ಕೆ.ಆರ್.ಎಸ್ ಗೆ ಬರೋ ಪ್ರವಾಸಿಗರ ಮೇಲೆ ಶುಲ್ಕ,ಸುಂಕ, ಬರೆ‌…..!

ಕೆ.ಆರ್.ಎಸ್ ಗೆ ಬರೋ ಪ್ರವಾಸಿಗರ ಮೇಲೆ ಶುಲ್ಕ ,ಸುಂಕದ ಬರೆ‌ ಬಿದ್ದಿದೆ. ಹೌದು… ಕೆ.ಆರ್.ಎಸ್ ‌ ನ ಪ್ರವೇಶ ಶುಲ್ಕ, ಪಾಕಿಂಗ್ ಶುಲ್ಕ, ಟೋಲ್ ಶುಲ್ಕದಲ್ಲಿ ಹೆಚ್ಚಳ ಮಾಡಲಾಗಿದೆ. ಕಾವೇರಿ‌ ನೀರಾವರಿ ನಿಗಮ ಪ್ರವೇಶ ಶುಲ್ಕ, ಪಾರ್ಕಿಂಗ್ ಶುಲ್ಕ, ಟೋಲ್ ಶುಲ್ಕ ಹೆಚ್ಚಳ ಮಾಡಿದೆ.

ಇದೇ ಅ-೦೧ ರಿಂದ ಶುಲ್ಕ ಹೆಚ್ಚಳಕ್ಕೆ ಆದೇಶ ಹೊರಡಿಸಿದೆ. ಈ ಹಿಂದೆ ಇದ್ದ‌ ದರಕ್ಕೆ‌ ಒಂದು ಪಟ್ಟು ಅಂದರೆ ೨೫ ರೂ ಪ್ರವೇಶ ಶುಲ್ಕ ೫೦ ಕ್ಕೆ ಏರಿಕೆ ಮಾಡಲಾಗಿದೆ. ವಾಹನ ಪಾರ್ಕಿಂಗ್ ಶುಲ್ಕ ಮತ್ತು‌ ಸೇತುವೆ ಟೋಲ್ ಸುಂಕ ಕೂಡ ಡಬಲ್ ಮಾಡಲಾಗಿದೆ.

ಕಾವೇರಿ‌ ನೀರಾವರಿ ನಿಗಮ ಪ್ರವಾಸಿಗರ ಮೇಲೆ ಶುಲ್ಕದ ಹೊರೆ ಹೊರಿಸಲು ಮುಂದಾಗಿದೆ ಎನ್ನುವ ಆರೋಪಗಳು ಪ್ರಾವಾಸಿಗರಿಂದ ಕೇಳಿ ಬರುತ್ತಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights