ಎಂಟು ವರ್ಷದ ಪ್ರೀತಿ ಕೊಂದ ಕೊಲೆಗಾತಿ….!

ಅವರದ್ದು ಎಂಟು ವರ್ಷದ ಲವ್. ಅವನಿಗೆ ಆಕೆಯ ಲೈಲಾ. ಅವಳಿಗೆ ಅವನೇ ಮಜ್ನು. ಅವರದ್ದೇ ಬೇರೆ ಲೋಕ. ಜಗತ್ತಿನ ಅರಿವೇ ಇಲ್ಲದೆ ನನಗೆ ನೀನು-ನಿನಗೆ ನಾನು ಅಂತ ಪ್ರೀತಿ-ಪ್ರೇಮ-ಪ್ರಣಯದಲ್ಲಿದ್ರು. ಕೇಳಿದ್ನೆಲ್ಲಾ ಕೊಡಿಸ್ತಿದ್ದ ಆಕೆಗೆ ಉಡುಪಿಯಲ್ಲಿ ನರ್ಸಿಂಗ್ ಸೀಟ್ ಕೂಡ ಕೊಡ್ಸಿದ್ದ. ಆದ್ರೆ, ಆ ನರ್ಸಿಂಗ್ ಸೀಟೇ ಜೋಡಿಯ ಮಧ್ಯೆ ಬಿರುಕು ತಂದಿತ್ತು. ಪ್ರೇಯಸಿಯ ಓದು ಮುಗಿಯುವಷ್ಟರಲ್ಲಿ ಪ್ರಿಯಕರನ ಮೇಲಿನ ಮೋಹವು ಕಡಿಮೆಯಾಗಿತ್ತು. ಫೋನ್ ಸ್ವಿಚ್ ಆಫ್ ಆಗ್ತಿತ್ತು. ನಂಬರ್ ಬ್ಲಾಕ್ ಲೀಸ್ಟ್‍ನಲ್ಲಿರ್ತಿತ್ತು. ಎಂಟು ವರ್ಷ ಪ್ರೀತಿ ಕಳ್ಕೊಳ್ಳೊ ಆತಂಕದಲ್ಲಿ ಆತ ಮಾಡಿದ್ದೇನು ಗೊತ್ತಾ….

ಈ ಡೆತ್ ನೋಡಿ. ಇದರ ಹಿಂದೆ ಕಡು ಬಡತನದ ಕಣ್ಣೀರ ಕಹಾನಿಯೊಂದಿದೆ. ಮನಸ್ಸಿಗೆ ನೋವಾದಾಗ, ಜೀವನ ಬೇಜಾರಾದಾಗ, ನಂಬಿದವರು ಮೋಸ ಮಾಡಿದಾಗ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳೋದು ಕಾಮನ್. ಆದ್ರೆ, ಪ್ರೇಯಸಿನಯನ್ನ ನೋಡ ಹೊರಟಾಗ್ಲೇ ಡೆತ್‍ನೋಟ್ ಜೊತೆಯೇ ಹೋಗೋದಂದ್ರೆ ಮನಸ್ಸು ಎಷ್ಟು ಕಲ್ಲಾಗಿರಬಹುದು. ಹೌದು… ಈತನ ಹೆಸ್ರು ಸತೀಶ್. ಕೊಪ್ಪ ತಾಲೂಕಿನ ಬಸರೀಕಟ್ಟೆ ನಿವಾಸಿ. ಕಡುಬಡತನದಲ್ಲೂ ಕೆಟ್ಟ ಸ್ವಾಭಿಮಾನಿ. ನಾಲ್ಕು ಜನರರಂತೆ ಬದುಕಬೇಕೆಂದು ಸಾಲ ಮಾಡಿ ಆಟೋ, ಓಮ್ನಿ ಹಾಗೂ ತೂಫಾನ್ ಗಾಡಿ ಕೊಂಡು ದುಡಿದು ತೀರಿಸಿ ಸ್ವಾಭಿಮಾನದ ಬದುಕು ಸಾಗಿಸ್ತಿದ್ದ. ಸಂಬಂಧಿಕರ ಮನೆಗೆಂದು ಹೋದಾಗ ಮೂಡಿಗೆರೆ ತಾಲೂಕಿನ ಹಿರೇಬೈಲು ಗ್ರಾಮದ ಪಲ್ಲವಿ ಎಂಬುವಳ ಸ್ನೇಹವಾಗಿ, ಸ್ನೇಹ ಪ್ರೇಮಕ್ಕೆ ತಿರುಗಿ ಹುಚ್ಚನಂತೆ ಪ್ರೀತಿಸಿ, ಕೇಳಿದ್ನೆಲ್ಲಾ ಕೊಡಿಸ್ತಿದ್ದ. ನಾನಂತು ಓದಿಲ್ಲ. ನೀನಾದ್ರು ಓದು ಎಂದು ಆಕೆಗೆ ಉಡುಪಿಯಲ್ಲಿ ನರ್ಸಿಂಗ್ ಸೀಟ್ ಕೊಡಿಸಿ-ಓದಿಸಿದ. ಆಕೆಗೂ ಅಲ್ಲೇ ಕೆಲಸವೂ ಸಿಗ್ತು. ಅವರ ಪ್ರೇಮದ ಮಧ್ಯೆ ನರ್ಸಿಂಗ್ ಅಂತರ ತಂದಿತ್ತು. ಎರಡು ದೇಹ-ಒಂದೇ ಜೀವ ಅಂತಿದ್ದ ಜೋಡಿಯಲ್ಲಿ ನೀನ್ಯಾರೋ-ನಾನ್ಯಾರೋ ಎಂಬಂತಾಗಿತ್ತು.

ಪ್ರೇಯಸಿಯನ್ನ ಪತ್ನಿಯಂತೆ ನೋಡಿಕೊಳ್ತಿದ್ದವನ ಬಾಳಲ್ಲಿ ಉಡುಪಿಯ ನರ್ಸಿಂಗ್ ಕಾಲೇಜು ಬಿರುಗಾಳಿ ಎಬ್ಬಿಸಿತ್ತು. ಸತೀಶ್ ಫೋನಿಗಾಗಿ ಕಾಯ್ತಿದ್ದ ಪಲ್ಲವಿ ಫೋನ್ ಸ್ವಿಚ್ ಆಫ್ ಆಗ ತೊಡಗಿತು. ದಿನಪೂರ್ತಿ ನೀವು ಕರೆ ಮಾಡುತ್ತಿರುವ ಚಂದಾದಾರರು ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ ಅಂತಿತ್ತು. ನಂಬರ್ ಬ್ಲಾಕ್ ಲೀಸ್ಟ್ ಅನೌನ್ ನಂಬರಾಗಿತ್ತು. ಯಾವಾಗ ಪ್ರಿಯತಮೆ ನರ್ಸಿಂಗ್ ಮುಗಿಸಿ ದುಡಿಯೋಕೆ ಶುರುಮಾಡಿದ್ಲೋ ಸತೀಶ್‍ಗೂ ಗೌರ್ಮಮೆಂಟ್ ಕೆಲಸ ತಗೋ ಎಂದು ಟಾಸ್ಕ್ ಕೊಡ್ತಿದ್ಲು. ಪಾಪ… 9ನೇ ತರಗತಿ ಓದಿರೋ ಸತೀಶ್‍ಗೆ ಯಾವ ಕೆಲಸ ತಾನೇ ಸಿಕ್ಕುತ್ತೆ. ಇದೇ ವಿಷಯವಾಗ ಇಬ್ಬರ ಮಧ್ಯೆ ಆಗಾಗ ಸಣ್ಣ ಜಗಳವು ಆಗ್ತಿತ್ತು. ಜಗಳವಾದಾಗೆಲ್ಲಾ ಫೋನ್ ಸ್ವಿಚ್ ಆಫ್, ನಾಟ್ ರೀಚಬಲ್. ಒಂದೊಳ್ಳೆ ಸಮಯಕ್ಕಾಗಿ ಕಾಯ್ತಿದ್ದ ಸತೀಶ್ ಆಕೆ ಊರಿಗೆ ಬಂದಾಗ ಮನೆಗೆ ಹೋಗಿದ್ದಾನೆ. ಡೆತ್ ನೋಟ್ ಜೊತೆಯಲ್ಲೇ. ಇಬ್ಬರ ಮಧ್ಯೆ ಮತ್ತೆ ಜಗಳವಾದಾಗ ತಮ್ಮ ನೆಂಟರ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಸಾಯುವ ಮುನ್ನ ಸ್ಟೇಟಸ್‍ನಲ್ಲಿ ತನ್ನ ಸ್ನೇಹಿತರಿಗೆಲ್ಲಾ ನನ್ನ ಸಾವಿಗೆ ಈಕೆಯ ಕಾರಣ ಎಂದು ಮೇಸೆಜ್ ಹಾಕಿ ಡೆತ್ ನೋಟ್ ಬರೆದಿಟ್ಟು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾನೆ.

ಒಟ್ಟಾರೆ, ಅವನ ವಯಸ್ಸು 29. ಆಕೆಯದ್ದ 26. ಪ್ರೀತಿಸಿದಾಗ ಅವನದ್ದು 21, ಆಕೆಯದ್ದು 18. ಅದು ಪ್ರೇಮವೋ-ಅಟ್ರ್ಯಾಕ್ಷನ್ನೋ ಗೊತ್ತಿಲ್ಲ. ಅವನಿಗೆ ಪ್ರೀತಿ ಮೋಸ ಮಾಡ್ತೋ ಅಥವ ಆಕೆಯ ಭವಿಷ್ಯದ ಯೋಚನೆ ಮೋಸ ಮಾಡ್ತೋ ಅದೂ ಗೊತ್ತಿಲ್ಲ. ಹದಿಹರೆಯದ ಪ್ರೀತಿ ಕೊನೆಗೆ ಎಲ್ಲಿಗೆ ಬೇಕಾದ್ರು ಹೋಗಿ ಮುಟ್ಟಬಹುದು ಅನ್ನೋದಕ್ಕೆ ಈ ಸ್ಟೋರಿ ಸಾಕ್ಷಿ. ಪ್ರೀತಿ ಅಂತ ಆತ ಬಾರದ ಲೋಕಕ್ಕೆ ಹೋದ್ರೆ, ಆಕೆ ಮೋಸಗಾತಿ ಅನ್ನೋ ಹಣಪಟ್ಟಿ ಕಟ್ಕೊಳ್ಬೇಕಾಯ್ತು. ಪ್ರೀತಿನ ಬದುಕುವಂತೆ ಪ್ರೀತಿಸಿ, ಸಾಯುವಂತಲ್ಲ ಅನ್ನೋ ಆಸೆ ನಮ್ದು…

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights