ಇಲ್ಲಿ ಎಚ್ ಎಸ್ ದೊರೆಸ್ವಾಮಿ, ಅಲ್ಲಿ ಹರ್ಷ್ ಮಂದರ್: ಬಿಜೆಪಿ ಐಟಿ ಸೆಲ್ ತಿರುಚುವ ಮಾಹಿತಿಗೆ ಎಲ್ಲೆಯೇ ಇಲ್ಲ
ಮಾರ್ಚ್ ಮೂರರಂದು ದೆಹಲಿ ಹಿಂಸಾಚಾರದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಸಾಮಾಜಿಕ ಕಾರ್ಯಕರ್ತ ಹರ್ಷ್ ಮಂದಿರ್ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಲು ನಿರಾಕಾರಿಸಿ, ನ್ಯಾಯಾಂಗದ ಬಗ್ಗೆ ಹರ್ಷ್ ಮಂದಿರ್ ಮಾಡಿರುವ ಆಕ್ಷೇಪಣೀಯ ಮಾತುಗಳ ಬಗ್ಗೆ ವಿವರಣೆ ನೀಡಲು ತಿಳಿಸಿತ್ತು.
ದೆಹಲಿ ಪೊಲೀಸರ ಕಾನೂನು ಸೆಲ್ನ ಡಿಸಿಪಿ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ್ದ ಅಫಿಡವಿಟ್ ಪ್ರತಿಯನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದ ಬಿಜೆಪಿ ಸರ್ಕಾರದ ʼಮೈಗವ್ ಇಂಡಿಯಾʼದ ಮಾಜಿ ನಿರ್ದೇಶಕ “ನ್ಯಾಯದ ಚಕ್ರಗಳು ತಿರುಗಲು ಪ್ರಾರಂಭವಾಗಿವೆ. ಭಾರಾತದ ಪ್ರಜಾಪ್ರಭುತ್ವವನ್ನು ಗೌರವಿಸದೆ“ ಬೀದಿಗಳ ಮೇಲೆ ಹಿಂಸಾಚಾರಕ್ಕೆ ಕರೆಕೊಟ್ಟವರು ಈಗ ನ್ಯಾಯವನ್ನು ಎದುರಿಸಬೇಕಿದೆ.
ಸೋನಿಯ ಗಾಂಧಿ ಅವರ ನೆಚ್ಚಿನ ಹಿಟ್ ಮ್ಯಾನ್ ಹರ್ಷ್ ಮಂದರ್ ಈಗ ಶಿಸ್ತುಕ್ರಮ ಎದುರಿಸಲಿದ್ದಾರೆ” ಎಂದು ಬರೆದಿದ್ದರು.
The wheels of justice have started turning. All those who plotted to unleash violence on the “streets” and subvert India’s democracy will have to face justice.
The preferred hit man of Sonia Gandhi since many years, Harsh Mander, will now face action. pic.twitter.com/OQ4RFt2mWC
— Akhilesh Mishra (@amishra77) March 4, 2020
ಪ್ರಶ್ನೆಯಲ್ಲಿರುವ ವಿಡಿಯೋವನ್ನು ಮೊಟುಕುಗೊಳಿಸಿ ಬಿಜೆಪಿ ಐಟಿ ಸೆಲ್ ನ ಹಲವರು ಹಂಚಿಕೊಂಡದ್ದು ಗೊಂದಲಗಳಿಗೆ ಕಾರಣವಾಗಿತ್ತು. ಬುಧವಾರ ಸುಪ್ರೀಂ ಕೋರ್ಟ್ ನಲ್ಲಿ ನಡೆದ ವಿಚಾರಣೆಯಲ್ಲಿ ಸಾಲಿಸಿಟರ್ ಜನರಲ್ ತುಶಾರ್ ಮೆಹ್ತ ಮಾನವ ಹಕ್ಕುಗಳ ಕಾರ್ಯಕರ್ತ ಹರ್ಷ್ ಮಂದರ್ ಜನರನ್ನು ಕೋರ್ಟ್ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ ಎಂದು ಆರೋಪಿಸಿದ್ದರು. ಬಿಜೆಪಿ ಮುಖಂಡರ ದ್ವೇಷಪೂರಿತ ಭಾಷಣದ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಕೋರಿ, ಹರ್ಷ್ ಮಂದರ್ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ನ್ಯಾಯಮೂರ್ತಿ ಎಸ್ ಮುರಳೀಧರ್ ಅವರ ವರ್ಗಾವಣೆಯ ನಂತರ, ದ್ವೇಷಪೂರಿತ ಭಾಷಣ ನೀಡಿದ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ದೆಹಲಿ ಹೈಕೋರ್ಟ್ ದೆಹಲಿ ಪೊಲೀಸರಿಗೆ ಒಂದು ತಿಂಗಳ ಕಾಲಾವಕಾಶ ನೀಡಿತ್ತು. ಈ ಮುಂದೂಡಿಕೆಯನ್ನು ಪ್ರಶ್ನಿಸಿ ಹರ್ಷ್ ಮಂದರ್ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
अब फ़ैसला संसद या SC में नहीं होगा। SC ने अयोध्या और कश्मीर के मामले में secularism की रक्षा नहीं की। इसलिए फ़ैसला अब सड़कों पर होगा।
This man Harsh Mander, who wrote the draconian CVB, is in HC to get FIRs against people for hate speech… And a judge gave him midnight hearing! pic.twitter.com/zrXYyBxfE3
— Amit Malviya (@amitmalviya) March 4, 2020
ತುಶಾರ್ ಮೆಹ್ತ ಅವರ ಆರೋಪದ ನಂತರ ಮುಖ್ಯ ನ್ಯಾಯಾಧೀಶ ಎಸ್ ಎ ಬೋಬ್ಡೆ ಅವರು, ಹರ್ಷ್ ಮಂದಿರ್ ಮಾಡಿರುವ ಆಕ್ಷೇಪಣೀಯ ಮಾತುಗಳ ಬಗ್ಗೆ ವಿವರಣೆ ನೀಡಲು ತಿಳಿಸಿ, ಅದು ಇತ್ಯರ್ಥ ಆಗುವವರೆಗೂ ಈ ಪ್ರಕರಣದಿಂದ ದೂರ ಉಳಿಯಲು ತಿಳಿಸಿದ್ದರು. ನಂತರ ಸುಪೀಂ ಕೋರ್ಟ್ ಹೈಕೋರ್ಟ್ ವಿಚಾರಣೆ ಮುಂದೂಡಿರುವುದು ಸಮರ್ಥನೀಯವಲ್ಲ ಎಂದು ತಿಳಿಸಿ ದೆಹಲಿ ಹಿಂಸಾಚಾರದ ಪ್ರಕರಣಗಳ ವಿಚಾರಣೆಯನ್ನು ಶುಕ್ರವಾರ ನಡೆಸುವಂತೆ ದೆಹಲಿ ಹೈಕೋರ್ಟ್ ಗೆ ಸೂಚಿಸಿತ್ತು.
ಇಷ್ಟೆಲ್ಲಾ ವಿವಾದಗಳಿಗೆ ಕಾರಣವಾಗಿದ್ದು, ಜಾಮಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳ ಸಿ ಎ ಎ ವಿರೋಧಿ ಪ್ರತಿಭಟನೆಗಳ ಮೇಲೆ ಪೊಲೀಸರು ಮುಗಿಬಿದ್ದು ದೆಹಲಿ ಪೊಲೀಸರು ನಡೆಸಿದ ದೌರ್ಜನ್ಯದ ವಿರುದ್ಧ ಹರ್ಷ್ ಮಂದರ್ ಅವರು ಮಾಡಿದ್ದ ಭಾಷಣ. ಈ ಭಾಷಣ ಹಿಂಸೆಯನ್ನು ಪ್ರಚೋದಿಸುತ್ತದೆ ಮತ್ತು ಸುಪ್ರೀಂ ಕೋರ್ಟ್ ವಿರುದ್ಧ ಜನರನ್ನು ಎತ್ತಿಕಟ್ಟುತ್ತದೆ ಎಂಬುದು ದೆಹಲಿ ಪೊಲೀಸರ ಆರೋಪ. ಆದರೆ ಆ ವಿಡಿಯೋದ ಭಾಷಣವನ್ನು ಸಂಪೂರ್ಣ ಆಲಿಸಿದರೆ, ಯಾವುದೇ ಪ್ರಚೋದನಕಾರಿ ಮಾತುಗಳು ಅಲ್ಲಿಲ್ಲ ಎಂದು ತಿಳಿದುವರುತ್ತದೆ. ಸುಪ್ರೀಂ ಕೋರ್ಟ್ ಬಗೆಗೆ ಹೇಳಿದ ಮಾತುಗಳಲ್ಲಿ ಕೂಡ ಅವರು ಕೊನೆಗೆ “ಸುಪ್ರೀಂ ಕೋರ್ಟ್ ನಲ್ಲಿ ಎಷ್ಟು ಪ್ರಯತ್ನ ಪಡಬೇಕೋ ಅದನ್ನು ಮಾಡೋಣ, ಏಕೆಂದರೆ ಕೊನೆಗೆ ಅದು ನಮ್ಮೆಲ್ಲರ ಸುಪ್ರೀಂ ಕೋರ್ಟ್” ಎನ್ನುತ್ತಾರೆ.
ಮುಸ್ಲಿಮರ ವಿರುದ್ಧ ತಾರತಮ್ಯ ಎಸಗುವ ಕಾನೂನಿನ ವಿರುದ್ಧ ಬೀದಿಗಳಲ್ಲಿ ಹೋರಾಡಬೇಕು ಎಂದು ಹೇಳುವಾಗ ಅದು ಎಲ್ಲಿಯೂ ಕೋರ್ಟ್ ವಿರೋಧಿ ಹೆಳಿಕೆಯಂತೆ ಕೇಳಿಸುವುದಿಲ್ಲ ಅಥವಾ ಹಿಂಸೆಯನ್ನು ಪ್ರಚೋದಿಸುವ ಧ್ವನಿಯಾಗಲೀ ಅದರಲ್ಲಿ ಇಲ್ಲ. ‘ಕಾರವಾನ್ ಎ ಮೊಹಬತ್’ (ಪ್ರೀತಿಯ ತೇರು) ಎಂಬ ಸಮುದಾಯ ಚಟುವಟಿಕೆಯ ಜೊತೆಯಾಗಿ, ಗಲಭೆ-ಕ್ಷೋಭೆಗೆ ಒಳಗಾದ ಪ್ರದೇಶಗಳಲ್ಲಿ ಸಾಮರಸ್ಯದ ಸಮಾಜಕ್ಕೆ ದುಡಿಯುವ ಹರ್ಷ್ ಮಂದರ್ ಅವರ ಕಾಳಜಿ, ಪ್ರತಿಭಟನೆಯ ಮಾದರಿ ಎಂದಿಗೂ ಹಿಂಸೆಯ ರೀತಿಯದ್ದಲ್ಲ ಎಂಬುದು ತಿಳಿದಿರುವುದೇ.
ವಿಪರ್ಯಾಸ ಎಂದರೆ ದೆಹಲಿ ಹೈಕೋರ್ಟ್ ನಲ್ಲಿ ಬಿಜೆಪಿ ಮುಖಂಡರ ದ್ವೇಷಪೂರಿತ ಭಾಷಣಗಳ ಬಗ್ಗೆ ತಿಳಿದಿಲ್ಲ ಎಂದು ಹೇಳಿದ್ದ ದೆಹಲಿ ಪೊಲೀಸರು, ಹರ್ಷ್ ಮಂದಿರ್ ಭಾಷಣದ ಶವಪರೀಕ್ಷೇ ಮಾಡಿತ್ತು ಎನ್ನುವುದು.
ಇಲ್ಲಿ ಕರ್ನಾಟಕದಲ್ಲಿ ಸಿ ಎ ಎ ವಿರೋಧಿ ನಿಲುವು ತಳೆದು ಹೋರಾಟಕ್ಕೆ ಮುಂದಾಗಿರುವ ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿಯವರ ವಿರುದ್ಧ ಕೀಳುಮಟ್ಟದ ಪ್ರಚಾರಕ್ಕೆ ಇಳಿದ ಬಿಜೆಪಿ ಪ್ರೇರಿತ ಐಟಿ ಸೆಲ್ ಗಳು ದೆಹಲಿ ಮಟ್ಟದಲ್ಲಿ ಹರ್ಷ್ ಮಂದರ್ ವಿರುದ್ಧ ಇದೇ ಕೆಲಸದಲ್ಲಿ ಮುಗಿಬಿದ್ದಿವೆ.

