ಕೊರೊನಾ ಸಂಶೋಧನೆ ವೇಳೆ ಚೀನಾ ಪ್ರೊಫೆಸರ್ ಅಮೇರಿಕಾದಲ್ಲಿ ಗುಂಡೇಟಿಗೆ ಬಲಿ!

ಚೀನಾದ ಪ್ರೊಫೆಸರ್ ಬಿಂಗ್ ಲಿಯು ಅಮೇರಿಕಾದ ತಮ್ಮ ನಿವಾಸದಲ್ಲಿ ಗುಂಡೇಟಿಗೆ ಬಲಿಯಾಗಿದ್ದಾರೆಂಬ ಅಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ.

ಹೌದು…  ಕಿಲ್ಲರ್ ಕೊರೊನಾ ಸೋಂಕು ಬಗ್ಗೆ ಮಹತ್ವದ ಸಂಶೋಧನೆ ಮಾಡುತ್ತಿದ್ದ ಚೀನಾದ ಪ್ರೊಫೆಸರ್ ಬಿಂಗ್ ಲಿಯು ಗುಂಡೇಟಿಗೆ ಬಲಿಯಾಗಿದ್ದಾರೆ.

ಗುಂಡೇಟಿಗೆ ಒಳಗಾದ 37 ವರ್ಷದ ಬಿಂಗ್ ಲಿಯು ಪಿಟ್ಸ್ ಬರ್ಗ್ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿದ್ದರು. ಕಳೆದ ಶನಿವಾರ ಪಿಟ್ಸ್ ಬರ್ಗ್ ನ ಉತ್ತರದಲ್ಲಿರುವ ರಾಸ್ ಟೌನ್ ಶಿಪ್ ನಲ್ಲಿರುವ ತಮ್ಮ ಮನೆಯೊಳಗೆ ಮೃತಪಟ್ಟಿದ್ದಾರೆ. ಇವರೊಂದಿಗೆ  46 ವರ್ಷದ ಹಾವೋ ಗು ಎಂಬ ಮತ್ತೊಬ್ಬ ವ್ಯಕ್ತಿ ತನ್ನ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಫೆಸರ್ ಬಿಂಗ್ ಲಿಯುಗೆ ತಲೆ, ಕುತ್ತಿಗೆ ಭಾಗದಲ್ಲಿ ಗುಂಡೇಟಿನ ಗಾಯದ ಗುರುತು ಕಂಡುಬಂದಿದ್ದು, ಬಿಂಗ್ ಲಿಯು ರನ್ನ ಕೊಂದ ಬಳಿಕ ಹಾವೋ ಗು ತಾನೇ ಶೂಟ್ ಮಾಡಿಕೊಂಡು ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಪ್ರೊಫೆಸರ್ ಬಿಂಗ್ ಲಿಯು ಚೀನೀ ಎಂಬ ಕಾರಣಕ್ಕೆ ಗುಂಡೇಟಿಗೆ ಬಲಿಯಾಗಿಲ್ಲ ಎಂದು ಹೇಳಲಾಗುತ್ತಿದೆ. ಜೊತೆಗೆ ಬಿಂಗ್ ಲಿಯು ಸಾವಿನ ಬಗ್ಗೆ ಪಿಟ್ಸ್ ಬರ್ಗ್ ವಿಶ್ವವಿದ್ಯಾಲಯ ಸಂತಾಪ ಸೂಚಿಸಿದೆ.

”ಸಂಶೋಧಕ ಮತ್ತು ನೆಚ್ಚಿನ ಸಹೋದ್ಯೋಗಿ ಬಿಂಗ್ ಲಿಯು ಅವರ ದುರಂತ ಸಾವಿನಿಂದ ತೀವ್ರ ದುಃಖವಾಗಿದೆ. ಈ ಕಷ್ಟದ ಸಮಯದಲ್ಲಿ ವಿಶ್ವವಿದ್ಯಾಲಯವು ಬಿಂಗ್ ಲಿಯು ಅವರ ಕುಟುಂಬ, ಸ್ನೇಹಿತರು ಮತ್ತು ಸಹೋದ್ಯೋಗಿಗಳಿಗೆ ನೋವು ಭರಿಸುವ ಶಕ್ತಿ ಸಿಗಲಿ” ಎಂದು ಪಿಟ್ಸ್ ಬರ್ಗ್ ವಿಶ್ವವಿದ್ಯಾಲಯ ಹೇಳಿದೆ. ಆದರೆ ಕೊರೊನಾ ವೈರಸ್ ಕುರಿತು ಸಂಶೋಧನೆ ಮಾಡುತ್ತಿದ್ದ ಬಿಂಗ್ ಲಿಯು ಹತ್ಯೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights