಿಗೆ ಹೋದ ದನಕರುಗಳು, ಕಾಡು ಪ್ರಾಣಗಳು ಕೂಡ ಇಲ್ಲಿಗೆ ಬಂದು ನೀರಿಗೆ ಕುಡಿಯುತ್ವೆ. ಅದನ್ನ ಕಣ್ಣಾರೆ ಕಂಡ ವೀರಣ್ಣಾಗೆ ಖುಷಿಯೋ-ಖುಷಿ.

ರೈತರು ಮಿಶ್ರ ಬೆಳೆ ಬೆಳೆದ್ರೆ ಯಾವುದಾದರೂ ಒಂದು ಬೆಳೆ ಕೈಹಿಡಿಯುತ್ತೇ. ಹಾಗಾಗಿ ರೈತ ಮಿತ್ರರು ಮಿಶ್ರಬೆಳೆಯತ್ತ ಗಮನ ಹರಸಿದ್ರೆ ಮುಂದಿನ ದಿನಗಳಲ್ಲಿ ಸಮಸ್ಯೆ ಎದುರಾಗಲ್ಲ ಅನ್ನೋದು ವೀರಣ್ಣ ರವರ ಸಲಹೆ. ಇನ್ನು ನಗರ ಪ್ರದೇಶದಲ್ಲಿ ದುಡಿಯೋ ಸಂಬಳಕ್ಕಿಂತ 10 ಪಟ್ಟು ಹೆಚ್ಚು ಕೃಷಿಯಲ್ಲಿ ದುಡಿಯಬಹುದು ಅನ್ನೋದು ವೀರಣ್ಣ ನಂಬಿಕೆ. ಇವ್ರ ಮೈಮನವೆಲ್ಲಾ ಕೃಷಿಗೆ ಅವಲಂಬಿತವಾಗಿರೋದು ನಿಜಕ್ಕೂ ಶ್ಲಾಘನೀಯ.

