ಕೊರೊನಾ ಸೀಕ್ರೇಟ್ ಅವತಾರ : ರೋಗ ಲಕ್ಷಣವಿಲ್ಲದೇ ದೇಹದಲ್ಲಿರುತ್ತೆ ಮಹಾಮಾರಿ!

ಜಗತ್ತಿನಾದ್ಯಂತ ಆಳವಾಗಿ ಬೇರೂರಿದ ಕೊರೊನಾ ಸದ್ಯ ಮತ್ತೊಂದು ಆತಂಕವನ್ನು ಸೃಷ್ಟಿಸಿದೆ. ಅದು ಇಡೀ ಮನುಕುಲವನ್ನೇ ಬೆಚ್ಚಿ ಬೀಳಿಸಿಸುವಂತಹ  ಕೊರೊನಾ ಸೀಕ್ರೇಟ್ ಅವತಾರ.ಕೊರೊನಾ ಸೋಂಕಿತರು ಹೀಗೆ ಇರ್ತಾರೆ ಅನ್ನೋ ಕಲ್ಪನೆ ಎಲ್ಲರಲ್ಲೂ ಇದೆ. ಆದರೆ ಈ ಕಲ್ಪನೆಯಿಂದ ಕೊಂಚ ಹೊರಬಂದು ಯೋಚನೆ ಮಾಡಬೇಕಾದ ಕಾಲ ಬಂದಿದೆ.

ಹೌದು..  ರಾಜ್ಯದಲ್ಲಿ ಕೊರೊನಾ ಸೀಕ್ರೇಟ್ ಅವತಾರ ಸೃಷ್ಟಿಯಾಗಿದ್ದು, ಏಪ್ರಿಲ್ 17 ರಿಂದ ಏಪ್ರಿಲ್ 28 ರವರೆಗೆ ನಿಗೂಢ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಗದಗದಲ್ಲಿ ಮನೆಯಲ್ಲೇ ಇದ್ದು ವ್ಯಕ್ತಿಯೋರ್ವನಿಗೆ ಕೊರೊನಾ ಪಾಸಿಟಿವ್ ಬಂದಿದೆ. ಯಾವುದೇ ಟ್ರಾವೆಲ್ ಹಿಸ್ಟ್ರಿ ಇಲ್ಲದ 75 ವೃದ್ಧನಿಗೆ ಕೊರೊನಾ ಬಂದಿದೆ. ಈ ರೀತಿ ಪ್ರಕರಣಗಳು ವಿಶ್ವದೆಲ್ಲೆಡೆ ಕಾಣಿಸಿಕೊಂಡಿವೆ. ಈ ಪ್ರಕರಣಗಳಿಗೆ ಬೆಂಗಳೂರು-ಮೈಸೂರೇ ಹಾಟ್ ಸ್ಪಾಟ್ ಎನ್ನುತ್ತದೆ ಸಂಶೋಧನೆ. ಏಪ್ರಿಲ್ 17 ರಿಂದ ಏಪ್ರಿಲ್ 28 ರವರೆಗೆ ಎಲ್ಲೆಲ್ಲಿ ಸೈಲೆಂಟಾಗಿ ಕೊರೊನಾ ಹರಡುತ್ತಿದೆ ಗೊತ್ತಾ..? 88 ಬೆಂಗಳೂರು, 65 ಮೈಸೂರು , ಬೆಳಗಾವಿ, ಬಿಜಾಪುರ, ಕಲಬುರಗಿ ಹೀಗೆ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಒಟ್ಟು 376 ಪ್ರಕರಣಗಳಲ್ಲಿ ರೋಗ ಲಕ್ಷಣಗಳೇ ಪತ್ತೆಯಾಗಿಲ್ಲ.

ಜ್ವರವಿಲ್ಲ, ಕೆಮ್ಮಿಲ್ಲ, ಉಸಿರಾಟದ ಸಮಸ್ಯೆ ಇಲ್ಲದೇ ಕೊರೊನಾ ನಮ್ಮದೇಹದಲ್ಲಿರುತ್ತದೆ. ಯಾವುದೇ ರೋಗ ಲಕ್ಷಣಗಳು ಇಲ್ಲದೇ ಇದ್ದರೂ ಕೊರೊನಾ ಇರುತ್ತದೆ.  ಅಷ್ಟು ನಿಗೂಢವಾಗಿ ದೇಹದಲ್ಲಿರುತ್ತದೆ ಕೊರೊನಾ. ಶೀತಾ, ನಾಲಿಗೆ ರುಚಿ ಕಳೆದುಕೊಳ್ಳುವುದು, ಕಫದ ಮಾತೇ ಇಲ್ಲದಿದ್ದರೂ ಕೊರೊನಾ ದೇಹದಲ್ಲಿರುತ್ತದೆ. ಜೊತೆಗೆ ಇದು ಸೈಲೆಂಟಾಗೇ ಮತ್ತೊಬ್ಬರಿಗೂ ಹರಡುತ್ತಿರುತ್ತದೆ. ಮತ್ತೊಂದು ಅಘಾತಕಾರಿ ವಿಚಾರ ಅಂದರೆ ಟೆಸ್ಟಿಂಗ್ ಬಳಿಕವೂ ಕೊರೊನಾ ಇರುವುದು ಗೊತ್ತಾಗುತ್ತಿಲ್ಲ.

ರಾಜ್ಯದಲ್ಲಿ ಏಪ್ರಿಲ್ 17 ರಿಂದ ಏಪ್ರಿಲ್ 28 ರವರೆಗೆ 10 ದಿನಗಳಲ್ಲಿ ದಾಖಲಾದ 205 ಕೊರೊನಾ ಪ್ರಕರಣಗಳಲ್ಲಿ 190 ರಷ್ಟು (ಶೇ 90 ರಷ್ಟು) ರೋಗಗಳಲ್ಲಿ ರೋಗ ಲಕ್ಷಣಗಳೇ ಇಲ್ಲ. ಕೊರೊನಾ  ಮೊದಲೇ ಕಾಣದ ಜೀವಿ. ಅದರಲ್ಲೂ ಕೊರೊನಾ ವೈರಸ್ ಇದ್ಧ ವ್ಯಕ್ತಿ ಆರೋಗ್ಯವಂತ ಮನುಷ್ಯರಂತೆ ಇರುತ್ತಾನೆ ಅಂದರೆ ಇದು ನಿಜಕ್ಕೂ ಆತಂಕ ತರುವ ವಿಚಾರವೇ ಸರಿ. ಕಳೆದ ಒಂದು ತಿಂಗಳಿನಿಂದ ಈ ರೀತಿಯ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚಾಗಿವೆ.

ಸದ್ಯ ಈ ಸ್ಈಕ್ರೇಟ್ ಕೊರೊನಾ ವೈರಸ್ ನ್ನು ಹಲವಾರು ರ್ಯಾಂಡಂ ಟೆಸ್ಟಿಂಗ್ ಮೂಲಕ ಪತ್ತೆ ಹಚ್ಚಲಾಗುತ್ತಿದೆ. ಈಗಾಗಲೇ ನಿಗೂಢ ಕೊರೊನಾ ಪತ್ತೆ ಕಾರ್ಯ ನಡೆಯುತ್ತಿದೆ. ಸಣ್ಣ ಜ್ವರಕ್ಕಾಗಿ ಬಂದರೂ ಅವರ ಮೇಲೆ ನಿಗಾ ಇಡಲಾಗಿದೆ. ಯಾವುದಕ್ಕೂ ನೀವು ಹುಷಾರಾಗಿರಿ..

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights