ಚಂದ್ರನ ಮೇಲೆ ಕಟ್ಟಡ ಕಟ್ಟಲು ಮಾನವನ ಮೂತ್ರ ಬಳಸಬಹುದು – ಹೊಸ ಸಂಶೋಧನೆ

ಮನುಷ್ಯ ಅದೆಷ್ಟೋ ಗ್ರಹಗಳ ಬಗ್ಗೆ ಅನ್ವೇಷಣೆ ನಡೆಸಿದ್ದಾನೆ. ಬೇರೆ ಬೇರೆ ಗ್ರಹಗಳಿಗೆ ಭೇಟಿ ನೀಡಿದ್ದಾನೆ.  ಅಲ್ಲಿ ನೆಲೆಸಲು ಪ್ರಯತ್ನಗಳು, ಪ್ರಯೋಗಗಳು ನಡೆಯುತ್ತಲೇ ಇದೆ.  ಜೊತೆಗೆ ಚಂದ್ರ ಗ್ರಹಕ್ಕೂ ಭೇಟಿ ನೀಡಿದ ಮನಷ್ಯ ಸದ್ಯ ಹೊಸ ಅನ್ವೇಷಣೆಯೊಂದನ್ನ ಮಾಡಿದ್ದಾನೆ.

ಹೌದು… ಯುರೋಪ್ ನ ಅಂತರಿಕ್ಷ ಸಂಸ್ಥೆಯ ಸಂಶೋಧಕರು ಇತ್ತೀಚೆಗೆ ನಡೆಸಿದ ಅಧ್ಯಯನದಲ್ಲಿ ಚಂದ್ರನ ಮೇಲೆ ಕಟ್ಟಡ ನಿರ್ಮಾಣಕ್ಕೆ ಕಾಂಕ್ರೀಟ್ ತಯಾರಿಗೆ ಮಾನವನ ಮೂತ್ರ ಬಳಕೆಯ ವಸ್ತುವಾಗಬಹುದು ಎಂದು ಹೇಳಿದೆ. ಸಂಶೋಧಕರು ಕಟ್ಟಡ ನಿರ್ಮಿಸುವಾಗ ಕಾಂಕ್ರೀಟ್ ತಯಾರಿಗೆ ಮಿಶ್ರಣ ಮಾಡಲು  ಮನುಷ್ಯನ ಮೂತ್ರದಲ್ಲಿ ಇರುವ ಮುಖ್ಯ ಸಾವಯವ ಸಂಯುಕ್ತ ವಸ್ತು ಯೂರಿಯಾ ಬಳಕೆಯಾಗಬಹುದು ಎಂದಿದ್ದಾರೆ.

ಚಂದ್ರನ ಮೇಲೆ ಕಟ್ಟಡ ನಿರ್ಮಿಸಲು ಭೂಮಿಯಿಂದ ನಿರ್ಮಾಣಕ್ಕೆ ವಸ್ತುಗಳನ್ನು ಪೂರೈಸುವ ಅವಶ್ಯಕತೆ ಕಡಿಮೆಯಾಗಬಹುದು. ಆದರೆ  ಚಂದ್ರನ ಮೇಲ್ಮೈ ಮೇಲೆ ಲಭ್ಯವಾಗುವ ವಸ್ತುಗಳನ್ನು ಮಾತ್ರ ಬಳಕೆ ಮಾಡುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

ಜೊತೆಗೆ ಚಂದ್ರನ ಮೇಲ್ಮೈ ಮೇಲೆ ದೊರಕುವ ಪೌಡರ್ ತರಹದ ಮಣ್ಣನ್ನು ಚಂದ್ರನಲ್ಲಿ ನಿರ್ಮಾಣಕ್ಕೆ ಕಾಂಕ್ರೀಟ್ ತಯಾರಿಕೆಗೆ ಬಳಸಲಾಗುತ್ತದೆ. ಕಾಂಕ್ರೀಟ್ ತಯಾರಿಕೆಯಲ್ಲಿ ಯೂರಿಯಾ ಹದ ಮಿಶ್ರಣಕ್ಕೆ ಸಹಾಯ ಮಾಡುತ್ತದೆ.

ಭವಿಷ್ಯದಲ್ಲಿ ಚಂದ್ರನ ಮೇಲೆ ವಾಸಿಸಲು ಯೋಚಿಸುತ್ತಿರುವ ನಿವಾಸಿಗಳಿಗೆ ಧನ್ಯವಾದಗಳು, ಒಬ್ಬ ವ್ಯಕ್ತಿಯು ಪ್ರತಿದಿನ ಉತ್ಪಾದಿಸುವ 1.5 ಲೀಟರ್ (3.2 ಪಿಂಟ್) ಮೂತ್ರ ತ್ಯಾಜ್ಯವು ಬಾಹ್ಯಾಕಾಶ ಪರಿಶೋಧನೆಗೆ ಭರವಸೆಯ ಉಪ ಉತ್ಪನ್ನವಾಗಬಹುದು ಎಂದು ಯುರೋಪ್ ನ ಅಂತರಿಕ್ಷ ಸಂಸ್ಥೆ ಹೇಳಿದೆ. ಭೂಮಿ ಮೇಲೆ ಯೂರಿಯಾವನ್ನು ಕಾರ್ಖಾನೆಗಳಲ್ಲಿ ರಸಗೊಬ್ಬರ ತಯಾರಿಕೆಗೆ ಕಚ್ಚಾ ವಸ್ತುವಾಗಿ ಕಂಪೆನಿಗಳು ಬಳಕೆ ಮಾಡುತ್ತಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights