ಕಾಶಿ, ಮಥುರಾದ ಮಸೀದಿ ಕೆಡವಿ ಮಂದಿರ ನಿರ್ಮಾಣ: ಹೇಳಿಕೆಗೆ ಈಗಲೂ ಬದ್ದ: ಈಶ್ವರಪ್ಪ

ಆಯೋಧ್ಯೆಯ ರೀತಿಯಲ್ಲಿ ಕಾಶಿ ಹಾಗೂ ಮಥುರಾದಲ್ಲಿಯೂ ಮಸೀದಿಗಳನ್ನು ಉರುಳಿಸಿ, ದೇವಾಲಯಗಳನ್ನು ಕಟ್ಟುತ್ತೇವೆ ಎಂಬ ಹೇಳಿಕೆಗೆ ಈಗಲೂ ಬದ್ದನಾಗಿದ್ದೇನೆ ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ.

ಆಗಸ್ಟ್‌ 05 ರಂದು ಅಯೋಧ್ಯೆ ರಾಮಮಂದಿರದ ಶಿಲಾನ್ಯಾಸ ಕಾರ್ಯಕ್ರಮದ ಭಾಗವಾಗಿ ಶಿವಮೊಗ್ಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಈಶ್ವರಪ್ಪ, ಆಯೋಧ್ಯೆಯಂತೆಯೇ ಕಾಶಿ ಹಾಗೂ ಮಥುರಾದಲ್ಲಿ ಮಸೀದಿಗಳು ಉರುಳಲಿವೆ. ಆ ಜಾಗಗಳಲ್ಲಿ ದೇವಾಲಯ ನಿರ್ಮಾಣವಾಗಲಿದೆ ಎಂದು ಹೇಳಿದ್ದರು.

ಇಂತಹ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ್ದ ಸಂಸದ ಅಸಾದುದ್ದೀನ್ ಓವೈಸಿಯವರು, ಕಾಶಿಯಲ್ಲಿ ಧರ್ಮ ಸಂಸತ್ತು ಮಾಡುತ್ತಾರೆ ಹಾಗೂ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದರು.

ಓವೈಸಿ ಅವರ ಹೇಳಿಕೆಗೆ ಪ್ರತಿಕ್ರಿಸಿರುವ ಈಶ್ವರಪ್ಪ, ದೇವಸ್ಥಾನಗಳ ಅಭಿವೃದ್ದಿ ಆಗಬೇಕು ಎಂಬುವುದು ಸ್ವಾತಂತ್ರ್ಯ ವೀರರ ಅಪೇಕ್ಷೆ ಆಗಿತ್ತು. ಮುಸ್ಲಿಮರನ್ನು ನೋವು ಮಾಡುವ ಉದ್ದೇಶ ನನ್ನದಲ್ಲ, ಆದರೆ ಮಂದಿರವಂತೂ ಆಗಬೇಕು ಎಂಬುವುದು ನನ್ನ ಆಸೆ ಎಂದಿದ್ದಾರೆ.

ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ. ನಾನು ನೂರು ಬಾರಿ ಬಂಧನಕ್ಕೊಳಗಾಗಲು  ಸಿದ್ಧನಾಗಿದ್ದೇನೆ. ಬೇಕಾದರೆ ಇಡೀ ಜೀವನ ಜೈಲಲ್ಲೇ ಇರುತ್ತೇನೆ. ಅಯೋಧ್ಯೆಯ ರಾಮಮಂದಿರ ಶಿಲಾನ್ಯಾಸದ ದಿನ ನನ್ನ ಭಾವನೆಯನ್ನು ಹಂಚಿಕೊಂಡಿದ್ದೇನೆ ಎಂದಿದ್ದಾರೆ.


ಇದನ್ನೂ ಓದಿ:  ಬಿಜೆಪಿ ರಾಜಕೀಯಕ್ಕೆ ಹೊಸ ದಾಳ: ಅಯೋಧ್ಯೆ ಮುಗೀತು ಮಥುರಾ ಮೇಲೆ ಸಂಘಿಗಳ ಕಣ್ಣು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights