ಹಿನ್ನೆಲೆ ಗಾಯಕಿ ಸುಶ್ಮಿತಾ ಆತ್ಮಹತ್ಯೆ : ತಾಯಿಗೆ ಸಂದೇಶ ಕಳುಹಿಸಿ ನೇಣಿಗೆ ಶರಣು

ಕಳೆದ ಒಂದೂವರೆ ವರ್ಷ ಹಿಂದೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಖ್ಯಾತ ಗಾಯಕಿ ಸುಶ್ಮಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.‘ಹಾಲು ತುಪ್ಪ’ ‘ಶ್ರೀಸಾಮಾನ್ಯ’ ಸಿನಿಮಾದಲ್ಲಿ ಹಾಡು ಹಾಡಿದ ಸುಶ್ಮಿತಾ ಇಂದು ಬೆಂಗಳೂರಿನ ತಮ್ಮ ತಾಯಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.

ದಾಂಪತ್ಯ ಜೀವನದಲ್ಲಿ ನೋವನ್ನುಂಡ ಸುಶ್ಮಿತಾಳಿಗೆ(26) ಖಾಸಗಿ ಕಂಪನಿಯಲ್ಲಿ ಟೆಕ್ಕಿಯಾಗಿದ್ದ ಪತಿ ಶರತ್ ಕುಮಾರ್ ಹಾಗೂ ಕುಟುಂಬಸ್ಥರಿಂದ ಕಿರುಕುಳ ಇರುವ ಬಗ್ಗೆ ಆರೋಪಿಸಲಾಗುತ್ತಿದೆ. ಪತಿಯ ಮನೆಯಲ್ಲಿ ವರದಕ್ಷಿಣೆಯ ಕಿರುಕುಳ ಇರುವ ಬಗ್ಗೆ ಸುಶ್ಮಿತಾ ಪ್ರಸ್ತಾಪ ಮಾಡಿದ್ದಾರೆಂದು ತಾಯಿ ಆರೋಪಿಸಿದ್ದಾರೆ.

ಪತಿಯ ಮನೆ ಕುಮಾರಸ್ವಾಮಿ ಲೇಔಟ್ ನಿಂದ ತಾಯಿ ಮನೆಗೆ ಬಂದ ಸುಶ್ಮಿತಾ ಆತ್ಮಹತ್ಯೆಗೂ ಮುನ್ನ ತಾಯಿ ಹಾಗೂ ತಮ್ಮನಿಗೆ ವಾಟ್ಸಪ್ ಮೆಸೇಜ್ ಮಾಡಿದ್ದಾರೆ.

ವಾಟ್ಸಪ್‍ನಲ್ಲಿ ಕಳುಹಿಸಿದ್ದೇನು?
ಅಮ್ಮ ನನ್ನನ್ನು ಕ್ಷಮಿಸು. ನಾನು ಮಾಡಿಕೊಂಡ ತಪ್ಪಿಗೆ ನಾನೇ ಶಿಕ್ಷೆ ಅನುಭವಿಸಿದ್ದೇನೆ. ನನ್ನನ್ನು ದಯವಿಟ್ಟು ಕ್ಷಮಿಸು. ನನ್ನ ಪತಿ ತನ್ನ ದೊಡ್ಡಮ್ಮನ ಮಾತು ಕೇಳಿ ನನಗೆ ಚಿತ್ರಹಿಂಸೆ ಕೊಡುತ್ತಿದ್ದರು. ನಾನು ಏನೇ ಮಾತನಾಡಿದ್ರೂ ನನಗೆ ಮನೆ ಬಿಟ್ಟು ಹೋಗು ಎಂದು ಹೇಳುತ್ತಿದ್ದರು. ನನಗೆ ಮಾನಸಿಕವಾಗಿ ತುಂಬಾ ಕಿರುಕುಳ ನೀಡುತ್ತಿದ್ದರು. ಅವರನ್ನು ಮಾತ್ರ ಸುಮ್ಮನೆ ಬಿಡಬೇಡ. ನನ್ನ ಸಾವಿಗೆ ಶರತ್, ವೈದೇಹಿ, ಗೀತಾ ನೇರವಾಗಿ ಕಾರಣ. ನಾನು ಎಷ್ಟು ಬೇಡಿಕೊಂಡರೂ ಕಾಲು ಹಿಡಿದರೂ ಅವನ ಮನಸ್ಸು ಕರಗಲಿಲ್ಲ.

ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸಿದ್ದಾರೆ.

Spread the love

Leave a Reply

Your email address will not be published. Required fields are marked *