ಸಿಎಂಗೆ ಘೇರಾವ್ ಹಾಕಲು ಯತ್ನ ಮಾಡಿದ ರೈತರನ್ನು ಎತ್ತಿ ಪಕ್ಕಕ್ಕೆ ಹಾಕಿದ ಪೊಲೀಸರು…!
ಸಿಎಂಗೆ ಘೇರಾವ್ ಹಾಕಲು ಯತ್ನ ಮಾಡಿದ ರೈತರನ್ನು ಪೊಲೀಸರು ತಡೆದಿದ್ದಾರೆಂದು ನೆರೆ ಸಂತ್ರಸ್ತರು ಮತ್ತು ರೈತರು ಸಿಎಂ ಹಾಗೂ ಪೊಲೀಸರ ವಿರುದ್ಧ ದಿಕ್ಕಾರ ಕೂಗಿದ್ದಾರೆ. ರಸ್ತೆಯಲ್ಲಿ ಮಲಗಿದ್ದ ರೈತರನ್ನು ಎತ್ತಿ ಹೊರ ಹಾಕಿ ಪೊಲೀಸರು ದೌರ್ಜನ್ಯ ಮೆರೆದಿದ್ದಾರೆ.
ರೈತ ಮಹಿಳೆ ಜಯಶ್ರೀಯನ್ನು ಪೊಲೀಸರು ಎಳೆದಾಡಿದ ಘಟನೆ ಬೆಳಗಾವಿ ಅಥಿತಿ ಗೃಹ ಗೇಟ್ ಬಳಿ ನಡೆದಿದೆ. ಸಿಎಂ ಕಾರು ಹೋಗುತ್ತಿದ್ದಂತೆ ಧಿಕ್ಕಾರ ಕೂಗುತ್ತಾ ರಸ್ತೆ ಮಧ್ಯೆ ಮಲಗಿದ ರೈತರು ನೆರೆ ಸಂತ್ರಸ್ತರನ್ನ ಎಳೆದು ಹಾಕಿದ್ದಾರೆ.
ಅಷ್ಟಕ್ಕು ರೈತರು ಸಿಎಂ ತಡೆದಿದ್ದು ಯಾಕೆ ಗೊತ್ತಾ..? ಇಂದು ಬೆಳಿಗ್ಗೆ 8 ರಿಂದ 10 ಗಂಟೆಯವರೆಗೆ ರೈತರ ಅಹವಾಲು ಸಿಎಂಗೆ ನೀಡಲು ಸಮಯ ನಿಗಧಿ ಮಾಡಲಾಗಿತ್ತು. ಆದರೆ ಸಿಎಂ ಇಂದು ಬೆಳಿಗ್ಗೆ 9 ಗಂಟೆಗೆ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಇದರಿಂದ ರೊಚ್ಚಿಗೆದ್ದ ರೈತರು, ಸಂತ್ರಸ್ತರು ಇನ್ಯಾರಿಗೆ ಅಹವಾಲು ನೀಡಬೇಕು, ನಮ್ಮ ಕಷ್ಟಗಳನ್ನು ಹೇಳಿಕೊಳ್ಳುವುದು ಯಾರಿಗೆ..? ಎಂದು ಪ್ರಶ್ನೆ ಹಾಕಿ ಧಿಕ್ಕಾರ ಕೂಗುತ್ತಿದ್ದಾರೆ.
ಮಹಿಳೆ ಎಂದು ಕೂಡ ನೋಡದೆ ಪೊಲೀಸರು ಎಳೆದಾಡಿದ್ದಾರೆ. ರೈತರ ಬೇಡಿಕೆಗಳನ್ನು ಸಲ್ಲಿಸಲು ಬಂದಿದ್ದೇ ತಪ್ಪಾಯ್ತು ಎನ್ನುವಂತೆ ಪೊಲೀಸರು ವರ್ತಿಸಿದ್ದಾರೆ.
ಈ ವೇಳೆ ಪೊಲೀಸರು ಅಮಾನವೀಯವಾಗಿ ವರ್ತಿಸಿದ್ದಕ್ಕೂ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಎಂ ವಿರುದ್ಧ ಧಿಕ್ಕಾರ ಕೂಗುತ್ತಿದ್ದಾರೆ.