ದೇಶದಲ್ಲಿ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆ : ಸಾವಿನ ಸಂಖ್ಯೆ ಏರಿಕೆ!

ದೇಶದಲ್ಲಿ ಹೊಸದಾಗಿ ದಾಖಲಾದ ಕೊರೊನಾ ಪ್ರಕರಣಗಳ ಸಂಖ್ಯೆ ಗಮನಾರ್ಹ ಕುಸಿಯುತ್ತಿದ್ದು ಸಾವಿನ ಸಂಖ್ಯೆ ಮಾತ್ರ ಏರಿಕೆಯಾಗುತ್ತಿದ್ದು ಆತಂಕವನ್ನು ಹೆಚ್ಚಿಸುತ್ತಲೇ ಇದೆ.

ಭಾರತ ದೈನಂದಿನ ಕೋವಿಡ್ -19 ಪ್ರಕರಣಗಳಲ್ಲಿ ಗಮನಾರ್ಹ ಕುಸಿತವನ್ನು ದಾಖಲಿಸುತ್ತಿದೆ ಆದರೆ ಸೋಂಕಿನಿಂದಾಗಿ ಸಾವಿನ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡುಬಂದಿದೆ. ಕಳೆದ 24 ಗಂಟೆಗಳಲ್ಲಿ 2,63,533 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿವೆ. ಕೋವಿಡ್ -19 ಸಾವುಗಳು ಸಂಖ್ಯೆ ಪ್ರತಿನಿತ್ಯ ನಲವತ್ತು ಸಾವಿರ ದಾಖಲಾಗುತ್ತಿದ್ದು ಕಳೆದ 24 ಗಂಟೆಯಲ್ಲಿ 4,329 ರಷ್ಟು ಏರಿಕೆಯಾಗಿದೆ.

ಕಳೆದ 24 ಗಂಟೆಗಳಲ್ಲಿ ಗರಿಷ್ಠ ಸಂಖ್ಯೆಯ ಕೋವಿಡ್ -19 ಪ್ರಕರಣಗಳಿಗೆ ಕಾರಣವಾದ ಮೊದಲ ಐದು ರಾಜ್ಯಗಳಲ್ಲಿ 38,603 ಪ್ರಕರಣಗಳು ಕರ್ನಾಟಕ, ನಂತರದ ಸ್ಥಾನಗಳಲ್ಲಿ ತಮಿಳುನಾಡು 33,075, ಮಹಾರಾಷ್ಟ್ರ 26,616 ಪ್ರಕರಣಗಳು, ಕೇರಳದಲ್ಲಿ 21,402 ಪ್ರಕರಣಗಳು ಮತ್ತು ಪಶ್ಚಿಮ ಬಂಗಾಳದಲ್ಲಿ 19,003 ಪ್ರಕರಣಗಳಿವೆ.

ಈ ಐದು ರಾಜ್ಯಗಳಿಂದ ಸುಮಾರು 52.63 ರಷ್ಟು ಹೊಸ ಪ್ರಕರಣಗಳು ವರದಿಯಾಗಿದ್ದು, ಕರ್ನಾಟಕ ಮಾತ್ರ ಹೊಸ ಪ್ರಕರಣಗಳಲ್ಲಿ ಶೇ 14.65 ರಷ್ಟಿದೆ.

ಕಳೆದ 24 ಗಂಟೆಗಳಲ್ಲಿ ಒಟ್ಟು 4,329 ಜನರು ಕರೋನವೈರಸ್‌ಗೆ ಬಲಿಯಾಗಿದ್ದಾರೆ. ಮಹಾರಾಷ್ಟ್ರದಲ್ಲಿ (1000) ಗರಿಷ್ಠ ಸಾವುನೋವುಗಳು ವರದಿಯಾಗಿವೆ, ನಂತರ ಕರ್ನಾಟಕವು 476 ದೈನಂದಿನ ಸಾವುಗಳನ್ನು ಹೊಂದಿದೆ.

ಹೊಸ ಪ್ರಕರಣಗಳಲ್ಲಿ ಮಹಾರಾಷ್ಟ್ರವು ಭಾರಿ ಕುಸಿತ ಕಂಡಿದೆ. 24 ಗಂಟೆಗಳ ಅವಧಿಯಲ್ಲಿ 26,616 ಸೋಂಕುಗಳೊಂದಿಗೆ ಕೋವಿಡ್ -19 ಹೊಸ ಪ್ರಕರಣಗಳಲ್ಲಿ ಮಹಾರಾಷ್ಟ್ರ ಸೋಮವಾರ ಮತ್ತಷ್ಟು ಕುಸಿತ ಕಂಡಿದೆ.

ದೇಶದಲ್ಲಿ ಒಟ್ಟು 4,22,436 ಜನರು ಈ ಕಾಯಿಲೆಯಿಂದ ಚೇತರಿಸಿಕೊಂಡಿದ್ದು, ಒಟ್ಟು 2,15,96,512 ಜನ ಡಿಸ್ಚಾರ್ಜ್ ಆಗಿದ್ದಾರೆ. 33,53,765 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 18,44,53,149 ಜನರಿಗೆ ಸೋಂಕಿನ ವಿರುದ್ಧ ಲಸಿಕೆ ನೀಡಲಾಗಿದೆ.

ಭಾರತದಲ್ಲಿ ಒಟ್ಟು ಸೋಂಕಿನ ಪ್ರಕರಣಗಳು 25 ಮಿಲಿಯನ್ ಗಡಿ ದಾಟುತ್ತಿದ್ದಂತೆ ಅಮೇರಿಕದ ನಂತರ ಅತೀ ಹೆಚ್ಚು ಕೊರೊನಾ ಹಾನಿಗೊಳಗಾದ ವಿಶ್ವದ ಎರಡನೇ ರಾಷ್ಟ್ರವಾಗಿದೆ. ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ ದೇಶದ ಒಟ್ಟು ಪ್ರಕರಣಗಳ ಸಂಖ್ಯೆ ಈಗ 25.23 ಮಿಲಿಯನ್ ಆಗಿದ್ದರೆ, ಸಾವಿನ ಸಂಖ್ಯೆ 278,719 ಆಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights