ಹುಬ್ಬಳ್ಳಿಯ ಹೋಟೆಲ್‌ನಲ್ಲಿ ಯುವಕರ ಮಾರಾಮಾರಿ : ವಿಡಿಯೋ ವೈರಲ್

ಹುಬ್ಬಳ್ಳಿಯ ಹೋಟೆಲ್‌ನಲ್ಲಿ ಯುವಕರ ಮಾರಾಮಾರಿ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿ ಭಾರಿ ವೈರಲ್ ಆಗಿದೆ.

ನ್ಯೂ ಇಂಗ್ಲೀಷ್ ಸ್ಕೂಲ್ ಬಳಿಯ ಮಥುರಾ ಹೊಟೆಲ್‌ನಲ್ಲಿ ಮಂಜುನಾಥ ರಾಘು ಎಂಬಾತನನ್ನು ತಳಿಸಿದ್ದಾನೆ. ಹೊಟೆಲ್‌ನಲ್ಲಿ ಚಹಾ ಕುಡಿಯುತ್ತಿದ್ದ ರಾಘು‌ ಎಂಬಾತನನ್ನು ಮಂಜುನಾಥ ತಳಿಸಿದ್ದಾನೆ. ಏಕಾಏಕಿ ಹೊಟೆಲ್ ಪ್ರವೇಶಿಸಿದ ಮಂಜುನಾಥ್ ಮನಬಂದಂತೆ ಥಳಿಸಿದ್ದಾನೆ.

ಸಿಸಿ ಟಿವಿಯಲ್ಲಿ ಸೆರೆಯಾದ ಯುವಕರ ಹೊಡೆದಾಟದ ದೃಶ್ಯವನ್ನು ವಶಕ್ಕೆ ಪಡೆದ ಕಸಬಾ ಪೇಟೆ ಪೊಲೀಸ್ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ಬಳಿಕ ಹಣಕಾಸಿನ ವಿಚಾರವಾಗಿ ಪರಸ್ಪರ ಹೊಡೆದಾಡಿಕೊಂಡಿರುವುದಾಗಿ ತಿಳಿದಿದೆ.

Spread the love

Leave a Reply

Your email address will not be published. Required fields are marked *