ಕೇರಳ: ನಾಲ್ಕು ವರ್ಷಗಳಿಂದ ಕಟ್ಟಲಾಗುತ್ತಿರುವ ವೈದ್ಯಕೀಯ ಕಾಲೇಜು ನಾಲ್ಕು ದಿನಗಳಲ್ಲಿ ಕೊರೊನ ಆಸ್ಪತ್ರೆಯಾಗಿ ಬದಲು

ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ನಾಲ್ಕು ವರ್ಷಗಳಿಂದ ಕುಂಟುತ್ತ ಕಾಮಗಾರಿ ಹಂತದಲ್ಲಿಯೇ ಇರುವ ವೈದ್ಯಕೀಯ ಕಾಲೇಜು, ಕೊರೊನ ಸೋಂಕಿನ ಸಾಂಕ್ರಾಮಿಕದ ಚಿಕಿತ್ಸೆಗಾಗಿ ನಾಲ್ಕು ದಿನಗಳಲ್ಲಿ ಆಸ್ಪತ್ರೆಯಾಗಿ ಬದಲಾಗಿದೆ. ಹಿಂದಿನ ಕಾಂಗ್ರೆಸ್ ಸರ್ಕಾರ 2013ರಲ್ಲಿ ಇದಕ್ಕೆ ಶಂಕುಸ್ಥಾಪನೆ ಮಾಡಿತ್ತು ಮತ್ತು 2016 ರಿಂದ ಇದರ ಕಾಮಗಾರಿ ಜಾರಿಯಲ್ಲಿತ್ತು.

ಈಗ ನಾಲ್ಕು ದಿನಗಳಲ್ಲಿ,  ನಾಲ್ಕು ಮಹಡಿ ಕಟ್ಟಲಾಗಿರುವ ಈ ಕಾಲೇಜನ್ನು ಕೋವಿಡ್-19 ಚಿಕಿತ್ಸಾ ಆಸ್ಪತ್ರೆಯನ್ನಾಗಿ ಬದಲಾಯಿಸಿ 7 ಕೋಟಿ ಮೊತ್ತದ ಸಲಕರಣೆಗಳನ್ನು ಅಳವಡಿಸಲಾಗಿದೆ. ಕಾಲೇಜಿನ ಆಡಳಿತ ವಿಭಾಗ ಈಗ ಆಸ್ಪತ್ರೆಯಾಗಿ ಕೆಲಸ ಮಾಡುತ್ತಿದ್ದು ಕಳೆದ ವಾರವಷ್ಟೇ ಇದಕ್ಕೆ ವಿದ್ಯುತ್ ಸಂಪರ್ಕ ಸಿಕ್ಕಿತ್ತು.

ಕಾಸರಗೋಡಿನಲ್ಲಿ ಈಗ ಸುಮಾರು ಇಡೀ ಕೇರಳದ ಅರ್ಧದಷ್ಟು ಕೊರೊನ ಸೋಂಕಿತ ಪ್ರಕರಣಗಳು ಇವೆ. ಲಾಕ್ ಡೌನ್ ಸಮಯದಲ್ಲಿ  ಕರ್ನಾಟಕ ತನ್ನ ಗಡಿಯನ್ನು ಮುಚ್ಚಿರುವುದರಿಂದ ಈಗಿರುವ 128 ಪ್ರಕರಣಗಳು ಇನ್ನೂ ಹೆಚ್ಚುವ ಅಪಾಯವನ್ನು ಕಾಸರಗೋಡು ಎದುರಿಸುತ್ತಿದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ನಿರ್ದೇಶನದಂತೆ ಈ ಆಧುನಿಕ ಕೋವಿಡ್-19 ಚಿಕಿತ್ಸಾಕೇಂದ್ರವನ್ನು ನಾಲ್ಕು ದಿನಗಳಲ್ಲಿ ಕಾರ್ಯನಿರ್ವಹಿಸುವಂತೆ ಮಾಡಿದ್ದೇವೆ ಎನ್ನುತ್ತಾರೆ ರಾಜ್ಯ ಆರೋಗ್ಯ ಸಚಿವೆ ಕೆ ಕೆ ಶೈಲಜ.

ಕೇರಳ ರಾಜ್ಯ ಕೊರೊನ ಸೋಂಕು ಸಮಸ್ಯೆಯನ್ನು ಎದುರಿಸಲು ಸಿದ್ಧವಿದೆ ಎಂದು ತಿಳಿಸಿರುವ ಮುಖ್ಯಮಂತ್ರಿ ಪಿಣರಾಯಿ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳನ್ನು ಸೇರಿಸಿ 1.25 ಲಕ್ಷ ಹಾಸಿಗೆಗಳು ಇವೆ. 517 ಕೊರೊನ ಕೇಂದ್ರಗಳು ಮತ್ತು 17,461 ಪ್ರೆತ್ಯೇಕ ಹಾಸಿಗೆಗಳ ಸೌಲಭ್ಯ ಇರುವುದಾಗಿ ಅವರು ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights