ಕೊರೊನಾವನ್ನು ದೇಶದಲ್ಲಿ ಹರಡುವವರು ದೇಶದ್ರೋಹಿಗಳು – ಶಾಸಕ ಎಂ.ಪಿ ರೇಣುಕಾಚಾರ್ಯ
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಈ ಮಧ್ಯೆ ಶಾಸಕ ಎಂ.ಪಿ ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದು ಸಾಕಷ್ಟು ಆಕ್ರೋಶಕ್ಕೆ ಗುರಿ ಮಾಡಿದೆ.
ಅಷ್ಟಕ್ಕೂ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದ್ದು ಹೀಗೆ, ಮಾಹಾಮಾರಿ ಕೊರೊನಾವನ್ನು ದೇಶದಲ್ಲಿ ಹರಡುವವರು ದೇಶದ್ರೋಹಿಗಳು, ಅವರನ್ನು ಗುಂಡಿಟ್ಟು ಕೊಲ್ಲಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಲಾಕ್ ಡೌನ್ ನಿಂದ ಕೊರೊನಾ ನಿಯಂತ್ರಣಕ್ಕೆ ಬಂದಿತ್ತು. ಆದರೆ ನಿಜಾಮುದ್ದೀನ್ ಗೆ ಹೋಗಿ ಬಂದವರಿಂದ ಕೊರೊನಾ ಸೋಂಕು ವ್ಯಾಪಕಕವಾಗಿ ಹರಡುತ್ತಿದೆ. ನಿಜಾಮುದ್ದೀನ್ ಗೆ ಹೋಗಿ ಬಂದವರು ಸ್ವಯಂಪ್ರೇರಿತವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಕೊರೊನಾ ಹರಡುತ್ತಿರುವವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ಗುಡುಗಿದ್ದಾರೆ.
ನಿಜಾಮುದ್ದೀನ್ ಪ್ರಕರಣ ಕಂಟಕದಂತೆ ಆಗಿದೆ. ತಪಾಸಣೆಗೆ ಒಳಪಡದೇ ಮನೆಯಲ್ಲಿ ಅವಿತುಕೊಳ್ಳುವ ಮೂಲಕ ಇತರರಿಗೆ ಮಾರಕ ಸೋಂಕು ಹರಡುವುದು ಒಂದು ರೀತಿ ಭಯೋತ್ಪಾದನೆ, ದೇಶದ್ರೋಹವಾಗಿದೆ. ತಾವು ಸತ್ತರೂ ಪರವಾಗಿಲ್ಲ, ಬೇರೆಯವರು ಸಾಯಬೇಕು ಎನ್ನುವುದು ಎಂತಹ ನ್ಯಾಯ ಎಂದು ಪ್ರಶ್ನಿಸಿದ ರೇಣುಕಾಚಾರ್ಯ, ಯಾರು ವೈರಸ್ ಹರುಡುತ್ತಿದ್ದಾರೋ ಅದು ಪರೋಕ್ಷವಾಗಿ ಭಯೋತ್ಪಾದನೆ ನಡೆಸಿದಂತಾಗಿದೆ. ಇವರಿಗೆಲ್ಲ ದೇಶಕ್ಕಿಂತ ಧರ್ಮ, ಪ್ರಾರ್ಥನೆಯೇ ಮುಖ್ಯವಾಯಿತಾ ಎಂದು ಪ್ರಶ್ನಿಸಿದರು…

