ಹಾಸನದವರಷ್ಟು ಬುದ್ಧಿ ನನಗೆ ಕೊಡಪ್ಪ ಅಂತ ದೇವರಲ್ಲಿ ಕೇಳುವೆ – ಮಾಧುಸ್ವಾಮಿ

ಹಾಸನದವರಷ್ಟು ಬುದ್ಧಿ ನನಗೆ ಕೊಡಪ್ಪ ಅಂತ ದೇವರಲ್ಲಿ ಕೇಳುತ್ತೇನೆ ಎಂದು ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ನುಗ್ಗೇಹಳ್ಳಿಯಲ್ಲಿ ಸಚಿವ ಮಾಧುಸ್ವಾಮಿ ಹೇಳಿದ್ದಾರೆ.

ಸರ್ಕಾರದಿಂದ ಎಷ್ಟು ಚೆನ್ನಾಗಿ ಕೆಲಸ ತಗೋತಾರೆ ಹಾಸನದವರು.  ನಾವು ಸುಮ್ಮನೆ ತುಮಕೂರು ಜಿಲ್ಲೆಯಲ್ಲಿ ಕುಳಿತುಕೊಂಡು ದಡ್ಡವರಾಗಿದ್ದೇವೆ ಎಂದು ಹಾಸನದ ಜನಪ್ರತಿನಿಧಿಗಳಷ್ಟು ಬುದ್ದಿವಂತಿಕೆ ನಮಗೂ ಬೇಕು ಎಂದು ನಗೆಚಟಾಕಿ ಹಾರಿಸಿದ ಮಾಧುಸ್ವಾಮಿ.

ನಾನು ಒಬ್ಬ ರೈತನ ಮಗನೇ, ರೈತರ ಪರಿಸ್ಥಿತಿಯನ್ನು ಹತ್ತಿರದಿಂದ ಕಂಡಿದ್ದೇನೆ. ನೆಲ-ಜಲದ ವಿಚಾರದಲ್ಲಿ ರಾಜಕೀಯ ಮಾಡಬಾರದು. ಇದು ಯಾವೊಬ್ಬ ಜನಪ್ರತಿನಿಧಿಗೆ ಶೋಭೆ ತರುವುದಿಲ್ಲಾ. ತಾಲೂಕಿನ ನೀರಾವರಿ ಯೋಜನೆಗೆ ಶ್ರಮಿಸಿದ ಯಾರನ್ನು ಮರೆಯಬಾರದು. ನುಗ್ಗೇಹಳ್ಳಿ ಕೆರೆ ತುಂಬಿದ ಬಳಿಕ ಬಸವರಾಜ್ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಹಾಗೂ ಸಿಎಂರನ್ನ ಕರೆತರುತ್ತೇನೆ. ಜಿಲ್ಲೆ ಹಾಗೂ ತಾಲೂಕಿನ ಎಲ್ಲಾ ಕೆರೆಗಳಿಗೂ ನೀರು ತುಂಬಿಸುವ ಉದ್ದೇಶ ನಮ್ಮದು. ಈಗಾಗಲೇ ಬಹುತೇಕ ಕಡೆ ಡಿಪಿಆರ್ ಕಾರ್ಯ ನಡೆಯುತ್ತಿದೆ ಎಂದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.