ಕೊರೊನಾ ಮುಕ್ತ ರಾಜ್ಯವೆಂದು ಘೋಷಿಸಿದ ಮಿಜೋರಾಂ! ಸೋಂಕು ಮುಕ್ತ ರಾಜ್ಯಗಳು ಎಷ್ಟಿವೆ ಗೊತ್ತಾ?

ಲಾಕ್‌ಡೌನ್‌ ಸಡಿಲಿಕೆಯ ನಂತರ ದೇಶದಲ್ಲಿ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚಾಗುತ್ತಿದೆ. ಇಂದು 3,277 ಹೊಸ ಪ್ರಕರಣಗಳು ದಾಖಲಾಗಿವೆ. ಇಂತಹ ಆಘಾತಕಾರಿ ಸಂದರ್ಭದಲ್ಲಿಯೂ ಈಶಾನ್ಯ ರಾಜ್ಯಗಳು ಕೊರೊನಾ ಸೋಂಕು ನಿವಾರಣೆಲ್ಲಿ ಯಶಸ್ವಿಯಾಗಿವೆ. ಕೊರೊನಾ ಮುಕ್ತ ನಾಲ್ಕು ರಾಜ್ಯಗಳ ಪಟ್ಟಿಗೆ ಐದನೇ ರಾಜ್ಯವಾಗಿ ಮಿಜೋರಾಂ ಸೇರಿದೆ.

ಮಿಜೋರಾಂನಲ್ಲಿದ್ದ ಅಂತಿಮ ಕೊರೋನಾ ಸೋಂಕಿತ ಕೂಡ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಮಿಜೋರಾಂನ ಝೋರಂ ವೈದ್ಯಕೀಯ ಕಾಲೇಜಿನಲ್ಲಿ ಕಳೆದ 45 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಕೊರೋನಾ ಸೋಂಕಿತ ಕೊನೆಗೂ ಗುಣುಖರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಮಿಜೋರಾಂ ಆರೋಗ್ಯ ಸಚಿವರಾದ ಡಾ.ಆರ್ ಲಲ್ತಾಂಗ್ಲಿಯಾನ ಅವರು, ರಾಜ್ಯ ಏಕೈಕ ಕೊರೋನಾ ಸೋಂಕಿತ ಗುಣಮುಖರಾಗಿದ್ದು, ಶನಿವಾರ ಝೋರಂ ವೈದ್ಯಕೀಯ ಕಾಲೇಜಿನಿಂದ ಡಿಸ್ಚಾರ್ಜ್ ಆಗಿದ್ದಾರೆ. ಅವರ ಇತ್ತೀಚಿನ 2 ವರದಿಗಳು ಕೊರೋನಾ ನೆಗೆಟಿವ್ ಬಂದಿದೆ. ಹೀಗಾಗಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಆ ಮೂಲಕ ಮಿಜೋರಾಂ ಕೊರೋನಾ ವೈರಸ್ ನಿಂದ ಮುಕ್ತಿ ಪಡೆದ ಈಶಾನ್ಯ ಭಾರತದ ಐದನೇ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಹಿಂದೆ ಮಣಿಪುರ, ಸಿಕ್ಕಿಂ, ನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶ ರಾಜ್ಯಗಳು ಕೊರೋನಾ ವೈರಸ್ ನಿಂದ ಮುಕ್ತವಾಗಿದ್ದು, ಸೋಂಕು ಮುಕ್ತ ರಾಜ್ಯವೆಂದು ಘೊಷಿಸಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights