ಕೊರೊನ ಫೇಕ್ ಅಲರ್ಟ್: ರೆಸ್ಟೋರೆಂಟ್ ನಲ್ಲಿ ಮುಸ್ಲಿಂ ವ್ಯಕ್ತಿ ಆಹಾರದ ಮೇಲೆ ಉಗುಳುವ ಹಳೆಯ ವಿಡಿಯೋ ವೈರಲ್

ರೆಸ್ಟೋರೆಂಟ್‍ನಲ್ಲಿ ಉದ್ಯೋಗಿಯೊಬ್ಬರು ಆಹಾರವನ್ನು ಪ್ಯಾಕ್ ಮಾಡುವ 45 ಸೆಕೆಂಡುಗಳ ವೀಡಿಯೊವನ್ನು ಮುಸ್ಲಿಂ ವ್ಯಕ್ತಿಯೊಬ್ಬರು ಗ್ರಾಹಕರಿಗೆ ತಲುಪಿಸುವ ಮೊದಲು ಅದಕ್ಕೆ ಉಗುಳುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಮಾರ್ಚ್ 21 ರಂದು, ನಕಲಿ ಸುದ್ದಿ ವೇದಿಕೆ ‘ಪೋಸ್ಟ್ ಕಾರ್ಡ್ ನ್ಯೂಸ್’ನ ಸಂಸ್ಥಾಪಕ ಮಹೇಶ್ ವಿಕ್ರಮ್ ಹೆಗ್ಡೆ ಅವರು ವೈರಲ್ ವೀಡಿಯೊವನ್ನು ಟ್ವೀಟ್ ಮಾಡಿ, “ನಾವು ಈ ಮನುಷ್ಯನಂತಹ ಮಾರಕ ಸ್ಯಾಡಿಸ್ಟ್‍ಗಳನ್ನು ಹೊಂದಿರುವಾಗ ಜನತಾ ಕಫ್ರ್ಯೂನ ಉಪಯೋಗ ಏನು? ಈ ಹುಚ್ಚನನ್ನು ತಕ್ಷಣ ಬಂಧಿಸಿ.” ಇದನ್ನು 2,000 ಕ್ಕೂ ಹೆಚ್ಚು ಬಾರಿ ರಿಟ್ವೀಟ್ ಮಾಡಲಾಗಿದೆ. ಬಂಧನಕ್ಕಾಗಿ ಹೆಗ್ಡೆ ಅವರು ಕರೆ ಕೊಟ್ಟಿದ್ದು ಇದು ಭಾರತದ ಇತ್ತೀಚಿನ ಘಟನೆಯಾಗಿದೆ ಎಂದು ಸೂಚಿಸಿದೆ. ಆಲ್ಟ್ ನ್ಯೂಸ್ ಈ ಹಿಂದೆ ಹಲವಾರು ಸಂದರ್ಭಗಳಲ್ಲಿ ಹೆಗ್ಡೆ ತಪ್ಪು ಮಾಹಿತಿಯನ್ನು ಉತ್ತೇಜಿಸುತ್ತಿದ್ದಾರೆಂದು ತಿಳಿದುಕೊಂಡಿದೆ.

ಮಾರ್ಚ್ ಮಧ್ಯದಲ್ಲಿ ತಬ್ಲಿಘಿ ಜಮಾತ್ ನಡೆಸಿದ ಸಭೆಯನ್ನು ದೇಶಾದ್ಯಂತ ಹಲವಾರು ಪಾಸಿಟಿವ್ ಕರೋನವೈರಸ್ ಪ್ರಕರಣಗಳ ಮೂಲವೆಂದು ಗುರುತಿಸಿದ ನಂತರ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.

ಬಿಜೆಪಿಯ ಯುವ ವಿಭಾಗದ ಭಾರತೀಯ ಜನತಾ ಯುವ ಮೋರ್ಚಾದ ತೆಲಂಗಾಣ ರಾಜ್ಯ ವಕ್ತಾರ ರೂಪ್ ದಾರಕ್ ವೈರಲ್ ವಿಡಿಯೋವನ್ನು ಟ್ವೀಟ್ ಮಾಡಿ “ಅಂತಹ ಅಂಗಡಿಗಳನ್ನು” ಬಹಿಷ್ಕರಿಸುವಂತೆ ಕರೆ ನೀಡಿದರು. ಇದನ್ನು 1,000 ಕ್ಕೂ ಹೆಚ್ಚು ಬಾರಿ ರಿಟ್ವೀಟ್ ಮಾಡಲಾಗಿದೆ. ಬಿಜೆಪಿ ಬೆಂಬಲಿಗ ಸೋನಮ್ ಮಹಾಜನ್ ಕೂಡ ವೈರಲ್ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ ಮತ್ತು ಮುಸ್ಲಿಂ ವ್ಯಕ್ತಿಯಾಗಿದ್ದ ಜೊಮಾಟೊ ಡೆಲಿವರಿಯಿಂದ ವ್ಯಕ್ತಿಯೊಬ್ಬರು ವಿತರಣೆಯನ್ನು ನಿರಾಕರಿಸಿದ ಘಟನೆಯನ್ನು ಸಮರ್ಥಿಸಿದ್ದಾರೆ. ಅವರ ಟ್ವೀಟ್ ಅನ್ನು 1,200 ಕ್ಕೂ ಹೆಚ್ಚು ಬಾರಿ ರಿಟ್ವೀಟ್ ಮಾಡಲಾಗಿದೆ

ಹಲವಾರು ಫೇಸ್‍ಬುಕ್ ಬಳಕೆದಾರರು ಹಿಂದಿ ಬರಹದೊಂದಿಗೆ ವೈರಲ್ ವೀಡಿಯೊವನ್ನು ಹಂಚಿಕೊಂಡಿದ್ದಾರೆ, “ಮಾರುಕಟ್ಟೆಯಿಂದ ವಸ್ತುಗಳನ್ನು ತಿನ್ನುವುದರಿಂದ ದೂರವಿರಿ ಮತ್ತು ಕ್ಯಾಪ್ ಧರಿಸುವವರ ಕೀಳು ಕೆಲಸ ಗಮನಿಸಿ.” ಎಂಬಂತಹ ಕೋಮುವಾದದ ಮಸಾಲೆಯೊಂದಿಗೆ ಹಳೆಯ ವೀಡಿಯೊ ವೈರಲ್ ಆಗಿದೆ.

ಫ್ಯಾಕ್ಟ್ ಚೆಕ್:

ಆಲ್ಟ್ ನ್ಯೂಸ್ ವೀಡಿಯೊವನ್ನು ಅನೇಕ ಕೀಫ್ರೇಮ್‍ಗಳಾಗಿ ವಿಭಜಿಸಿತು ಮತ್ತು ಗೂಗಲ್‍ನಲ್ಲಿನ ಒಂದು ಫ್ರೇಮ್‍ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿತು. ಏಪ್ರಿಲ್ 27, 2019 ರಂದು ಯೂಟ್ಯೂಬ್ ಚಾನೆಲ್ ಮೂಲಕ ವೀಡಿಯೊವನ್ನು ಅಪ್‍ಲೋಡ್ ಮಾಡಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ.

ಗೂಗಲ್ ಮತ್ತು ಯಾಂಡೆಕ್ಸ್‍ನಲ್ಲಿನ ವಿವಿಧ ರಿವರ್ಸ್ ಇಮೇಜ್ ಹುಡುಕಾಟ ಫಲಿತಾಂಶಗಳ ಹುಡುಕಾಟ ನಡೆಸಿದ ನಂತರ, ಕರೋನವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಈ ವೀಡಿಯೊ ಇತ್ತೀಚೆಗೆ ಹಲವಾರು ದೇಶಗಳಲ್ಲಿ ಪ್ರಸಾರವಾಗುತ್ತಿದೆ ಎಂದು ನಾವು ಕಂಡುಕೊಂಡಿದ್ದೇವೆ.

ಮಾರ್ಚ್ 22, 2020 ರಂದು ಗಲ್ಫ್ ನ್ಯೂಸ್ ವರದಿಯ ಪ್ರಕಾರ, “ಅಬುಧಾಬಿ ಪಬ್ಲಿಕ್ ಪ್ರಾಸಿಕ್ಯೂಷನ್ ಆಹಾರವನ್ನು ಹೊಂದಿರುವ ಪ್ಲಾಸ್ಟಿಕ್ ಚೀಲಕ್ಕೆ ಕಾರ್ಮಿಕರ ಉಗುಳುವ ಆನ್‍ಲೈನ್ ವೀಡಿಯೊ ಯುಎಇಯಲ್ಲಿ ಚಿತ್ರೀಕರಿಸಿಲ್ಲ ಎಂದು ದೃಢಪಡಿಸಿದೆ” ಎಂದು ಹೇಳಿದೆ. ಆಹಾರ ಚೀಲಕ್ಕೆ ವ್ಯಕ್ತಿಯೊಬ್ಬ ಉಗುಳುತ್ತಿರುವ ವಿಡಿಯೋವನ್ನು ಏಷ್ಯನ್ ದೇಶದಲ್ಲಿ ಪತ್ತೆ ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಮಾರ್ಚ್ 19, 2020 ರಂದು, ‘ಕಂಪ್ಲೈನ್ ಸಿಂಗಾಪುರ’ ಲೇಖನವೊಂದರ ಕ್ಲಿಪ್ ಆಧರಿಸಿ ಸಿಂಗಾಪುರ್ ಆಹಾರ ಸಂಸ್ಥೆ (ಎಸ್‍ಎಫ್‍ಎ) ಗೆ ದೂರು ದಾಖಲಿಸಿದೆ ಎಂದು ವರದಿ ಮಾಡಿದೆ. ಸಿಂಗಪುರದ ರೆಸ್ಟೋರೆಂಟ್‍ನಲ್ಲಿ ಈ ಘಟನೆ ನಡೆದಿದೆ ಎಂದು ಹಲವಾರು ಜನರು ನಂಬಿದ್ದರು. ಕಂಪ್ಲೈನ್ ಸಿಂಗಾಪುರ ಎಸ್‍ಎಫ್‍ಎ ಹೇಳಿಕೆಯನ್ನು ಪ್ರಕಟಿಸಿದೆ: “ಕಳೆದ ವರ್ಷ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದ ಈ ವೀಡಿಯೊ ಹೊಸದಲ್ಲ ಎಂದು ನಾವು ಗಮನಿಸುತ್ತೇವೆ. “ಬ್ಲಾಕ್ 724 ಕ್ಲೆಮೆಂಟಿ ವೆಸ್ಟ್ ಸ್ಟ್ರೀಟ್ 2 ನಲ್ಲಿರುವ ಸ್ಟಾಲ್‍ನ ಹೆಸರು “ಬೆಸ್ಟ್ ಮುಸ್ಲಿಂ ಫುಡ್ ಸ್ಟಾಲ್” ಎಂದು ಎಸ್‍ಎಫ್‍ಎ ಸೋಷಿಯಲ್ ಮೀಡಿಯಾ ಹೇಳಿಕೆಯನ್ನು ನಿರಾಕರಿಸಿತು. ಏಜೆನ್ಸಿ ಹೇಳಿದೆ, “ನಮ್ಮ ತನಿಖೆಯಲ್ಲಿ ಈ ಸ್ಥಳದಲ್ಲಿ ಅಂತಹ ಆಹಾರ ಮಳಿಗೆ ಇಲ್ಲ ಎಂದು ಕಂಡುಬಂದಿದೆ. ನಮ್ಮ ಅಧಿಕಾರಿಗಳು ಸುತ್ತಮುತ್ತಲಿನ ತಿನ್ನುವ ಮನೆಗಳು ಮತ್ತು ಆಹಾರ ಸಂಸ್ಥೆಗಳನ್ನೂ ಪರಿಶೀಲಿಸಿದರು. ಆದರೆ ಅದೇ ಅಥವಾ ಅದೇ ರೀತಿಯ ಹೆಸರಿನ ಯಾವುದೇ ಅಂಗಡಿಯನ್ನು ಕಾಣಲಿಲ್ಲ”

ಯುಎಇ ಮತ್ತು ಸಿಂಗಾಪುರದ ಎರಡೂ ವರದಿಗಳು ಆ ವ್ಯಕ್ತಿ ಆಹಾರ ಪ್ಯಾಕೆಟ್ ಒಳಗೆ ಉಗುಳಿಲ್ಲ ಎಂದು ಹೇಳುತ್ತದೆ. ಉದ್ದೇಶಪೂರ್ವಕವಾಗಿ ಉಗುಳುವ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ.

ವಾಸ್ತವವಾಗಿ, ಈ ವೀಡಿಯೊ ಕಳೆದ ವರ್ಷ ಮಲೇಷ್ಯಾಯದಲ್ಲೂ ವೈರಲ್ ಆಗಿತ್ತು, ಮಲೇಷ್ಯಾ ಮೂಲದ ಫೀಡ್ ಮಿ, 2019 ರ ಮೇ 1 ರ ವರದಿಯಲ್ಲಿ, “ಮಾಮಾಕ್ (ಓಪನ್ ಏರ್ ಫುಡ್ ರೆಸ್ಟೋರೆಂಟ್)ಇರುವ ಸ್ಥಳ ನಿಗೂಢವಾಗಿಯೇ ಉಳಿದಿದೆ. ಪೆÇೀಸ್ಟ್ ಭಾರಿ ವೈರಲ್ ಆಗಿದೆ, ಇದು ಏಪ್ರಿಲ್ 26 ರಂದು ಪೋಸ್ಟ್ ಮಾಡಿದ ನಂತರ 11,000 ಬಾರಿ ಮರು ಪೋಸ್ಟ್ ಆಗಿದೆ. ”

ಆಲ್ಟ್ ನ್ಯೂಸ್‍ಗೆ ವೀಡಿಯೊದ ಬಗ್ಗೆ ನಿಖರವಾದ ವಿವರಗಳನ್ನು ಸ್ಥಾಪಿಸಲು ಸಾಧ್ಯವಾಗದಿದ್ದರೂ, ಇದು ಕನಿಷ್ಠ ಕಳೆದ ವರ್ಷ ಏಪ್ರಿಲ್‍ನಿಂದ ಇತರ ದೇಶಗಳಲ್ಲಿ ಪ್ರಸಾರವಾಗುತ್ತಿದೆ ಮತ್ತು ಕರೋನವೈರಸ್ ಬಿಕ್ಕಟ್ಟಿನ ನಂತರ ಇತ್ತೀಚೆಗೆ ಇದನ್ನು ತೆಗೆದುಕೊಳ್ಳಲಾಗಿದೆ. ವೀಡಿಯೊದ ಮೂಲವು ಭಾರತವೆಂದು ತೋರುತ್ತಿಲ್ಲ ಏಕೆಂದರೆ ತಬ್ಲಿಗಿ ಜಮಾತ್‍ನ ಜನರು ಸಂಪರ್ಕತಡೆ ಕೇಂದ್ರಗಳಲ್ಲಿ ಅಶಿಸ್ತಿನಿಂದ ಇದ್ದಾರೆ ಮತ್ತು ವೈದ್ಯಕೀಯ ಕಾರ್ಯಕರ್ತರ ಮೇಲೆ ಉಗುಳಿದ್ದಾರೆ ಎಂದು ಸಿಆರ್‍ ಪಿ ಒ ಉತ್ತರ ರೈಲ್ವೆ ಹೇಳಿಕೊಂಡ ನಂತರ ಇಲ್ಲಿ ಪ್ರಸಾರ ಮಾಡಲು ಪ್ರಾರಂಭಿಸಿತು.

  • (ಕೃಪೆ): ಆಲ್ಟ್ ನ್ಯೂಸ್
  • (ಕನ್ನಡಕ್ಕೆ): ದಿವ್ಯ ಶರ್ಮ
ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights