ಎನ್‍ಕೌಂಟರ್ ಬಗ್ಗೆ ಇಂಚಿಂಚು ಮಾಹಿತಿ ನೀಡಿದ – ಪೊಲೀಸ್ ಆಯುಕ್ತ ವಿಶ್ವನಾಥ್ ಸಜ್ಜನ್

ಪಶುವೈದ್ಯೆ ದಿಶಾ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನಡೆದ ಪೊಲೀಸ್ ಶೂಟೌಟ್ ಬಗ್ಗೆ ಸೈಬರಾಬಾದ್ ಪೊಲೀಸ್ ಆಯುಕ್ತ ವಿಶ್ವನಾಥ್ ಸಜ್ಜನರ್ ಇಂಚಿಂಚು ಮಾಹಿತಿ ನೀಡಿದ್ದಾರೆ.

ಒಟ್ಟು ನಾಲ್ಕು ಭಾಷೆಯಲ್ಲಿ ಇಂದು ಬೆಳಿಗ್ಗೆ ನಡೆದ ಎನ್ ಕೌಂಟರ್ ಬಗ್ಗೆ ಸಜ್ಜನ್ ಮಾಹಿತಿ ನೀಡಿದ್ದಾರೆ. ಘಟನೆ ನಡೆದ ಸ್ಥಳದಲ್ಲೇ ಮಾದ್ಯಮದವರಿಗೆ ಮಾಹಿತಿ ನೀಡಿದ್ದಾರೆ. ಸಜ್ಜನ್ ಅವರು ನೀಡಿದ ಘಟನೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

ಪ್ರಶ್ನೆ 1. ಆರೋಪಿಗಳನ್ನ ತಡರಾತ್ರಿ ಘಟನಾ ಸ್ಥಳಕ್ಕೆ ಕರೆತಂದ ಉದ್ದೇಶವೇನು..?

ಸಜ್ಜನ್ ಉತ್ತರ :- ಆರೋಪಿಗಳು ನಾಲ್ಕು ಜನ ದಿಶಾ ಅವರ ಮೊಬೈಲ್ ಹಾಗೂ ವಸ್ತುಗಳನ್ನು ಘಟನೆ ನಡೆದ ಸ್ಥಳದಲ್ಲಿ ಬಚ್ಚಿಟ್ಟಿರುವುದಾಗಿ ಮಾಹಿತಿ ನೀಡಿದ್ದರು. ಆ ಸ್ಥಳ ಪರಿಶೀಲನೆಗಾಗಿ ಮತ್ತು ಇನ್ನಷ್ಟು ಖಚಿತ ಮಾಹಿತಿ ಅವರನ್ನ ಪಡೆಯುವ ಉದ್ದೇಶದಿಂದ ಸ್ಥಳಕ್ಕೆ ಕರೆತರಲಾಯ್ತು. ಜೊತೆಗೆ ತಡರಾತ್ರಿ ಆರೋಪಿಗಳನ್ನು ಘಟನಾ ಸ್ಥಳಕ್ಕೆ ಕರೆತರಲು ಯೋಚಿಸಿದ್ದು ಸಾರ್ವಜನಿಕರು ಆರೋಪಿಗಳ ಮೇಲೆ ಸಿಡಿದ್ದೇದ್ದಿದ್ದು. ಒಂದು ಹಗಲು ಅವರನ್ನ ಸ್ಥಳಕ್ಕೆ ಕರೆತಂದಿದ್ದರೆ ಗಲಾಟೆಯಾಗುವ ಸಾಧ್ಯತೆ ಇತ್ತು. ಹೀಗಾಗಿ ತಡರಾತ್ರಿ ಅವರನ್ನ ಕರೆತಂದಿದ್ದೆವು.

ಪ್ರಶ್ನೆ 2 :- ಎನ್ ಕೌಂಟರ್ ಮಾಡಲು ಕಾರಣ..?

ಸಜ್ಜನ್ ಉತ್ತರ :- ನಾಲ್ಕು ಆರೋಪಿಗಳನ್ನ ನಾವು ಕರೆ ತಂದಾಗ ಒಬ್ಬ ಆರೋಪಿ ಪೊಲೀಸರ ಮೇಲೆ ಹಲ್ಲೆ ಮಾಡಿದ. ಜೊತೆಗೆ ಇನ್ನಳುದ ಆರೋಪಿಗಳು ಪೊಲೀಸರ ಗನ್ ಕಿತ್ತುಕೊಂಡರು. ಓಡಿ ಹೋಗಿ ಫೈಯರಿಂಗ್ ಮಾಡಿದ್ದಾರೆ. ಜೊತೆಗೆ ಕಲ್ಲು ತೂರಾಟ ಮಾಡಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಇಬ್ಬರು ಪೊಲೀಸರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಕೂಡ ಪಡೆಯುತ್ತಿದ್ದಾರೆ. ಪೊಲೀಸರ ಆತ್ಮರಕ್ಷೆಣೆಗಾಗಿ ನಾವು ಎನ್ ಕೌಂಟರ್ ಮಾಡುವುದು ಅನಿವಾರ್ಯವಾಯ್ತು.

ಪ್ರಶ್ನೆ 3 :- ಆರೋಪಿಗಳು ಅಪರಾಧಿಗಳಾಗದೇ ಶಿಕ್ಷೆ ನೀಡಿದ್ದು ಅಪರಾಧ ಎನ್ನುವುದು ಕೆಲವರ ಹೇಳಿಕೆ. ಇದಕ್ಕೆ ನಿಮ್ಮ ಉತ್ತರವೇನು..?

ಇದುವೇ ಅವರು ಬಹುಬೇಗ ಪೊಲೀಸರ ಮೇಲೆ ದಾಳಿ ನಡೆಸಲು ಕಾರಣವಾಯಿತು. ಅವರನ್ನು ನಾವು ಘಟನೆ ನಡೆದ ಸ್ಥಳಕ್ಕೆ ದಿಶಾರ ಮೊಬೈಲ್ ಹಾಗೂ ಇತರೇ ವಸ್ತುಗಳನ್ನು ವಶಕ್ಕೆ ಪಡೆಯಲು ಕರೆತಂದಿದ್ದೆವು. ಆದರೆ ಪ್ರಕರಣ ಮರುಸೃಷ್ಟಿಗೆ ಕರೆತಂದಿರಲಿಲ್ಲ. ಕಾನೂನು ತನ್ನ ಕೆಲಸವನ್ನು ಮಾಡಿದೆ ಅಷ್ಟೇ ಎಂದರು. ಅವರಿಗೆ ಯಾವುದೇ ಹ್ಯಾಂಡ್ ಕಪ್ ಹಾಕಿರಲಿಲ್ಲ. ಅಲ್ಲದೇ ಅವರು ಶಸ್ತ್ರಾಸ್ತಗಳನ್ನು ಬಳಕೆ ಮಾಡುವ ವಿಧಾನ ತಿಳಿದಿದ್ದರು ಎಂದು ಘಟನೆಯ ಬಗ್ಗೆ ಸವಿಸ್ತಾರ ಮಾಹಿತಿ ನೀಡಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights