ಪಾಕಿಸ್ತಾನಿ ಹಿಂದೂಗಳಿಗೆ ವೀಸಾವನ್ನೇ ನೀಡುತ್ತಿಲ್ಲ ಮೋದಿ ಸರ್ಕಾರ

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಿ 2014ಕ್ಕೂ ಮೊದಲು ಭಾರತಕ್ಕೆ ವಲಸೆ ಬಂದು ನೆಲೆಸಿರುವ ಪಾಕಿಸ್ತಾನಿ ಹಿಂದೂಗಳಿಗೆ ಭಾರತದ ಪೌರತ್ವ ನೀಡಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮುಂದಾಗಿದೆ. ಇದೇ ಸಂದರ್ಭದಲ್ಲಿ ಭಾರತಕ್ಕೆ ಬಂದು ಹೋಗಲು ಬಯಸುತ್ತಿರುವ ಹಿಂದೂಗಳ ಪ್ರವೇಶ ಅರ್ಜಿಗಳನ್ನು ತಿರಸ್ಕಾರಗೊಳಿಸಲಾಗುತ್ತಿದೆ.

 

ಹಿಂದೂಗಳ ಪವಿತ್ರ ನದಿಯಂದೇ ಭಾವಿಸಿರುವ ಗಂಗಾ ನದಿಯಲ್ಲಿ ಸತ್ತವರ ಚಿತಾಭಸ್ಮವನ್ನು ಬಿಟ್ಟು, ಪಿಂಡ ಇಡುವುದು ಹಿಂದೂಗಳ ಸಂಪ್ರದಾಯ. ಆ ಕಾರಣಕ್ಕಾಗಿ ಭಾರತದ ಗಡಿ ಭಾಗದಲ್ಲಿ ನೆಲೆಸಿರುವ ಪಾಕಿಸ್ತಾನಿ ಹಿಂದೂಗಳು ತಮ್ಮ ಸಂಬಂಧಿಗಳ ಅಂತಿಮ ಕಾರ್ಯವನ್ನು ಗಂಗಾ ನದಿಯಲ್ಲಿ ಮಾಡಲು ಬಯಸಿ ಭಾರತದ ವಿಸಾಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ. ಇವರಲ್ಲಿ ಕೆಲವರು ಸೂಕ್ತ ದಾಖಲೆಗಳೊಂದಿಗೆ ಹಲವಾರು ಬಾರಿ ಅರ್ಜಿ ಸಲ್ಲಿಸಿದ್ದಾರೆ. ಆದರೂ, ಯಾವುದೇ ಕಾರಣಗಳನ್ನು ನೀಡದೆ ಅವರ ಅರ್ಜಿಗಳನ್ನು ಭಾರತ ಸರ್ಕಾರ ತಿರಸ್ಕರಿಸುತ್ತಿದೆ.

 

ಅಂತಿಮ ಸಂಸ್ಕಾರದ ವಿಧಿ-ವಿಧಾನಗಳನ್ನು ನಿರ್ವಹಿಸುವ ಉದ್ದೇಶಕ್ಕೆ ಭಾರತಕ್ಕೆ ಬರುವವರು ವೀಸಾ ಪಡೆಯಲು, ಸತ್ತ ವ್ಯಕ್ತಿಯ ಮರಣ ಪ್ರಮಾಣ ಪತ್ರ, ಅರ್ಜಿದಾರರ ರಾಷ್ಟ್ರೀಯ ಗುರುರತಿನ ಚೀಟಿ, ವಿದ್ಯುತ್‌ ಬಿಲ್‌ ಜೆರಾಕ್ಸ್‌ ಗಳನ್ನು, ಪೊಲೀಸ್‌ ಪ್ರಮಾಣಪತ್ರವನ್ನು ಅರ್ಜಿಯೊಂದಿಗೆ ಒದಗಿಸಬೇಕು ಹಾಗೂ ಆ ವ್ಯಕ್ತಿ ಹರಿದ್ವಾರಕ್ಕೆ ಭೇಟಿ ನೀಡಲು ಬಯಸಿದರೆ ಹರಿದ್ವಾರದಲ್ಲಿ ವಾಸಿಸುವ ಯಾಒಬ್ಬ ವ್ಯಕ್ತಿಯಿಂದ ಸ್ಪಾನ್ಸರ್‌ಶಿಪ್‌ ಲೆಟರ್‌ ಹೊಂದಿರಬೇಕು ಮತ್ತು ಈ ಪತ್ರಕ್ಕೆ ಪೊಲೀಸ್‌ ಅಥವಾ ಸರ್ಕಾರಿ ಶಾಲೆಗಳ ಮುಖ್ಯೋಪಾಧ್ಯಾಯರಿಂದ ಸಹಿ ಹಾಕಿಸಿರಬೇಕು ಎಂದು ಭಾರತ ಸರ್ಕಾರದ ನಿಯಮಗಳಿವೆ.

 

ಪಾಕಿಸ್ತಾನದ ಹಿಂದೂಗಳು ಈ ಎಲ್ಲಾ ರೀತಿಯ ದಾಖಲೆಗಳನ್ನು ಒದಗಿಸಿದರೂ ಸಹ ಯಾವುದೇ ಕಾರಣಗಳನ್ನು ನೀಡದೆ ವೀಸಾದ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ. ಈ ಸಮಸ್ಯೆ ಹಲವಾರು ವರ್ಷಗಳಿಂದ ಉಳಿದಿದೆ. ಆದರೆ ಪರಿಹರಿಸಲು ಯಾವ ವ್ಯವಸ್ಥೆಯೂ ಇನ್ನೂ ಸಿಕ್ಕಿಲ್ಲ ಎಂದು ”ಫೆಡರೇಶನ್ ಆಫ್ ಪಾಕಿಸ್ತಾನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ (ಎಫ್‌ಪಿಸಿಸಿಐ- ಅಲ್ಪಸಂಖ್ಯಾತ ಹಕ್ಕುಗಳ ಸ್ಥಾಯಿ ಸಮಿತಿ) ಅಧ್ಯಕ್ಷ ಸನ್ನಿ ಘನ್‌ಶಮ್ ಫೋನ್ ಮೂಲಕ ತಿಳಿಸಿದ್ದಾರೆ ಎಂದು ‘ದಿ ಪ್ರಿಂಟ್‌’ ವೆಬ್‌ನ್ಯೂಸ್‌ ವರದಿ ಮಾಡಿದೆ.

 

ವರ್ಷದಲ್ಲಿ ಸಾವಿರಾರು ಜನರು ಪಾಕಿಸ್ತಾನದಿಂದ ಭಾರತಕ್ಕೆ ಬಂದು ಹೋಗುತ್ತಾರೆ. ಅವರಲ್ಲಿ ಅಂತಿಮ ಕಾರ್ಯಕ್ಕಾಗಿ ಬರಲು ಬಯಸುವವರ ಸಂಖ್ಯೆಯೂ ಹೆಚ್ಚಿದೆ. ಇಂತಹವರಲ್ಲಿ ವೀಸಾ ತಿರಸ್ಕರಿಸಿದ ಕುಟುಂಬಗಳ ಸಂಖ್ಯೆಯನ್ನು ಘನ್‌ಶಮ್‌ ಸಂಗ್ರಹಿಸುತ್ತಿದ್ದು, ಕರಾಚಿಯಲ್ಲಿಯೇ ಒಂದು ವರ್ಷಕ್ಕೆ 200ರಿಂದ 250 ಅರ್ಜಿಗಳು ತಿರಸ್ಕೃತಗೊಂಡಿವೆ.  ವೀಸಾ ತಿರಸ್ಕರಿಸಲಾದ ಜನರು ಕರಾಚಿಯ ಪಂಚಮುಖಿ ಹನುಮಾನ್ ದೇವಾಲಯವು ಸತ್ತವರ ಚಿತಾಭಸ್ಮವನ್ನು ಇಟ್ಟು ಹೋಗುತ್ತಾರೆ. ಈ ರೀತಿಯ ನೂರಾರು ಚಿತಾಭಸ್ಮಗಳಿದ್ದು, ಅವುಗಳಲ್ಲಿ ಕೆಲವು 2010ಕ್ಕಿಂತ ಮೊದಲಿನಿಂದಲೂ ಇವೆ.

ವೀಸಾಕ್ಕಾಗಿ ಹಲವು ಬಾರಿ ಅರ್ಜಿಸಲ್ಲಿಸಿದರೂ ವೀಸಾ ಪಡೆಯಲಾಗದ ಹೆಚ್ಚಿನ ಜನರು ಅವರ ಸಂಬಂಧಿಗಳ ಚಿತಾಭಸ್ಮವನ್ನೂ, ಅದರ ಜೊತೆಗೆ ಠೇವಣಿಯನ್ನು ಈ ದೇವಸ್ಥಾನದಲ್ಲಿ ಇಟ್ಟು ಹೋಗುತ್ತಾರೆ. ಆ ದೇವಾಲಯದ ಪಾದ್ರಿ ರಾಮನಾಥ್ ಮಹಾರಾಜ್ ಇಂತಹ ವಿಧಿಗಳನ್ನು ನಿರ್ವಹಿಸಲು ಚಿತಾಭಸ್ಮಗಳೊಂದಿಗೆ ಭಾರತಕ್ಕೆ ಬಂದು ಹೋಗುತ್ತಾರೆ. ಮಹಾರಾಜ್‌ ಅವರ ಅರ್ಜಿಗಳೂ ಹಲವು ಬಾರಿ ತಿರಸ್ಕರಿಸಲಾಗಿದ್ದು, 2016-17ರಲ್ಲಿ ಕೊನೆಯದಾಗಿ ವೀಸಾವನ್ನು ಪಡೆದುಕೊಂಡಿದ್ದರು, ಆ ಸಂದರ್ಭದಲ್ಲಿ 160 ಚಿತಾಭಸ್ಮವನ್ನು ತಂದಿದ್ದರು. ಇದಕ್ಕೂ ಮುನ್ನ, ಅವರು 2011 ರಲ್ಲಿ ವೀಸಾ ಪಡೆದು 135 ಚಿತಾಭಸ್ಮವನ್ನು ಸಾಗಿಸಿ ಅಂತಿಯ ಕಾರ್ಯ ಪೂರೈಸಿದ್ದರು ಎಂದು ‘ದಿ ಪ್ರಿಂಟ್‌’ ವರದಿ ಮಾಡಿದೆ.

“ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಹಿಂದೂಗಳಿಗೆ ಪೌರತ್ವ ನೀಡಲು ಭಾರತ ಧಾವಿಸುತ್ತಿದೆ. ಆದರೆ ಗಡಿಯುದ್ದಕ್ಕೂ ಇರುವವರಿಗೆ ವೀಸಾ ಪಡೆಯುವುದು ತುಂಬಾ ಕಷ್ಟಕರವಾಗಿದೆ.” ಭಾರತಕ್ಕೆ ವಲಸೆ ಬಂದ ಪ್ರತಿಯೊಬ್ಬರೂ (ಈಗ ಪೌರತ್ವಕ್ಕೆ ಅರ್ಹರಾಗಿದ್ದಾರೆ) ಇಲ್ಲಿಂದ ಬಂದವರು. ನಾವು ನೆರೆಹೊರೆಯವರು. ಇಬ್ಬರನ್ನೂ ಪರಿಗಣಿಸಿ ಪರಿಗಣಿಸಬೇಕು.”ಎಂದು ಮಹಾಜನ್‌ ಅಸಮಧಾನ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದ ಕೌನ್ಸಿಲ್‌ ಪ್ರಕಾರ ಪಾಕಿಸ್ತಾನದಲ್ಲಿ ವಾಸಿಸುತ್ತಿರುವ ಹಿಂದೂಗಳ ಸಂಖ್ಯೆ 80 ಲಕ್ಷ, ಅದರಲ್ಲಿ ಕರಾಚಿಯಲ್ಲಿಯೇ ಸುಮಾರು 2.5 ಲಕ್ಷ ಹಿಂದೂಗಳು ನೆಲೆಸಿದ್ದಾರೆ. ಪಾಕಿಸ್ತಾನದ ಜಿಲ್ಲಾ ಪ್ರಾಂತ್ಯದ ಗರಿಷ್ಠ ಸಂಖ್ಯೆಯ ಹಿಂದೂಗಳನ್ನು ಹೊಂದಿರುವ ಪ್ರಾಂತ್ಯ ಇದಾಗಿದೆ.

 

ಓಟ್‌ ಬ್ಯಾಂಕ್‌ಗಾಗಿ ಧರ್ಮ ರಾಜಕಾರಣ ಮಾಡುತ್ತಿರುವ ಬಿಜೆಪಿ, ನೆರೆಯ ಮುಸ್ಲೀಂ ರಾಷ್ಟ್ರಗಳಿಂದ ಭಾರತಕ್ಕೆ ವಲಸೆ ಬರುವ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುತ್ತೇವೆಂದು ಮುಂದಾಗಿದೆ. ಆದರೆ, ಅದೇ ರಾಷ್ಟ್ರದಿಂದ ಅಂತಿಮ ಕಾರ್ಯ ನಿರ್ವಹಿಸಲು ಭಾರತಕ್ಕೆ ಬರಲು ಬಯಸುವವರಿಗೆ ವೀಸಾವನ್ನೇ ನೀಡದೇ ಇರುವುದು ಬಿಜೆಪಿ ಯಾವ ಹಿಂದೂಗಳ ಮೇಲೂ ಪ್ರೀತಿಯಿಲ್ಲ ಬದಲಾಗಿ ರಾಜಕೀಯ ದಾಳವನ್ನಾಗಿ ಹಿಂದೂ ಕಾಳಜಿಯ ಪ್ರಚಾರ ತೆಗೆದುಕೊಳ್ಳುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights