ಕೊರೊನಾಗೆ ಪ್ಲಾಸ್ಮಾ ಬ್ರಹ್ಮಸ್ತ್ರ – ಪ್ಲಾಸ್ಮಾ ಥೆರೆಪಿ ಉಪಯೋಗವೇನು..?

ವಿಶ್ವಾದ್ಯಾಂತ ಕೊರೊನಾ ಎಗ್ಗಿಲ್ಲದೇ ಹರಡುತ್ತಿದೆ. ಆದರೂ ಇಲ್ಲಿಯವರೆಗೆ ಕೊರೊನಾ ವೈರಸ್ ತಡೆಗೆ ಔಷಧಿ ಕಂಡು ಹಿಡಿಯಲಾಗಿಲ್ಲ. ಸೋಂಕು ಹರಡಿದವರ ರಕ್ಷಣೆಗೆಂದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ವೈರಸ್ ಹರಡುವುದನ್ನ ತಡೆಯಲಾಗುತ್ತಿದೆ. ಆ ಮೂಲಕ ವೈರಸ್ ದೇಹದಲ್ಲಿ ಪರಿಣಾಮ ಬೀರದಂತೆ ಸೋಂಕಿತರನ್ನು ಗುಣಮುಖರನ್ನಾಗಿ ಮಾಡಲಾಗುತ್ತಿದೆ. ಆದರೆ ಈ ಚಿಕಿತ್ಸೆ ವಯಸ್ಕರಿಗೆ ನೀಡಲು ಕಷ್ಟ ಸಾಧ್ಯ. ಯಾಕೆಂದರೆ ವೃದ್ಧರಲ್ಲಿ  ರೋಗನಿರೋಧಕ ಶಕ್ತಿ ಅಧಿಕವಿರುವುದಿಲ್ಲ. ಇದನ್ನ ವೃದ್ಧಿಸಲು ವಯೋ ಸಹಜ ಕಾಯಿಲೆಗಳು ಅವರಲ್ಲಿ ಅಧಿಕವಾಗಿದ್ದಲ್ಲಿ ಅಂಥವರನ್ನು ರಕ್ಷಿಸುವುದು ಕಷ್ಟಸಾಧ್ಯ. ಹೀಗಾಗಿ ಎಲ್ಲೆಡೆ ಸೋಂಕು ಹರಡುವುದನ್ನ ತಡೆಗಟ್ಟಲು ಲಾಕ್ ಡೌನ್ ಮಾಡಲಾಗಿದೆ. ಹೀಗಿದ್ದರೂ ದಿನದಿಂದ ದಿನಕ್ಕೆ ಸೋಂಕು ಹರಡುತ್ತಲೇ ಇದೆ.

 

ಕೋವಿಡ್-19  ಹರಡಿರುವ ರಾಷ್ಟ್ರಗಳಲ್ಲಿ ಮಲೇರಿಯಾ ಲಸಿಕೆ ನೀಡಲಾಗುತ್ತಿದ್ದು, ಮಲೇರಿಯಾ ಲಸಿಕೆಯನ್ನು ಭಾರತದಲ್ಲಿ ಅತೀ ಹೆಚ್ಚು ತಯಾರಿಸಲಾಗುತ್ತದೆ. ಸದ್ಯ ಇದಕ್ಕೆ ಬೇಡಿಕೆ ಕೂಡ ಅಧಿಕವಾಗಿದೆ. ಆದರೆ ಈ ಮಲೇರಿಯಾ ಲಸಿಕೆಯಿಂದ ಕೊರೊನಾ ಸೋಂಕಿತರಲ್ಲಿ ಅಡ್ಡಪರಿಣಾಮಗಳು ಕಂಡುಬರುತ್ತಿವೆ ಅನ್ನೋ ವೈದ್ಯರ ಮಾತುಗಳು ಕೆಲ ರಾಷ್ಟ್ರಗಳಲ್ಲಿ ಕಂಡು ಬರುತ್ತಿದ್ದು, ಇದಕ್ಕೆ ಬೇರೆ ಮಾರ್ಗ ಹಿಡಿಯಲು ವೈದ್ಯ ಲೋಕ ನಿರ್ಧರಿಸಿದೆ. ಅದು ಪ್ಮಾಸ್ಮಾ ಥೆರೆಪಿ ಮಾಡೋದು.

ಏನಿದು ಪ್ಮಾಸ್ಮಾ ಥೆರೆಪಿ..?

ಪ್ಲಾಸ್ಮಾ ಎಂದರೆ ಮನುಷ್ಯನ ರಕ್ತದ ಜೀವನಾಂಶ. ಇದು ಮನುಷ್ಯನ ದೇಹದಲ್ಲಿ ಪ್ರೋಟೀನ್ ಹೆಚ್ಚಿಸುತ್ತದೆ. ರಕ್ತ ನಿಧಿಗಳಲ್ಲಿ ( ಬ್ಲೆಡ್ ಬ್ಯಾಂಕ್) ರಕ್ತ ಶೇಖರಿಸುವಂತೆ ಪ್ಲಾಸ್ಮಾ ಕೂಡ ಶೇಖರಿಸಲಾಗುತ್ತದೆ. ಪ್ಮಾಸ್ಮಾದ ಉಪಯೋಗ 1918 ರಿಂದಲೇ ಶುರುವಾಗಿತ್ತು. ಈ ಹಿಂದೆ ಸ್ಪಾನಿಷ್ ಫ್ಲೂ ಎಂಬ ಸಾಂಕ್ರಾಮಿಕ ರೋಗಕ್ಕೆ ಇದೇ ಪ್ಮಾಸ್ಮಾ ಥೆರೆಪಿ ನೀಡುವ ಮೂಲಕ ರೋಗಗಳನ್ನ ಗುಣ ಮುಖರನ್ನಾಗಿ ಮಾಡಲಾಗುತ್ತಿತ್ತು. ಸದ್ಯ ಇದೇ ಪ್ರಯೋಗವನ್ನು ಕೊರೊನಾ ರೋಗಿಗಳಿಗೂ ಮಾಡಲು ರಾಷ್ಟ್ರಗಳು ಸಿದ್ಧವಾಗಿವೆ. ನಮ್ಮ ದೇಶದಲ್ಲಿ ಕೇರಳ ಈ ಥೆರೆಪಿ ಪ್ರಯೋಗಕ್ಕೆ ಮುಂದಾಗಿದೆ.

ಪ್ಮಾಸ್ಮಾ ಹೇಗೆ ವರ್ಕ್ ಆಗುತ್ತೆ..? ಪ್ಮಾಸ್ಮಾ ಥೆರೆಪಿ ರೋಗಿಗಳನ್ನು ಹೇಗೆ ಗುಣಮುಖರನ್ನಾಗಿ ಮಾಡುತ್ತದೆ ಅನ್ನೋದನ್ನ ನೋಡೋಣ. ಪ್ಲಾಸ್ಮಾ ಮನುಷ್ಯನ ರಕ್ತ ಕಣಗಳಲ್ಲಿದ್ದು, ಸಾಂಕ್ರಾಮಿಕ ರೋಗಗಳ ವಿರುದ್ಧ ಹೋರಾಡುತ್ತದೆ. ಇದು ಮನುಷ್ಯನ ದೇಹದಲ್ಲಿ ಹೆಚ್ಚಾಗಿದ್ದರೆ ಕೊರೊನಾ ವೈರಸ್ ವಿರುದ್ಧ ಹೋರಾಡಲು ಸಹಕಾರಿಯಾಗುತ್ತದೆ. ಒಂದು ವೇಳೆ ಇದರ ಪ್ರಮಾಣ ಕಡಿಮೆ ಇದ್ದರೆ ಅಂಥವರಿಗೆ ಪ್ಮಾಸ್ಮಾ ಥೆರೆಪಿ ನೀಡುವ ಮೂಲಕ ಒಬ್ಬ ವ್ಯಕ್ತಿಯಿಂದ ಮತ್ತೊಬ್ಬರಿಗೆ ಪ್ಮಾಸ್ಮಾ ವನ್ನು ನೀಡಿ ವೈರಸ್ ವಿರುದ್ಧ ಹೋರಾಡಲಾಗುತ್ತದೆ. ಪ್ಮಾಸ್ಮಾ ತೆಗೆದುಕೊಳ್ಳುವ ವ್ಯಕ್ತಿ ಕೊರೊನಾ ಸೋಂಕಿನಿಂದ ಹೋರಾಡಿ ಗೆದ್ದವನೇ ಆಗಿರುತ್ತಾನೆ.

ಯಾರಿಗೆಲ್ಲಾ ಕೊಡ್ತಾರೆ ಈ ಚಿಕಿತ್ಸೆ?

ಗಂಭೀರ ಸ್ಥಿತಿಯಲ್ಲಿರುವವರಿಗೆ ಮಾತ್ರ ಪ್ಲಾಸ್ಮಾ ಥೆರೆಪಿ ನೀಡಲಾಗುತ್ತದೆ. ಕೊರೊನಾ ಸೋಂಕಿನಿಂದ ಗುಣಮುಖನಾದ ವ್ಯಕ್ತಿಯಿಂದಲೇ ಪ್ಮಾಸ್ಮಾ ತೆರೆದುಕೊಂಡರೆ 5-6 ಜನ ಸೋಂಕಿತರನ್ನು ಗುಣಮುಖರನ್ನಾಗಿ ಮಾಡಬಹುದು ಎಂದು ಹೇಳಲಾಗುತ್ತದೆ.ಹೀಗಾಗಿ ಸೋಂಕು ಹರಡಿದ ಬಳಿಕ ಚಿಕಿತ್ಸೆಗೆ ಒಳಪಡುವುದಕ್ಕಿಂತ ಮುಂಚಿತವಾಗಿಯೇ ಎಚ್ಚರಿಕೆಯಿಂದರುವುದು ಒಳ್ಳೆದು.

ಹಾಗಾದ್ರೆ ಮುನ್ನೆಚ್ಚರಿಕೆ ವಹಿಸುವುದು ಹೇಗೆ.?

ಕೊರೊನಾ ವಿರುದ್ಧ ಹೋರಾಡಲು ಮನುಷ್ಯನ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿರಬೇಕು. ಅಂಥವರು ಸೋಂಕು ಹರಡಿದ ಬಳಿಕವೂ ಚಿಕಿತ್ಸೆಗೆ ಒಳಪಟ್ಟರೆ ತೊಂದರೆಯಿಂದ ದೂರವಾಗಬಹುದು. ಹೀಗಾಗಿ ದೇಹಕ್ಕೆ  ಹೆಚ್ಚ ಪ್ರೋಟೀನ್ ಒದಗಿಸುವ ಆಹಾರ ಸೇವಿಸುವುದು ಒಳ್ಳೆದು ಎಂದು ವೈದ್ಯರು ತಿಳಿಸುತ್ತಾರೆ.

ಆಹಾರ ಪದ್ಧತಿ ಹೀಗಿರಲಿ..

ತುಳಸಿ, ಬೆಳ್ಳುಳ್ಳಿ-ಈರುಳ್ಳಿ, ಶುಂಠಿ, ಚಕ್ರ ಮೊಗ್ಗು, ತೆಂಗಿನ ಎಣ್ಣೆ, ಅಡುಗೆಗೆ ಹೆಚ್ಚಾಗಿ ಬಳಸಿ ಬೇಯಿಸದೇ ಸೇವನೆಗೆ ಯೋಗ್ಯವಾದವನ್ನ ಚೆನ್ನಾಗಿ ತೊಳೆದು ತಿನ್ನಿ. ಇವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿವೆ. ವಿಟಮಿನ್ ಸಿ- ನೆಲ್ಲಿಕಾಯಿ, ಮೆಣಸು, ಗ್ರೀನ್ ಟೀ, ಸೂರ್ಯಕಾಂತಿ ಬೀಜ ಇವುಗಳ ಸೇವನೆಯೂ ಉತ್ತಮವಾಗಿದೆ. ಜೊತೆಗೆ ಪಪ್ಪಾಯ, ಕಿವಿ, ದ್ರಾಕ್ಷಿ, ಸ್ಟ್ರಾಬೆರಿ ಯಂತಹ ಹಣ್ಣುಗಳನ್ನು ಹೆಚ್ಚಾಗಿ ತಿನ್ನಿ. ಇವು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights