ಈ ಗ್ರಾಮದಲ್ಲಿ ವಿದ್ಯುತ್ ಕಂಬಗಳಿವೆ ಆದ್ರೆ ವಿದ್ಯುತ್ ಮಾತ್ರ ಇಲ್ಲಾ…

ಸರಕಾರ ಪ್ರತಿಯೊಬ್ಬರಿಗೆ ಬೆಳಕು ನೀಡುವ ಉದ್ದೇಶದ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದ್ರೆ ಇಲ್ಲೋಬ್ಬ ಗುತ್ತಿಗೆದಾರ ಕೆಲಸ ಅರ್ಧಕ್ಕೆ ನಿಲ್ಲಿಸಿ ಜನರನ್ನು ಕತ್ತಲೆಯಲ್ಲಿ ಕಾಲ ಕಳೆಯುವಂತೆ ಮಾಡಿದ್ದಾನೆ. ಒಂದು ಅಥವಾ ಎರಡು ವರ್ಷದ ಕಥೆಯಲ್ಲ. ಸುಮಾರು ಹತ್ತು ವರ್ಷಗಳ ಹಿಂದೆ ವಿದ್ಯುತ್ ಕಂಬ ನಿಲ್ಲಿಸಿದ್ದಾರೆ ಇದುವರೆಗೂ ಹೆಸ್ಕಾಂ ಸಿಬ್ಬಂದಿ ಆಗಲಿ ಗುತ್ತಿಗೆದಾರ ಆಗಲಿ ಇತ್ತ ತಿರಿಗಿಯೂ ನೋಡಿಲ್ಲ ಪರಿಣಾಮ 50 ಕುಟುಂಬಗಳು ಕತ್ತಲೆಯಲ್ಲೆ ಜೀವನ ಸಾಗಿಸುವಂತಾಗಿದೆ.

ಹೌದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮೇಖಳಿ ಗ್ರಾಮದ ಬಟನೂರೆ ತೋಟದ ವಸತಿ ಪ್ರದೇಶದಲ್ಲಿ ಸೂಮಾರು 50 ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ ಒಂದೆಡೆ ಕೇಂದ್ರ ಸರ್ಕಾರ ಪ್ರತಿ ಹಳ್ಳಿ ಪ್ರತಿ ಮನೆಗೆ ವಿಧ್ಯೂತ್ ಪೂರೈಕೆ ಮಾಡುವ ಗುರಿ ಹೊಂದಿದೆ ಆದ್ರೆ ದುರಂತ ಅಂದ್ರೆ ಪಕ್ಕದಲ್ಲೆ ವಿಧ್ಯೂತ ಹಾದು ಹೋದ್ರು ಈ 50 ಮನೆಗಳಿಗೆ ಮಾತ್ರ ವಿದ್ಯುತ್ ಭಾಗ್ಯ ದೊರಕಿಲ್ಲ. 2007-08 ರಲ್ಲಿ ಭಾಗ್ಯ ಜ್ಯೋತಿ ಯೋಜನೆಯಡಿಯಲ್ಲಿ ಈ ಮನೆಗಳಿಗೆ ವಿದ್ಯುತ್ ಮಂಜರಾಗಿತ್ತು ಇದನ್ನ ಗುತ್ತಿಗೆ ಪಡೆದ ಗುತ್ತಿಗೆದಾರ 20 ಕಂಬಗಳನ್ನ ಹಾಕಿ ಅವುಗಳಿಗೆ ವಿದ್ಯುತ್ ತಂತಿಯನ್ನ ಹಾಕದೆ ಕೆಲಸವನ್ನ ಅರ್ಧಕ್ಕೆ ನಿಲ್ಲಿಸಿ ಹೋಗಿ ಹತ್ತು ವರ್ಷ ಕಳೆದರು ಕಾಮಗಾರಿಯನ್ನ ಮಾತ್ರ ಪೂರ್ಣಗೊಳಿಸಿಲ್ಲಾ.

ಇನ್ನು ತೋಟದ ವಸತಿ ಪ್ರದೇಶದಲ್ಲಿ ಸುಮಾರು 300 ಜನ ವಾಸವಾಗಿದ್ದಾರೆ 30 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಹ ಇದ್ದಾರೆ ವಿದ್ಯುತ್ ಸಮಸ್ಯೆಯಿಂದಾಗಿ ವಿಧ್ಯಾರ್ಥಿಗಳ ವಿದ್ಯಾಭ್ಯಾಸಕ್ಕೂ ತೊಂದರೆ ಆಗುತ್ತಿದೆ. ವಿದ್ಯುತ್ ಇಲ್ಲದೆ ಇಲ್ಲಿನ ಜನ ಕುಡಿಯುವ ನೀರಿಗೂ ಪರದಾಡುವಂತಾಗಿದೆ ದೂರದ ಬೇರೆಯವರ ತೋಟದಿಂದ ನೀರು ತಂದು ಕುಡಿಯುವ ಸ್ಥಿತಿ ಈ ಜನರದ್ದು. ಇನ್ನು ಅಧಿಕಾರಿಗಳನ್ನ ಕೇಳಿದ್ರೆ ನಮಗೂ ಅದಕ್ಕೂ ಸಂಭಂದವೆ ಇಲ್ಲಾ ಅನ್ನೊ ರೀತಿ ವರ್ತನೆ ಮಾಡ್ತಾರೆ ಹೂಗ್ಲಿ ಗ್ರಾಮ ಪಂಚಾಯತಿಯವರಾದ್ರು ನಮ್ಮ ಸಮಸ್ಯೆ ಬಗೆ ಹರಿಸ್ತಾರೆ ಅಂದ್ರೆ ಅವರು ಭರವಸೆ ಮೇಲೆ ಭರವಸೆ ಕೊಡುತ್ತಲೆ ಹತ್ತು ವರ್ಷಗಳನ್ನ ಕಳೆದಿದ್ದಾರೆ.

ಒಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಪ್ರತಿ ಮನೆಗೆ ವಿದ್ಯುತ್ ನೀಡಿ ದೇವವನ್ನೆ ಕತ್ತಲೆ ಮುಕ್ತ ದೇಶ ಮಾಡಲು ಹೊರಟಿದೆ ಆದ್ರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನ ಪರದಾಡುವಂತಾಗಿದೆ ಇನ್ನಾದ್ರು ಅಧಿಕಾರಿಗಳು ಎಚ್ಚೆತ್ತುಕೊಂಡು ಇಲ್ಲಿನ ಮನೆಗಳಿಗೆ ವಿದ್ಯುತ್ ನೀಡಬೇಕಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights