ಕಮ್ಯುನಿಸ್ಟ್ ಮ್ಯಾನಿಫೆಸ್ಟೋ ಬುಕ್‌ ಮಾಡಿದವರಿಗೆ ಭಗವದ್ಗೀತೆ ಕಳಿಸಿದ ಅಮೆಜಾನ್

ಅಮೆಜಾನ್‌ನಲ್ಲಿ ಕಮ್ಯುನಿಸ್ಟ್‌ ಮ್ಯಾನಿಫೆಸ್ಟೋ (ಕಮ್ಯುನಿಸ್ಟ್‌ ಪ್ರಣಾಳಿಕೆ)ಯನ್ನು ಆರ್ಡರ್ ಮಾಡಿದ್ದ ವ್ಯಕ್ತಿಯೊಬ್ಬರಿಗೆ  ಭಗವದ್ಗೀತೆಯನ್ನು ಕಳುಹಿಸಿರುವ ಘಟನೆ ಕೊಲ್ಕತ್ತಾದಲ್ಲಿ ನಡೆದಿದೆ.

ಕೊಲ್ಕತ್ತಾದ ಸುತೀರ್ಥ ದಾಸ್‌ ಅವರು ಬುಧವಾರ(ಜೂನ್‌ 10) ಅಮೆಜಾನ್‌ ಇ-ಕಾಮರ್ಸ್ ನಲ್ಲಿ ಕಮ್ಯುನಿಸ್ಟ್‌ ಮ್ಯಾನಿಫೆಸ್ಟೋವನ್ನು ಆರ್ಡರ್‌ ಮಾಡಿದ್ದರು. ಮ್ಯಾನಿಫೆಸ್ಟೋ ಅಮೆಜಾನ್‌ನಲ್ಲಿ ಲಭ್ಯವಿದ್ದು, ಬುಕಿಂಗ್‌ ದೃಢಪಡಿಸಲಾಗಿತ್ತು. ಅವರಿಗೆ ಶನಿವಾರ ಕೊರಿಯರ್ ಕಳಿಸಿರುವ ಅಮೆಜಾನ್‌ ಕಮ್ಯುನಿಸ್ಟ್‌ ಮ್ಯಾನಿಫೆಸ್ಟೋ ಬದಲಾಗಿ ಭಗವದ್ಗೀತೆಯನ್ನು ಕಳುಹಿಸಿದ್ದಾರೆ.

কমিউনিস্ট ম্যানিফেস্টো' চাইলে আসছে ...

ಆದಾಗಿಯೂ, ಶನಿವಾರ, ರಾತ್ರಿ 11 ಗಂಟೆಯ ಸುಮಾರಿಗೆ ಮಹಿಳೆಯೊಬ್ಬರು ಸುಥೀರ್ತ ಅವರಿಗೆ  ಕರೆ ಮಾಡಿ, ಕಳುಹಿಸಲಾಗಿರುವ ಪ್ಯಾಕ್‌ ಅನ್ನು ತಿರಸ್ಕರಿಸಿ, ಅದರಲ್ಲಿ ಬೇರೆ ಪುಸ್ತಕವನ್ನು ಕಳುಹಿಸಲಾಗಿದೆ ಎಂದು ಕೇಳಿಕೊಂಡಿದ್ದರು. ಆದರೆ, ಸುಥೀರ್ತ ಅವರು ಆಫೀಸ್‌ನಲ್ಲಿದ್ದರಿಂದ ಬುಕಿಂಗ್‌ ರದ್ದು ಮಾಡುಲು ಸಾಧ್ಯವಾಗಿಲ್ಲ.

ಅವರು ಮನೆಗೆ ತೆರಳಿದ ನಂತರ ಪ್ಯಾಕೇಜ್ ಬಾಕ್ಸ್‌ ತೆರೆದಾಗ ಆಶ್ಚರ್ಯಗೊಂಡಿದ್ದಾರೆ. ಬುಕಿಂಗ್‌ ಫ್ಯಾಕ್‌ ಮೇಲೆ ಕಮ್ಯುನಿಸ್ಟ್‌ ಮ್ಯಾನಿಫೆಸ್ಟೋ ಎಂದು ಬರೆದಿದ್ದರೂ, ಒಳಗೆ ಭಗವದ್ಗೀತೆಯ ಪುಸ್ತಕವನ್ನು ಕಳುಹಿಸಲಾಗಿತ್ತು.

ಸುಥೀರ್ತ ಅವರು ಈ ಬಗ್ಗೆ ಒಂದು ಪೋಸ್ಟನ್ನೂ ಹಂಚಿಕೊಂಡಿದ್ದಾರೆ.

https://www.facebook.com/permalink.php?story_fbid=280887646436597&id=100035460923174

ಇಂತಹ ತಪ್ಪುಗಳು ವಿರಳವೇನಲ್ಲ. ಆದರೆ, ಕಮ್ಯುನಿಸ್ಟ್ ಪ್ರಣಾಳಿಕೆಗೆ ಬದಲಾಗಿ ಭಗವದ್ಗೀತೆಯ ವಿತರಣೆ ಆಶ್ಚರ್ಯವನ್ನುಂಟುಮಾಡಿದೆ. ಬಹುಶಃ ಕಮ್ಯುನಿಸ್ಟ್‌ ವಿರೋಧಿಗಳೂ, ಹುಸಿ ಹಿಂದುತ್ವದ ಅನುಯಾಯಿಗಳೂ ಅಮೆಜಾನ್‌ನಲ್ಲಿದ್ದು, ಇಂತಹ ಅದಲು-ಬದಲುಗಳನ್ನು ಬೇಕೆಂದೇ ಮಾಡಿರಬಹುದಾ ಎಂಬ ಸಂಶಯವೂ ವ್ಯಕ್ತವಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights