ಕೊರೊನ ಮುಕ್ತ ಮುಸ್ಲಿಮರಿಗೆ ಮಾತ್ರ ಚಿಕಿತ್ಸೆ: ಜಾಹೀರಾತು ನೀಡಿದ ಆಸ್ಪತ್ರೆಯ ಮೇಲೆ ಪ್ರಕರಣ ದಾಖಲು

ಮುಸ್ಲಿಂ ರೋಗಿಗಳು ಮತ್ತು ಅವರ ಜೊತೆಗೆ ಸಹಾಯಕ್ಕೆ ಬರುವವರು ಕೋವಿಡ್-19 ಪರೀಕ್ಷೆ ಮಾಡಿಸಿಕೊಂಡು ಸೋಂಕು ಮುಕ್ತರಾಗಿದ್ದರೆ ಮಾತ್ರ ಚಿಕಿತ್ಸೆಗೆ ದಾಖಲು ಮಾಡಿಕೊಳ್ಳಲಾಗುವುದು ಎಂದು ಜಾಹೀರಾತು ನೀಡಿದ್ದ ಮೀರತ್ ನ ಕ್ಯಾನ್ಸರ್ ಆಸ್ಪತ್ರೆಯ ಮಾಲಿಕನ ಮೇಲೆ ಈಗ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

“ಜಾಹೀರಾತುಗಳ ಮೂಲಕ, ಆಸ್ಪತ್ರೆ ಆ ಪ್ರದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಅಪಪ್ರಚಾರ ಮಾಡಿರುವುದು ಪೊಲೀಸರಿಗೆ ತಿಳಿಯಿತು. ಇದು ಕೋಮುಘರ್ಷಣೆಗೆ ಕಾರಣವಾಗುವ ಸಾಧ್ಯತೆ ಇತ್ತು. ಆದುದರಿಂದ ಆಸ್ಪತ್ರೆಯ ಮಾಲಿಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ” ಎಂದು ಪೋಲಿಸ್ ಅಧಿಕಾರಿ ಹೇಳಿರುವುದಾಗಿ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆ ವರದಿ ಮಾಡಿದೆ.

ವೇಲೆಂಟಿಸ್  ಕ್ಯಾನ್ಸರ್ ಆಸ್ಪತ್ರೆಯ ಮಾಲೀಕ ಡಾ. ಅಮಿತ್ ಜೈನ್ ಇದಕ್ಕೆ ಪ್ರತಿಕ್ರಯಿಸಿದ್ದು, ಈ ತಪ್ಪು ಸಂದೇಶ ಬೆರಳಚ್ಚಿನ ದೋಷದಿಂದ ಆಗಿದ್ದು, ನಮ್ಮ ಉದ್ದೇಶ ಇದ್ದದ್ದು ಹೆಚ್ಚೆಚ್ಚು ಪರೀಕ್ಷೆಗಳನ್ನು ಮಾಡುವುದು. ಆದರೆ ಇದಕ್ಕೆ ಬೇರೆ ಬಣ್ಣ ಕೊಡಲಾಗಿದೆ ಎಂದಿದ್ದಾರೆ.

ಶುಕ್ರವಾರ ಹಿಂದಿ ದಿನಪತ್ರಿಕೆಯಲ್ಲಿ ನೀಡಲಾಗಿದ್ದ ಜಾಗೀರಾತಿನಲ್ಲಿ “ಹಲವು ಮುಸ್ಲಿಂ ರೋಗಿಗಳು ನಿಯಮಗಳನ್ನು ಪಾಲಿಸುತ್ತಿಲ್ಲ (ಮಾಸ್ಕ್ ಧರಿಸುವುದು ಇತ್ಯಾದಿ) ಮತ್ತು ಆಸ್ಪತ್ರೆಯ ಸಿಬ್ಬಂದಿಯ ಜೊತೆಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ, ರೋಗಿಗಳು ಮತ್ತು ಅಧಿಕಾರಿಗಳ ಸುರಕ್ಷತೆಯ ದೃಷ್ಟಿಯಿಂದ ಯಾರೇ ಹೊಸ ಮುಸ್ಲಿಂ ರೋಗಿಗಳು ಮತ್ತು ಅವರ ಶುಶ್ರೂಷೆಗೆ ಬರುವವರು ಕೊರೊನ ವೈರಸ್ ಪರೀಕ್ಷೆ ಮಾಡಿಸಿಕೊಂಡು ಸೋಂಕು ಮುಕ್ತರಾಗಿದ್ದರೆ ಮಾತ್ರ ಆಸ್ಪತ್ರೆಗೆ ಬರಬೇಕು” ಎಂದು ತಿಳಿಸಿತ್ತು.

ಭಾನುವಾರ ಡಾ. ಜೈನ್ ಅವರ ಮೇಲೆ ಐಪಿಸಿ ಸೆಕ್ಷನ್ 188, 295ಎ, 505  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಈ ಘಟನನೆಯ ಬೆನ್ನಲ್ಲೇ ಪ್ರಧಾನ ಮಂತ್ರಿ ಕಾರ್ಯಾಲಯ ಭಾನುವಾರ ಟ್ವೀಟ್ ಮಾಡಿ “ಕೋವಿಡ್-19 ಬರುವುದಕ್ಕೆ ಮುಂಚೆ ಅದು ಜನಾಂಗ, ಧರ್ಮ, ಬಣ್ಣ, ಜಾತಿ, ಪಂಗಡ, ಭಾಷೆ ನೋಡಿಕೊಂಡು ಬರುವುದಿಲ್ಲ. ಆದುದರಿಂದ ಒಗ್ಗಟ್ಟು ಮತ್ತು ಭ್ರಾತೃತ್ವ ನಮ್ಮ ಪ್ರಾಥಮಿಕ ಪ್ರತಿಕ್ರಿಯ ಜೊತೆಗೆ ಇರಬೇಕು. ಹೀಗಾಗಿ ನಾವು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಇದ್ದೇವೆ” ಎಂದು ಟ್ವೀಟ್ ಮಾಡಿತ್ತು.

https://twitter.com/PMOIndia/status/1251839308085915649?s=20

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights