ಕೇಂದ್ರ ಆರ್ಥಿಕ ದಿವಾಳಿ ಆರೋಪ – ಸಿದ್ಧರಾಮಯ್ಯ ಕೇಂದ್ರದ ಖಜಾಂಚಿಯೇ – ಗೋವಿಂದ ಕಾರಜೋಳ ಕಿಡಿ

ಕೇಂದ್ರ ಸರ್ಕಾರ ಆರ್ಥಿಕವಾಗಿ ದಿವಾಳಿಯ‍ಾಗಿದೆ ಎಂಬ ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿಕೆಗೆ ಡಿಸಿಎಂ ಗೋವಿಂದ ಕಾರಜೋಳ ಕಿಡಿ. ಇತಿಹಾಸದಲ್ಲಿಯೇ ಕೇಂದ್ರ ಸರ್ಕಾರ ಅತಿ ಹೆಚ್ಚು ಹಣ ಬಿಡುಗಡೆ ಮಾಡಿದೆ ಎಂದು ಸಮರ್ಥನೆ.

ಕೇಂದ್ರ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎನ್ನಲು ಸಿದ್ಧರಾಮಯ್ಯ ಅವರೇನು ಕಂದ್ರದ ಖಜಾಂಚಿಯಾಗಿದ್ದಾರೆಯೇ ಎಂದು ಡಿಸಿಎಂ ಗೋವಿಂದ ಕಾರಜೋಳ ಪ್ರಶ್ನಿಸಿದ್ದಾರೆ. ಕಲಬುರ್ಗಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಆರ್ಥಿಕ ದಿವಾಳಿಯಾಗಿ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಹೇಳ್ತಾರೆ.

ಅವರೇನು ಕೇಂದ್ರ ಸರ್ಕಾರದ ಖಜಾಂಚಿಯಾಗಿದ್ದಾರೆಯೆ ಅಥವಾ ಕೇಂದ್ರ ಸರ್ಕಾರದ ಪೆಟ್ಟಿಗೆ ಇವರ ಬಳಿ ಇದೆಯೇ ಎಂದು ಪ್ರಶ್ನಿಸಿದ್ದಾರೆ. ಸಿದ್ಧರಾಮಯ್ಯ ಏನಿದ್ದರೂ ಈಗ ಬರೀ ಸಿದ್ಧರಾಮಯ್ಯ. 14 ಬಾರಿ ಬಜೆಟ್ ಮಂಡಿಸಿದ್ದಾರೆ. ಐದು ವರ್ಷಗಳ ಕಾಲ ಸಿಎಂ ಸಹ ಆಗಿದ್ದವರು. ಅಂಥವರು ಈ ರೀತಿ ಮಾತನಾಡೋದು ಸರಿಯಲ್ಲ. ಹಣಕಾಸಿನ ತೌಲನಿಕ ನೋಟ ಬೇಕಿದ್ದರೆ ಕೊಡಲಿ. ಅದನ್ನು ಬಿಟ್ಟು ಹೀಗೆ ಮನಸ್ಸಿಗೆ ಬಂದಂತೆ ಹೇಳಿಕೆ ನೀಡೋದು ಸರಿಯಲ್ಲ ಎಂದು ಕಿಡಿಕಾರಿದರು.

ನೆರೆ ಪರಿಹಾರಕ್ಕಾಗಿ ಕೇಂದ್ರ ಬಿಡುಗಡೆ ಮಾಡಿರೋದು ಸಣ್ಣ ಮೊತ್ತವಲ್ಲ. ಸ್ವಾತಂತ್ರ್ಯ ಬಂದಾಗಿನಿಂದಲೂ ಇಷ್ಟು ಪ್ರಮಾಣದಲ್ಲಿ ಯಾವ ಸರ್ಕಾರವೂ ನೆರೆ ಪರಿಹಾರಕ್ಕಾಗಿ ಬಿಡುಗಡೆ ಮಾಡಿದ್ದಿಲ್ಲ. ಹೀಗಿರಬೇಕಾದರೆ ರಾಜೀಕಯಕ್ಕಾಗಿ ಮಾತನಾಡೋದು ಸರಿಯಲ್ಲ ಎಂದು ಸಿದ್ಧರಾಯಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಸಂಪುಟ ವಿಸ್ತರಣೆಗೂ.. ಗ್ರಹಣಕ್ಕೂ ಸಂಬಂಧವಿಲ್ಲ..
ಸಂಪುಟ ವಿಸ್ತರಣೆ ವಿಳಂಬಕ್ಕೂ ಗ್ರಹಣಕ್ಕೂ ಸಂಬಂಧವಿಲ್ಲ ಎಂದು ಡಿಸಿಎಂ ಗೋವಿಂದ ಕಾರಜೋಳ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ. ನಾವೆಲ್ಲ ಬಸವಣ್ಣನ ಅನುಯಾಯಿಗಳು. ಗ್ರಹಣವನ್ನು ನಂಬೋದಿಲ್ಲ. ಎಲ್ಲರೂ ಸೇರಿದಾಗ ಒಂದು ಕಲ್ಯಾಣ ನಡೆಯಬೇಕೆಂಬಂತೆ ಸಂಪುಟವೂ ವಿಸ್ತರಣೆಯಾಗುತ್ತೆ. ಯಾವಾಗ ವಿಸ್ತರಣೆ ಮಾಡಬೇಕೆನ್ನುವುದನ್ನು ಹೈಕಮಾಂಡ್ ನಿರ್ಧರಿಸಿತ್ತೆ ಎಂದರು. ಆದರೆ ಇಬ್ಬರು-ಮುವ್ವರು ಹಾಲಿ ಸಚಿವರನ್ನು ತೆಗೆಯಬೇಕೆಂಬ ಪ್ರಸ್ತಾಪವಿಲ್ಲ ಎಂದು ಗೋವಿಂದ ಕಾರಜೋಳ ಸ್ಪಷ್ಟಪಡಿಸಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights