ಕಾರ್ಮಿಕ ಕಲ್ಯಾಣ ಹೆಸರಿನಲ್ಲಿ ಕಾರ್ಮಿಕರನ್ನು ಜೀತಕ್ಕೆ ತಳ್ಳಲು ಮುಂದಾಗಿದೆ ಸರ್ಕಾರ!

ಉತ್ತರ ಪ್ರದೇಶ ಸರ್ಕಾರ ವಲಸೆ ಆಯೋಗವನ್ನು ಸ್ಥಾಪಿಸುವ ಪ್ರಕ್ರಿಯೆಯಲ್ಲಿದೆ. ಈ ಆಯೋಗವು ವಲಸೆ ಕಾರ್ಮಿಕರ ಸಾಮಾಜಿಕ ಭದ್ರತೆ, ನಿರುದ್ಯೋಗ ಭತ್ಯೆ ಮತ್ತು ಮರು ಉದ್ಯೋಗ ನೆರವು ಮುಂತಾದ ನಿಬಂಧನೆಗಳನ್ನು ಒಳಗೊಂಡಂತೆ ವಲಸೆ ಅವರ ಹಕ್ಕುಗಳನ್ನು ಪರಿಶೀಲಿಸುತ್ತದೆ ಎಂದು ಮುಖ್ಯಮಂತ್ರಿ ಆದಿತ್ಯನಾಥ್ ಹೇಳಿದ್ದಾರೆ.

ಆಯೋಗದ ಅನುಮತಿಯಿಲ್ಲದೆ ಉತ್ತರ ಪ್ರದೇಶದಿಂದ ಕಾರ್ಮಿಕರನ್ನು ನೇಮಿಸಿಕೊಳ್ಳಲು ಇತರ ರಾಜ್ಯಗಳಿಗೆ ಅವಕಾಶ ನೀಡುವುದಿಲ್ಲ. ರಾಜ್ಯದ ವಲಸೆ ಕಾರ್ಮಿಕರನ್ನು ಇತರ ರಾಜ್ಯಗಳ ಶೋಷಣೆಯಿಂದ ತಪ್ಪಿಸುವ ಉದ್ದೇಶವಿದ್ದು, ಭವಿಷ್ಯದಲ್ಲಿ ವಲಸೆ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ರಾಜ್ಯವು ಅವರಿಗೆ ಸಾಮಾಜಿಕ ಭದ್ರತೆಯನ್ನು, ವಿಮಾ ರಕ್ಷಣೆಯನ್ನು ಒದಗಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ಅನ್ಯ ರಾಜ್ಯಗಳಿಗೆ ಉದ್ಯೋಗ ಅರಸಿ ಹೋಗುವವರು ಮೂರು ರೀತಿಯ ಸಾಂವಿಧಾನಿಕ ಹಕ್ಕುಗಳನ್ನು ಚಲಾಯಿಸುರೆ: 1. ಭಾರತದಾದ್ಯಂತ ಮುಕ್ತವಾಗಿ ಚಲಿಸುವ ಹಕ್ಕು.2. ಭಾರತದ ಯಾವುದೇ ಭಾಗದಲ್ಲಿ ವಾಸಿಸುವ ಹಕ್ಕು. ಮತ್ತು 3. ಅವರ ಆಯ್ಕೆಯ ಯಾವುದೇ ವೃತ್ತಿಯನ್ನು ಹೊಂದುವ ಹಕ್ಕು. ಮೊದಲ ಎರಡು ಹಕ್ಕುಗಳು ಆಯೋಗದ ನಿರ್ಬಂಧಗಳಿಗೆ ಒಳಪಟ್ಟಿರುತ್ತವೆ. ಸಾಮಾನ್ಯ ಜನರ ಹಿತದೃಷ್ಟಿಯಿಂದ ಅಥವಾ ಪರಿಶಿಷ್ಟ ಪಂಗಡದ ರಕ್ಷಣೆಗಾಗಿ ಮೂರನೇ ಹಕ್ಕನ್ನು ಮಾತ್ರ ನಿರ್ಬಂಧಿಸಬಹುದು ಎಂದು ಅವರು ಹೇಳಿದ್ದಾರೆ.

ಹೀಗಾಗಿ, ಒಂದು ರಾಜ್ಯದಿಂದ ಹೊರಹೋಗಲು ಮತ್ತು ಕೆಲಸವನ್ನು ತೆಗೆದುಕೊಳ್ಳಲು ಸಾಧ್ಯವಾಗುವುದು ನಾಗರಿಕರ ಮೂಲಭೂತ ಹಕ್ಕಾಗಿದೆ ಮತ್ತು ಅದನ್ನು ಮೊಟಕುಗೊಳಿಸಲಾಗುವುದಿಲ್ಲ. ಆದರೆ, ಜನಹಿತದ ಹೆಸರಿನಲ್ಲಿ ಉತ್ತರ ಪ್ರದೇಶದ ರಾಜ್ಯ ಸರ್ಕಾರ ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸಲು ಮುಂದಾಗಿದೆ.

Yogi makes life tougher for migrant workers; UP govt nod needed ...

ಸಾಂವಿಧಾನಿಕ ಉಲ್ಲಂಘನೆ 

ವಲಸೆ ಕಾರ್ಮಿಕರ ಉದ್ಯೋಗದ ವಿಚಾರದಲ್ಲಿ ರಾಜ್ಯ ಸರ್ಕಾರಗಳಿಗೆ ಯಾವುದೇ ಪಾತ್ರವಿಲ್ಲದಿದ್ದರೂ ಆದಿತ್ಯನಾಥ್ ಅವರು ತಮ್ಮ ವಾಕ್ಚಾತುರ್ಯದಿಂದ ಇದನ್ನು ಸಾಧಿಸಲು ಮುಂದಾಗಿದ್ದಾರೆ. ಆದರೆ, ಕಾರ್ಮಿಕರನ್ನು ಖಾಸಗಿ ಉದ್ಯೋಗದಾತರು ನೇಮಿಸಿಕೊಳ್ಳುತ್ತಾರೆ. ಅವರು ಯಾವ ಕಾನೂನಿನ ಆಧಾರದ ಮೇಲೆ ಉತ್ತರ ಪ್ರದೇಶ ಸರ್ಕಾರವನ್ನು ಸಂಪರ್ಕಿಸಲು ನಿರೀಕ್ಷಿಸಲು ಸಾಧ್ಯ? ಯಾವ ಕಾನೂನಿನ ಆಧಾರದ ಮೇಲೆ ಯು.ಪಿ ಸರ್ಕಾರ ಅವರನ್ನು ಕೇಳುತ್ತದೆ? ಆತಿಥೇಯ ರಾಜ್ಯಗಳಲ್ಲಿನ ಉದ್ಯೋಗದಾತರು ಮತ್ತು ಸರ್ಕಾರಗಳ ನಡುವಿನ ಕಾರ್ಯವಿಧಾನದ ಚೌಕಟ್ಟು ಏನು?

ಆತಿಥೇಯ ರಾಜ್ಯಗಳು ಉ.ಪ್ರ. ಸರ್ಕಾರ ರಚಿಸುವ ಆಯೋಗದ ತರ್ಕವನ್ನು ಒಪ್ಪದಿದ್ದರೆ ಮತ್ತು ತಮ್ಮ ಪ್ರದೇಶಗಳಲ್ಲಿ ಅಗತ್ಯ ಕಾನೂನು ನಿಯಮಗಳನ್ನು ಸ್ಥಾಪಿಸದಿದ್ದರೆ, ಈ ಯೋಜನೆ ಹೇಗೆ ಕಾರ್ಯಗತಗೊಳ್ಳಲು ಸಾಧ್ಯವಾಗುತ್ತದೆ. ಆಗಲೂ, ಅಂತಹ ವ್ಯವಸ್ಥೆಯು ಸಾಂವಿಧಾನಿಕ ಚೌಕಟ್ಟಿನಲ್ಲಿರಲು ಸಾಧ್ಯವಿಲ್ಲ, ಅದಕ್ಕೆ ಸಂವಿಧಾನದಲ್ಲಿ ಆಸ್ಪದವಿಲ್ಲ.

Migrant Workers Including Non-Card Holders To Get Free Food Grains ...

ವಲಸೆ ಕಾರ್ಮಿಕರನ್ನು ನೇಮಿಸಿಕೊಳ್ಳಲು ಉದ್ಯೋಗದಾತರಿಗೆ ಪರವಾನಗಿ ನೀಡುವ ವ್ಯವಸ್ಥೆಯನ್ನು ಸ್ಥಾಪಿಸುವುದು ರಾಜ್ಯಗಳ ವ್ಯಾಪ್ತಿಯನ್ನು ಮೀರಿದ್ದಾಗಿದ್ದು, ರಾಜ್ಯ ಸರ್ಕಾರ ಅದರಲ್ಲಿ ಮಧ್ಯಪ್ರವೇಶಿಸಲು ಅವಕಾಶವಿಲ್ಲ.

ಒಂದು ವೇಳೆ ಉದ್ಯೋಗದಾತರು ರಾಜ್ಯ ಸರ್ಕಾರದ ಆಯೋಗವನ್ನು ಸಂಪರ್ಕಿಸಿದರೂ ಅದು ಯಾವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಊಹಿಸುವುದು ಕಷ್ಟವಾದದ್ದೇನೂ ಅಲ್ಲ.  ರಾಜಕೀಯ ನಾಯಕರು ಮತ್ತು ಬಂಡವಾಳಶಾಹಿ ವ್ಯವಹಾರಗಳ ನಡುವಿನ ಸಂಬಂಧವು ದೇಶಾದ್ಯಂತ ಸರ್ವವ್ಯಾಪಿ ಮಾರಕವಾಗಿರುವಾಗ, ಈ ಪ್ರಕ್ರಿಯೆಯೂ ಬಂಡವಾಳಿಗರಿಗೆ ಅನುಕೂಲ ಮಾಡಿಕೊಡುವಂತಿರುತ್ತದೆಯೇ ಹೊರತು ಕಾರ್ಮಿಕರಿಗಲ್ಲ.

ಇದಕ್ಕೆ ಇತ್ತೀಚೆಗಿನ ಉದಾಹರಣೆಯನ್ನು ಗಮನಿಸುವುದಾದರೆ, ಎರಡು ವಾರಗಳ ಹಿಂದೆ ಉತ್ತರ ಪ್ರದೇಶ ಸರ್ಕಾರ ಕಾರ್ಮಿಕ ಹಕ್ಕುಗಳನ್ನು ರದ್ದುಗೊಳಿಸಿ, ದುಡಿಯುವ ಅವಧಿಯನ್ನು ಏರಿಸಿ ಸುಗ್ರೀವಾಜ್ಞೆಯನ್ನು ಜಾರಿಗೊಳಿಸಲು ಮುಂದಾಗಿತ್ತು. ತೀವ್ರ ವಿರೋಧದ ಬಳಿಕ ತನ್ನ ನಿರ್ಧಾರವನ್ನು ಹಿಂಪಡೆದುಕೊಂಡಿತು.

ಹೀಗಿರುವಾಗ ಗೇಟ್‌ ಕೀಪರ್‌ನಂತೆ ಕೆಲಸ ಮಾಡುವ ಆಯೋಗವು, ಕಾರ್ಮಿಕರು ತಮ್ಮ ಉದ್ಯೋಗವನ್ನು ಸ್ವತಂತ್ರವಾಗಿ ಹುಡುಕಿಕೊಳ್ಳುವುದನ್ನು ನಿಯಂತ್ರಿಸುತ್ತದೆ. ಅಲ್ಲದೆ, ಉದ್ಯೋಗ ಪಡೆಯಲು ಸರ್ಕಾರದ ಅನುಮತಿ ಮತ್ತು ವ್ಯವಹಾರ ಸಂಬಂದಿಂದಾಗಿ ಉದ್ಯೋಗ ಪಡೆಯುವ ಅವಕಾಶಗಳನ್ನೂ ಸೀಮಿತಿಗೊಳಿಸುತ್ತದೆ.

ಅಲ್ಲದೆ, ಕಾರ್ಮಿಕರ ವಿಚಾರದಲ್ಲಿ ಸರ್ಕಾರ ಬಳಸಿರುವ ಭಾಷೆಯೇ ಗೊಂದಲಮಯವಾಗಿದೆ. ಕಾರ್ಮಿಕರನ್ನು “ಉತ್ತರ ಪ್ರದೇಶದ ಮಾನವಶಕ್ತಿ” ಎಂದು ಬಳಸಲಾಗಿದ್ದು, ಕಾರ್ಮಿಕರು ಸರ್ಕಾರದ ಒಡೆತನದಲ್ಲಿದ್ದಾರೆ ಎಂದು ಭಾವಿಸಿದಂತಿದೆ.

ಉತ್ತರ ಪ್ರದೇಶ ಸರ್ಕಾರದ ಒಪ್ಪಿಗೆ ಮತ್ತು ಅನುಮತಿಯಿಲ್ಲದೆ ಮತ್ತೊಂದು ರಾಜ್ಯವು ಕಾರ್ಮಿಕರನ್ನು “ಕರೆದೊಯ್ಯಲು” ಸಾಧ್ಯವಿಲ್ಲ ಎಂದು ಒತ್ತಾಯಿಸುವುದು ಕಾರ್ಮಿಕರನ್ನು ತನ್ನ ಅಧೀನದಲ್ಲಿ ಒಟ್ಟುಕೊಂಡಿದೆ ಎಂಬುದನ್ನು ಸೂಚಿಸುತ್ತದೆ. ಇದು ಕಾರ್ಮಿಕರ ಸಾಂವಿಧಾನಿಕ ಹಕ್ಕುಗಳನ್ನು ಕಿತ್ತುಕೊಂಡತಾಗುತ್ತದೆ.

“ಕಾರ್ಮಿಕರು ಅವರ ಆಯ್ಕೆಯ ಪ್ರಕಾರ ಕೆಲಸ ಮಾಡಲು ಸಾಧ್ಯವಿಲ್ಲ. ಸರ್ಕಾರವು ಅವರಿಗಾಗಿ ಆಯ್ಕೆಮಾಡುವ ಉದ್ಯೋಗದಾತರಲ್ಲಿ ಮಾತ್ರ ಅವರು ಕೆಲಸ ಮಾಡಬಹುದು. ಕಾರ್ಮಿಕರು ಎಲ್ಲಿ ಕೆಲಸ ಮಾಡಬೇಕು ಮತ್ತು ಯಾರಿಗಾಗಿ ಕೆಲಸ ಮಾಡಬೇಕು ಎಂಬುದನ್ನು ಸರ್ಕಾರ ನಿರ್ಧರಿಸುತ್ತದೆ. ಅಲ್ಲದೆ, ನೀವು ಸಾಂವಿಧಾನಿಕ ಹಕ್ಕುಗಳನ್ನು ಚಲಾಯಿಸಲು ಸ್ವತಂತ್ರರಾಗಿದ್ದೀರಾ ಎಂದು ಸರ್ಕಾರ ನಿರ್ಧರಿಸುತ್ತದೆ.”

ಆದರೆ, ಉತ್ತರ ಪ್ರದೇಶದಿಂದ ಹೊರ ರಾಜ್ಯಗಳಿಗೆ ಉದ್ಯೋಗ ಅರಸಿ ಹೋಗುವ ವೈಟ್‌ ಕಾಲರ್ (ಮೇಲ್ದರ್ಜೆಯ ಹುದ್ದೆ) ಉದ್ಯೋಗಿಗಳಿಗೆ ಇದೇ ರೀತಿಯ ನಿರ್ಬಂಧಗಳನ್ನು ರಾಜ್ಯ ಎಂದಾದರೂ ಸೂಚಿಸುತ್ತದೆಯೇ? ಉತ್ತರ ಪ್ರದೇಶದ ನ್ಯಾಯಾಂಗ ಸೇವಾ ಆಕಾಂಕ್ಷಿಗಳು ಬಿಹಾರ ಅಥವಾ ಜಾರ್ಖಂಡ್‌ನಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸುವ ಮೊದಲು ಆಯೋಗದ ಅನುಮತಿ ಪಡೆಯುವ ಅಗತ್ಯವಿದೆಯೇ? ಸಾರ್ವಜನಿಕ ಸೇವೆಗಳಲ್ಲಿ ರಾಜ್ಯದ ಜನರನ್ನು ನೇಮಿಸುವ ಮೂಲಕ “ಯುಪಿಯ ಮಾನವಶಕ್ತಿ” ಯನ್ನು ತೆಗೆದುಕೊಳ್ಳಲು ಇತರ ರಾಜ್ಯಗಳಿಗೆ ಅವಕಾಶ ನೀಡಲಾಗುತ್ತದೆಯೇ? ಅಥವಾ ಈ ನಿರ್ಬಂಧ ಅವರಿಗೆ ಅನ್ವಯವಾಗುವುದೇ ಎಂದು ಗಮನಿಸಿದರೆ ಖಂಡಿತಾವಾಗಿಯೂ ಅನ್ವಯವಾಗುವುದಿಲ್ಲ.

ಆದರೆ, ವಲಸೆ ಕಾರ್ಮಿಕರು ತಮ್ಮ ಉದ್ಯೋಗದಾತರು ಅಥವಾ ಉದ್ಯೋಗವನ್ನು ಆಯ್ಕೆ ಮಾಡಲು ಸ್ವತಂತ್ರರಲ್ಲ. ಬದಲಾಗಿ ಸರ್ಕಾರದ ಈ ನಿಯಮಗಳು ಮೂಲಭೂತವಾಗಿ ಗುಲಾಮಗಿರಿಯ ರೂಪಾಂತರವಾಗಿವೆ. ಈ ಪದ್ಧತಿ ಭಾರತದಲ್ಲಿ ಕಾನೂನುಬಾಹಿರವಾಗಿದೆ.

ಕೊರೊನಾ ಬಿಕ್ಕಟ್ಟಿನ ನೆಪದಲ್ಲಿ, ಭಾರತದಲ್ಲಿನ ಕಾರ್ಮಿಕರು ಇಚ್ಚಾಸಕ್ತಿಗಳನ್ನು ಕಡೆಗಣಿಸಲಾಗುತ್ತಿದೆ. ಏಕೆಂದರೆ ಅವರು ತಮ್ಮ ದೇಹ, ಮನಸ್ಸು ಮತ್ತು ಆತ್ಮಗಳ ಮೇಲೆ ಸರ್ಕಾರದ ಸಂಪೂರ್ಣ ಪ್ರಾಬಲ್ಯವನ್ನು ಒಪ್ಪಿಕೊಳ್ಳಬೇಕು. ಉ.ಪ್ರ.ದ ಯೋಗಿ ಆದಿತ್ಯನಾಥ್‌ ಸರ್ಕಾರ, ಕಾರ್ಮಿಕರ ಉದ್ದಾರಕ್ಕಾಗಿ ಆಯೋಗ ಮಾಡುತ್ತೇವೆಂದು ಹೇಳುತ್ತಾ, ಕಾರ್ಮಿಕರನ್ನು ಮತ್ತೆ ಜೀತಪದ್ದತಿಗೆ ದೂಡಲು ಹವಣಿಸುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights