ಸಿಎಎ ವಿರೋಧಿಗಳು ದೇಶದ್ರೋಹಿಗಳು ಎಂದವರಿಗೆ ಹಿಟ್ಲರ್ ಎಂದ ಸಿದ್ದರಾಮಯ್ಯ..!
ದೇಶದಲ್ಲಿ ಜನರಿಗೆ ಭದ್ರತೆ ಇಲ್ಲ ಎಂದು ದೆಹಲಿಯಲ್ಲಿ ಪ್ರತಿಭಟನಾಕಾರ ಮೇಲೆ ಗುಂಡಿನ ಹಾರಿಸಿದ ವಿಚಾರಕ್ಕೆ ಚಿಕ್ಕಮಗಳೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.
ದೆಹಲಿಯಲ್ಲಿ ಪ್ರತಿಭಟನಾಕಾರ ಮೇಲೆ ಗುಂಡಿನ ಹಾರಿಸಿದ ವಿಚಾರಕ್ಕೆ ಗರಂ ಆದ ಮಾಜಿ ಸಿಎಂ ಸಿದ್ದರಾಮಯ್ಯ, ವಿದ್ಯಾರ್ಥಿಗಳು ರಾಜ್ ಗೋಟ್ ಗೆ ಹೋಗ್ತಿದ್ರು, ಅವನ್ಯಾರೋ ವ್ಯಕ್ತಿ ಸ್ವಾತಂತ್ರ್ಯ ಬೇಕಾ ಅಂತಾ ಗುಂಡು ಹೊಡೆಯುತ್ತಾನೆ. ಪೊಲೀಸರು ಮೂಖ ಪ್ರೇಕ್ಷಕರಾಗಿ ನಿಂತಿದ್ರು. ದೇಶದಲ್ಲಿ ಭದ್ರತೆ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ.
ಕೇಂದ್ರ ಸಚಿವ ಅರುಣ್ ಠಾಕೂರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಸಿದ ಸಿದ್ದರಾಮಯ್ಯ, ಇವರಿಗೂ ಇಟ್ಲರ್ ಗೆ ವ್ಯತ್ಯಾಸ ಏನು? ಸಿಎಎ ವಿರೋಧ ಮಾಡಿದ್ರೆ ದೇಶದ್ರೋಹಿಗಳು ಅಂತಾರೆ. ಇವರ ಕೊಡುವ ಹೇಳಿಕೆ ಗೆ ಏನು ಅಂತಾ ಕರಿಯಬೇಕು. ದೇಶ ಭಕ್ತ ಹೇಳಿಕೆ ಅಂತಾ ಕರಿಯಬೇಕಾ. ದೇಶದ್ರೋಹಿ ಹೇಳಿಕೆ ಅಂತಾ ಕರಿಯಬೇಕಾ. ಸಿಎಎ ವಿರೋಧ ಮಾಡುವವರು ದೇಶದ್ರೋಹಿ ಗಳಲ್ಲ. ದ್ವೇಷ ದ ಬೀಜವನ್ನ ಬಿತ್ತುತ್ತಿರುವವರು ದೇಶದ್ರೋಹಿಗಳು, ಸಮಾಜ ಒಡೆಯುವ ಕೆಲಸ ಮಾಡ್ತಿದ್ದಿರಲ್ಲಾ ಅವರು ದೇಶದ್ರೋಹಿಗಳು. ಮೋದಿ, ಅಮಿತ್ ಶಾ ಪ್ರಚೋದನೆಯುಂದಲೇ ಗುಂಡು ಹಾರಿಸುವ ಮಟ್ಟಕ್ಕೆ ಬಂದಿರೋದು ಎಂದು ಗರಂ ಆದರು.