ಸರ್ಕಾರದಿಂದ ಸಹಾಯ ಪಡೆಯುವವರಿಗೆ ‘ಸೇವಾಸಿಂಧು’ ಹೇಗೆ ಸಹಕಾರಿಯಾಗಿದೆ ಗೊತ್ತಾ..?

ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರಿಗೆ ಸರ್ಕಾರಕ್ಕೆ ಸಂಬಂಧಿಸಿದ ಸೇವೆಗಳ ಜೊತೆಗೆ ಬಗ್ಗೆ ಮಾಹಿತಿ ಒದಗಿಸುವಲ್ಲಿ ‘ಸೇವಾಸಿಂಧು’ ಮಹತ್ವದ ಕಾರ್ಯ ಮಾಡುತ್ತಿದೆ. ಅಷ್ಟಕ್ಕೂ ಏನಿದು ಸೇವಾಸಿಂಧು..? ಇದರ ಬಗ್ಗೆ ನಿಮಗೆಷ್ಟು ಗೊತ್ತು..? ಸರ್ಕಾರದಿಂದ ಸಹಾಯ ಪಡೆಯುವವರು ಇಲ್ಲಿ ಏನು ಮಾಡಬೇಕು..? ಇದು ಪರಿಣಾಮಕಾರಿಯಾಗಿ ಕೆಲಸ ಮಾಡ್ತಾ ಇದಿಯಾ..? ಎನ್ನುವ ವಿಚಾರಗಳ ಬಗ್ಗೆ ತಿಳಿದುಕೊಳ್ಳೋಣ.

ಸೇವಾ ಸಿಂಧು ಎಂಬುದು ಒಂದು ಸ್ಟಾಪ್ ಶಾಪ್. ಇದು ಸರ್ಕಾರಕ್ಕೆ ಸಂಬಂಧಿಸಿದ ಸೇವೆಗಳನ್ನು ನಾಗರಿಕರಿಗೆ ಒದಗಿಸುತ್ತದೆ .ಇದು ಒಂದು ಸಮಗ್ರ ಪೋರ್ಟಲ್ ಆಗಿದೆ. ಸಮುದಾಯಕ್ಕೆ ಸರ್ಕಾರದ ಸೇವೆಗಳನ್ನು ಒದಗಿಸುವುದರಿಂದ ರಾಜ್ಯದಲ್ಲಿ ಡಿಜಿಟಲ್ ಡಿವೈಡ್ ತುಂಬಲು ಒಂದು ಶಕ್ತಿಶಾಲಿ ಸಾಧನವಾಗಿದೆ.

ಹೇಗೆ ಕೆಲಸ ಮಾಡುತ್ತದೆ..?

ಇದು ನಾಗರಿಕರಿಗೆ ಸರ್ಕಾರದ ಸೇವೆಗಳನ್ನು ಒದಗಿಸುವಲ್ಲಿ ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತದೆ. ಇದಕ್ಕೆ ಬೇಕಾಗುವ ಸರ್ಕಾರದ ಇಲಾಖೆಗಳೊಂದಿಗೆ ಸೇವಾಸಿಂಧು ಸಂಪರ್ಕ ಹೊಂದಿರುತ್ತದೆ. ಹಳ್ಳಿ ಮತ್ತು ನಗರಗಳಲ್ಲಿ ಸರ್ಕಾರದ ಸೇವೆ ವಿತರಣಾ ಕಿಯೋಸ್ಕ್ ಸ್ಥಾಪನೆಯಿಂದ ಈ ಪೋರ್ಟಲ್ ಬಳಸಬಹುದು. ಇದು ಪರಿಣಾಮಕಾರಿಯಾಗಿ ಮಾಹಿತಿ ಪ್ರಸರಣ ಮಾಡುವ ಮೂಲಕ ನಾಗರಿಕ ಸಮುದಾಯಕ್ಕೆ ಸರ್ಕಾರಿ ಯೋಜನೆಗಳನ್ನು ಮತ್ತು ಸೌಲಭ್ಯಗಳನ್ನು ಒದಗಿಸುತ್ತದೆ.  ಕರ್ನಾಟಕ ಸರ್ಕಾರವು ಪ್ರಾರಂಭಿಸಿರುವ ಸೇವಾ ಸಿಂಧು ವೆಬ್‌ಸೈಟ್‌ಗೆ ಭೇಟಿ ನೀಡಿದಾಗ ಈ ಕೆಳಗಿನ ಸೇವೆಗಳು ನಿವಾಸಿಗಳಿಗೆ ಲಭ್ಯವಿದೆ.

ಕಂದಾಯ ಇಲಾಖೆ, ವಾಣಿಜ್ಯ ತೆರಿಗೆ ಇಲಾಖೆ, ಔಷಧ ನಿಯಂತ್ರಣ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಯೋಜನಾ ಇಲಾಖೆ,
ಸಾರಿಗೆ ಇಲಾಖೆ, ಆಯುಷ್ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಬಲೀಕರಣ ಮತ್ತು ಹಿರಿಯ ಸಬಲೀಕರಣ ಸಬಲೀಕರಣ ಇಲಾಖೆ. ಮಹಿಳಾ ಮತ್ತು ಕಲ್ಯಾಣ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಕಾರ್ಮಿಕ ಇಲಾಖೆ.

ಸಾರ್ವಜನಿಕರು ಈ ಇಲಾಖೆಗಳಿಗೆ ತಿಳಿಸಬಹುದಾದ ಯಾವುದೇ ಸಮಸ್ಯೆಗಳು ಅಥವಾ ಇಲಾಖೆಯಿಂದ ಪಡೆಯಬಹುದಾದ ಮಾಹಿತಿಗಳ ಬಗ್ಗೆ ತಿಳಿಯಲು ಸೇವಾಸಿಂಧುವಿನ ಮೂಲಕ ಪಡೆಯಬಹುದು.

ಸೇವಾಸಿಂಧು ಹೇಗೆ ರೂಪಗೊಂಡಿದೆ..?

ಸೇವಾ ಸಿಂಧು (ಇ-ಜಿಲ್ಲೆ) ಯೋಜನೆಯು ರಾಷ್ಟ್ರೀಯ ಇ-ಆಡಳಿತ ಯೋಜನೆಯ (NeGP) 31 ಮಿಷನ್ ಮೋಡ್ಯೋ ಜನೆಗಳ ಒಂದು ಭಾಗವಾಗಿದೆ. ಭಾರತ ಸರ್ಕಾರದ ವಿದ್ಯುನ್ಮಾನ, ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯು ಈ ಯೋಜನೆಯ ನೋಡಲ್ ಇಲಾಖೆಯಾಗಿ ಕಾರ್ಯ ನಿರ್ವಹಿಸಲಿದ್ದು, ರಾಜ್ಯ ಸರ್ಕಾರ ಅಥವಾ ರಾಜ್ಯ ಸರ್ಕಾರ ಗೊತ್ತುಪಡಿಸುವ ಏಜೆನ್ಸಿಗಳು ಈ ಯೋಜನೆಯನ್ನು ಅನುಷ್ಠಾನಗೊಳಿಸುವುವು. ಜಿಲ್ಲಾ ಕೇಂದ್ರಗಳಲ್ಲಿರುವ ವಿವಿಧ ಇಲಾಖೆಗಳ ಹಲವಾರು ಸೇವೆಗಳನ್ನು ನಾಗರಿಕರಿಗೆ ತಡೆರಹಿತವಾಗಿ ನೀಡುಲು ಅನುವಾಗಲು ಮತ್ತು ಇಲಾಖೆಗಳ ದಕ್ಷತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಸೇವಾ ಸಿಂಧು ಯೋಜನೆಯನ್ನು ಪರಿಕಲ್ಪಿಸಲಾಗಿದೆ.

ಇದರಿಂದಾಗಿರುವ ಕೆಲಸಗಳೇನು..?

ಇಲ್ಲಿಯವರೆವಗೆ ವಿವಿಧ ಇಲಾಖೆಗಳ 346 ನಾಗರೀಕ ಸೇವೆಗಳನ್ನು ಸೇವಾ ಸಿಂಧು ಯೋಜನೆಯಡಿ ಸಂಯೋಜಿಸಲು ಗುರುತಿಸಲಾಗಿದೆ. ಈ ಪೈಕಿ 71 ಸೇವೆಗಳು ರಾಷ್ಟೀಯ ಮಟ್ಟದ ಕಡ್ಡಾಯ ಸೇವೆಗಳಾಗಿದ್ದು, ಉಳಿದ 225 ಸೇವೆಗಳನ್ನು ರಾಜ್ಯವು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಕಂದಾಯ ಇಲಾಖೆಯ 29 ಪ್ರಮಾಣ ಪತ್ರಗಳ ಸೇವೆಗಳನ್ನು ಸೇವಾ ಸಿಂಧು ಅಂತರ್ಜಾಲ ತಾಣದೊಂದಿಗೆ ಸಂಯೋಜಿಸುವುದರ ಮೂಲಕ ಕರ್ನಾಟಕ ರಾಜ್ಯದಲ್ಲಿ ಯೋಜನೆಯನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಲಾಗಿದೆ. ಇಲ್ಲಿಯವರೆವಿಗೆ 1,12,000 ವ್ಯವಹಾರಗಳನ್ನು ಸೇವಾ ಸಿಂಧು ಅಂತರ್ಜಾಲ ತಾಣದ ಮೂಲಕ ಯಶಸ್ವಿಯಾಗಿ ಮಾಡಲಾಗಿದ್ದು, 1.00 ಲಕ್ಷಕ್ಕೂ ಅಧಿಕ ಪ್ರಮಾಣ ಪತ್ರಗಳನ್ನು ನಾಗರಿಕರಿಗೆ ವಿತರಿಸಲಾಗಿದೆ. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ, ಔಷದ ನಿಯಂತ್ರಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಯೋಜನಾ ಇಲಾಖೆಯ 18 ಹೆಚ್ಚುವರಿ ಸೇವೆಗಳನ್ನು ಸೇವಾ ಸಿಂಧು ಅಂತರ್ಜಾಲ ತಾಣಕ್ಕೆ ಸಂಯೋಜಿಸಲಾಗಿದೆ.

ಇಲಾಖೆಗಳಿಗೆ ಆಗುವ ಮುಖ್ಯ ಉಪಯೋಗಗಳು

ಇಲಾಖೆಗಳು ತಮ್ಮ ತಮ್ಮ ಇಲಾಖೆಯ ಮುಖ್ಯ ಕಾರ್ಯಗಳತ್ತ ಕೇಂದ್ರೀಕರಿಸ ಬಹುದಾಗಿದೆ. ಇದರಿಂದಾಗಿ ಇಲಾಖೆಗಳ ಮತ್ತು ಉದ್ಯೋಗಿಗಳ ದಕ್ಷತೆ ಹೆಚ್ಚಲು ಅನುಕೂಲವಾಗುವುದು.  ಇ-ಪೋರ್ಟಲ್ ಮೂಲಕ ಇಲಾಖೆಗಳಿಗೆ ವಾಸ್ತವಿಕ ಮತ್ತು ಅಸಾದಾರಣ ಮಾಹೆಯಾನ ವರದಿಗಳನ್ನು ನೀಡುವುದರ ಮೂಲಕ ಇಲಾಖೆಗಳು ಸರ್ಕಾರಿ ಸೇವೆಗಳ ಅನುಷ್ಠಾನಕ್ಕಾಗಿ ಉತ್ತಮ ಯೋಜನೆಗಳನ್ನು ರೂಪಿಸಿಕೊಳ್ಳಬಹುದು.ಸಕಾಲ ಯೋಜನೆಯಡಿ ಅರ್ಜಿಗಳನ್ನು ಸಂಯೋಜಿಸುವುದರಿಂದ, ನಿಗಧಿತ ಕಾಲ ಮಿತಿಯಲ್ಲಿ ಸೇವೆಗಳು ದೊರಕುವುವು.ಇತ್ತೀಚಿನ ಮಾಹಿತಿ ವಿಶ್ಲೇಷಿತ ವರದಿಗಳ ಅಳವಡಿಕೆಯೊಂದಿಗೆ ಏರಿಳಿತಗಳನ್ನು ಊಹಿಸಲು ಮತ್ತು ನಾಗರೀಕರಿಗೆ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಲು ಇಲಾಖೆಗಳಿಗೆ ನೆರವಾಗುತ್ತದೆ.ಸೇವಾ ಸಿಂಧು ಜಾರಿಯಿಂದಾಗುವ ಉಪಯೋಗಗಳಿಂದ ನಾಗರಿಕರಿಗೆ ಅನುಕೂಲಕರ ಮತ್ತು ಶೀಘ್ರವಾಗಿ ಸೇವೆಗಳು ದೊರೆಯುತ್ತವೆ.

ನಾಗರಿಕರಿಗೆ ಆಗುವ ಮುಖ್ಯ ಉಪಯೋಗಗಳು

ನಾಗರೀಕರು ವಿವಿಧ ಇಲಾಖೆಗಳ ಸೇವೆಗಳನ್ನು ಪಡೆಯಲು ಸೇವಾ ಸಿಂಧು ಅಂತರ್ಜಾಲ ತಾಣವು ಒಂದು ಏಕರೂಪ ವೇದಿಕೆಯನ್ನು ಒದಗಿಸುತ್ತದೆ.

ನಾಗರೀಕರು ಕಛೇರಿ ವೇಳೆ ಹೊರತಾಗಿಯೂ, ಈ ಜಾಲತಾಣಕ್ಕೆ ಆನ್ ಲೈನ್ ನಲ್ಲಿ ತಮಗೆ ಬೇಕಾಗಿರುವ ಸೇವೆಗೆ ಮನವಿ ಸಲ್ಲಿಸಬಹುದು.

ನಾಗರೀಕರು ತಮ್ಮ ಅರ್ಜಿಯ ಸ್ಥಿತಿ ಗತಿಗಳನ್ನು ಯಾವುದೇ ಸ್ಥಳದಲ್ಲಿ ಅಥವಾ ಯಾವುದೇ ಸಮಯದಲ್ಲಿ ಪತ್ತೆ ಹಚ್ಚಬಹುದು.

ಪರ್ಯಾಯವಾಗಿ ನಾಗರೀಕರು ತಮ್ಮ ಹತ್ತಿರದ ಗ್ರಾಮ ಪಂಚಾಯತಿಯಲ್ಲಿ ಲಭ್ಯವಿರುವ ಯಾವುದೇ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಸೇವೆಗಳನ್ನು ಪಡೆಯಬಹುದು.

ಕೇಂದ್ರೀಕೃತ ಸಹಾಯವಾಣಿಯ ಮೂಲಕ ನಾಗರೀಕರು ಅನುಮಾನಗಳನ್ನು ಪರಿಹರಿಸಿಕೊಂಡು ತಮ್ಮ ತೊಂದರೆಗಳನ್ನು ನಿವಾರಿಸಿಕೊಳ್ಳಬಹುದಾಗಿದೆ.

ಕೊರೋನಾ ವೈರಸ್ ಲಾಕ್ ಡೌನ್ ಹಿನ್ನಲೆಯಲ್ಲಿ ಕೆಲಸವಿಲ್ಲದೆ ಸಂಕಷ್ಟಕ್ಕೀಡಾಗಿರುವ ಆಟೋ, ಟ್ಯಾಕ್ಸಿ ಚಾಲಕರು ಮುಖ್ಯಮಂತ್ರಿಗಳು ಘೋಷಿಸಿರುವ ಪರಿಹಾರ ಹಣ ಸ್ವೀಕರಿಸಲು ಸೇವಾಸಿಂಧು ಪೋರ್ಟಲ್‌ಗಳ ಮೂಲಕ ಅರ್ಜಿ ಸಲ್ಲಿಸಬಹುದು.

ಪರಿಣಾಮಕಾರಿಯಾಗಿ ಕೆಲಸ ಮಾಡ್ತಾ ಇದಿಯಾ..?

ಕೊರೋನಾ ವೈರಸ್ ಲಾಕ್ ಡೌನ್ ಹಿನ್ನಲೆಯಲ್ಲಿ ಕೆಲಸವಿಲ್ಲದೆ ಸಂಕಷ್ಟಕ್ಕೀಡಾಗಿರುವ ಆಟೋ, ಟ್ಯಾಕ್ಸಿ ಚಾಲಕರು ಮುಖ್ಯಮಂತ್ರಿಗಳು ಘೋಷಿಸಿರುವ ಪರಿಹಾರ ಹಣ ಸ್ವೀಕರಿಸಲು ಸೇವಾಸಿಂಧು ಪೋರ್ಟಲ್‌ಗಳ ಮೂಲಕ ಅರ್ಜಿ ಸಲ್ಲಿಸಬಹುದು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights