ಕಲಬುರಗಿಗೆ ಕೊರೊನಾ ಕಂಟಕ : ಇಂದು 8 ಹೊಸ ಪ್ರಕರಣಗಳು ಪತ್ತೆ!

ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುವ ಲಕ್ಷಣಗಳೇ ಗೋಚರವಾಗುತ್ತಿಲ್ಲ. ಅದ್ರಲ್ಲೂ ಕಲಬುರಗಿಗೆ ಕೊರೊನಾ ಕಂಟಕ ಶುರುವಾದಂತಿದೆ. ಇಂದು ಮತ್ತೆ ರಾಜ್ಯದಲ್ಲಿ 9 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಆ ಮೂಲಕ ರಾಜ್ಯದಲ್ಲಿ ಒಟ್ಟು ಕೊರೊನಾ ಪೀಡಿತರ ಸಂಖ್ಯೆ 532ಕ್ಕೇರಿಕೆಯಾಗಿದೆ.

ಹೌದು…. ಕಳೆದ 12 ಗಂಟೆಗಳಲ್ಲಿ ರಾಜ್ಯದಲ್ಲಿ 9 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ಈ 9 ಹೊಸ ಪ್ರಕರಣಗಳ ಪೈಕಿ ಕಲಬುರ್ಗಿಯಿಂದಲೇ 8 ವರದಿಯಾಗಿದೆ. ಮತ್ತೊಂದು ಪ್ರಕರಣ ಬೆಳಗಾವಿಯದ್ದು. ಇಲ್ಲಿಯವರೆಗೆ ರಾಜ್ಯದಲ್ಲಿ 20 ಮಂದಿ ಅಸುನೀಗಿದ್ದಾರೆ.

ಕಲಬುರ್ಗಿಯ 8 ಹೊಸ ಸೋಂಕಿತರಲ್ಲಿ ನಾಲ್ವರು ವ್ಯಕ್ತಿಗಳು ಪಿ-425 ರೋಗಿಯ ಸಂಪರ್ಕ ಹೊಂದಿ ಸೋಂಕು ಪಡೆದವರಾಗಿದ್ದಾರೆ. ಪಿ-205 ರೋಗಿಯ ಸಂಪರ್ಕದಿಂದ ಇಬ್ಬರಿಗೆ ಸೋಂಕು ಹರಡಿರುವುದು ತಿಳಿದುಬಂದಿದೆ.

ಒಟ್ಟಾರೆ, ಬೆಳಕಿಗೆ ಬಂದಿರುವ 9 ಪ್ರಕರಣಗಳಲ್ಲಿ ಐವರು ಮಹಿಳೆಯರಾಗದ್ದರೆ, ನಾಲ್ವರು ಪುರುಷರಾಗಿದ್ದಾರೆ. ಅಚ್ಚರಿ ವಿಚಾರವೆಂದರೆ ಎಲ್ಲಾ ಸೋಂಕಿತರೂ ಚಿಕ್ಕ ವಯಸ್ಸಿನವರೇ ಆಗಿದ್ದಾರೆ. ಕಲಬುರ್ಗಿಯ 40 ವರ್ಷದ ಮಹಿಳೆ ಬಿಟ್ಟರೆ ಉಳಿದವರೆಲ್ಲರೂ 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರೇ ಆಗಿದ್ದಾರೆ.

ಕಲಬುರ್ಗಿಯಲ್ಲಿ ಈಗ ಒಟ್ಟು ಪ್ರಕರಣ 52ಕ್ಕೆ ಏರಿದಂತಾಗಿದೆ. ಬೆಳಗಾವಿಯಲ್ಲಿ ಪ್ರಕರಣ ಸಂಖ್ಯೆ 53ಕ್ಕೆ ಏರಿದೆ. ಉತ್ತರ ಕರ್ನಾಟಕದ ಭಾಗಗಳು ಕೊರೋನಾ ಹಾಟ್ ಸ್ಪಾಟ್ ಆಗಿ ನಿರ್ಮಾಣವಾಗುತ್ತಿವೆ.

ಬೆಂಗಳೂರಿನಲ್ಲಿ ಒಂದೂ ಪ್ರಕರಣ ಪತ್ತೆಯಾಗದ ಕಾರಣ ಸಿಲಿಕಾನ್ ಸಿಟಿ ಜನ ಕೊಂಚ ರಿಲೀಫ್ ಆಗಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights