ಖಾದರ, ಮಮತಾ, ರಾಹುಲ್ ಗೆ ದೇಶದ ಬಗ್ಗೆ ನಿಯತ್ತಿಲ್ಲ, ಪಾಕಿಸ್ತಾನಕ್ಕೆ ಹೋಗಲಿ – ಯತ್ನಾಳ್

ಮಾಜಿ ಸಚಿವ ಯು. ಟಿ. ಖಾದರ, ಮಮತಾ ಬ್ಯಾನರ್ಜಿ ಮತ್ತು ರಾಹುಲ್ ಗಾಂಧಿ ಅವರಿಗೆ ದೇಶದ ಬಗ್ಗೆ ನಿಯ್ತತಿಲ್ಲ. ಇಲ್ಲಿ ಆಗುವುದಿಲ್ಲ ಎಂದಾದರೆ ಯು. ಟಿ. ಖಾದರ, ಓವೈಸಿ ಮತ್ತು ಮಮತಾ ಬ್ಯಾನರ್ಜಿ ಪಾಕಿಸ್ತಾನಕ್ಕೆ ಹೋಗಲಿ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ರಾ. ಪಾಟೀಲ ಯತ್ನಾಳ್ ಕಿಡಿ ಕಾರಿದ್ದಾರೆ.

ವಿಜಯಪುದಲ್ಲಿ ಮಾತನಾಡಿದ ಅವರು, ಇವರಿಗೆ ಮಾನ ಮರ್ಯಾದೆ ಇದ್ದರೆ ದೇಶಕ್ಕೆ ಗೌರವ ತರುವ ಕೆಲಸ ಮಾಡಲಿ. ಬೆಂಕಿ ಹಚ್ಚುವ ಕೆಲಸ ಮಾಡುವುದಾದರೆ ಇಂಥವರ ನಡವಳಿಕೆ, ಚಟುವಟಿಕೆಗಳ ಮೇಲೆ ಇಂಟಲಿಜೆನ್ಸ್ ನಿರಂತರ ನಿಗಾ ಇಡಲಿ ಎೞದು ಆಗ್ರಹಿಸಿದ್ದಾರೆ.

ಡಾ. ಬಾಬಾಸಾಹೇಬ್ ಅಂಬೇಡ್ಕರ್ ರಚಿತ ಸಂವಿಧಾನದನ್ವಯ ಲೋಕಸಭೆ ಮತ್ತು ರಾಜ್ಯ ಸಭೆಯಲ್ಲಿ ರಾಷ್ಟ್ರೀಯ ಪೌರತ್ವ ವಿಧೇಯಕ ಅಂಗಿಕಾರವಾಗಿದೆ. ಆದರೆ, ಇದನ್ನು ವಿರೋಧಿಸಿ ರಾಜ್ಯಕ್ಕೆ ಬೆಂಕಿ ಹಚ್ಚುವುದಾಗಿ ಮಾಜಿ ಸಚಿವ ಯು. ಟಿ ಖಾದರ ಹೇಳಿಕೆ ನೀಡಿದ್ದಾರೆ. ಯು. ಟಿ. ಖಾದರ ನಕಲಿ ಜಾತ್ಯತೀತ. ಈ ಅವರು ಮೂಲಕ ಡಾ. ಬಾಬಾಸಾಹೇಬ ಅಂಬೇಡ್ಕರ ಮತ್ತು ಸಂವಿಧಾನಕ್ಕೆ ಅಪಮಾನ ಮಾಡುತ್ತಿದ್ದಾರೆ. ಇಂಥವರ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಯತ್ನಾಳ ಆಗ್ರಹಿಸಿದರು.

ಯು. ಟಿ. ಖಾದರ ಹತಾಶರಾಗಿದ್ದಾರೆ. ಭಾರತ ಒಂದು ಅನಾಥಾಶ್ರಮ ಎಂದುಕೊಂಡಿದ್ದಾರೆ. ರೋಹಿಂಗ್ಯಾಗಳು, ಬಾಂಗ್ಲಾದೇಶದ ಅಕ್ರಮ ವಲಸಿಗರು ಇಲ್ಲಿದ್ದಾರೆ. ಇಲ್ಲಿ ಕ್ರಿಮಿನಲ್ ಚಟುವಟಿಕೆಗಳು ನಡೆಯುತ್ತಿವೆ. ವೋಟ್ ಬ್ಯಾಂಕ್ ಅಷ್ಟೇ ಇವರ ಉದ್ದೇಶ. ಮುಂದೊಂದು ದಿನ ಈ ದೇಶ ಪಾಕಿಸ್ತಾನದ ಒಂದು ಭಾಗವಾಗದಂತೆ ತಡೆ ಹಿಡಿಯಲು ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರು ಈ ಕಾಯಿದೆಯನ್ನು ಜಾರಿಗೆ ತಂದಿದ್ದಾರೆ. ಇದು ಭಾರತದಲ್ಲಿರುವ ಮುಸ್ಲಿಮರ ವಿರೋಧವಲ್ಲ. ಇಲ್ಲಿರುವ ಮುಸ್ಲಿಮರು ಸ್ವತಂತ್ರವಿದ್ದಾರೆ. ಸ್ವತಂತ್ರ ಬಂದಾಗ ಮುಸ್ಲಿಮರ ಜನಸಂಖ್ಯೆ 3 ಕೋಟಿ ಇತ್ತು. ಈಗ 15 ಕೋಟಿ ಆಗಿದೆ. ಸ್ವತಂತ್ರ ಇದ್ದುದರಿಂದಲೇ ಹೆಚ್ಚಿನ ಉತ್ಪಾದನೆಯಾಗಿದೆ. ಆದರೆ ಪಾಕಿಸ್ತಾನದಲ್ಲಿ ಸ್ವಾತಂತ್ರ್ಯ ಬಂದಾಗ ಶೇ. 22ರಷ್ಟು ಹಿಂದುಗಳಿದ್ದರು. ಈಗ ಅಲ್ಲಿ ಕೇವಲ ಶೇ. 1.8 ರಷ್ಟು ಹಿಂದುಗಳಿದ್ದಾರೆ. ಭಾರತ ಮುಸ್ಲಿಮರಿಗೆ ಸುರಕ್ಷಿತ ದೇಶವಾಗಿದೆ. ಇವರಿಗೆ ಈ ದೇಶಕ್ಕೆ, ಭಾರತದ ಬಗ್ಗೆ ಇವರಿಗೆ ನಿಯತ್ತಿದ್ದರೆ ಅವರು ಇಂಥ ಹೋರಾಟ ಮಾಡಬಾರದು ಎಂದು ಅವರು ಆಕ್ರೋಶ ಹೊರ ಹಾಕಿದರು.

ಯು. ಟಿ. ಖಾದರ, ಮಮತಾ ಬ್ಯಾನರ್ಜಿ ಮತ್ತು ರಾಹುಲ್ ಗಾಂಧಿ ಅವರಿಗೆ ದೇಶದ ಬಗ್ಗೆ ನಿಯ್ತತಿಲ್ಲ. ಪಾಕಿಸ್ತಾನದವರನ್ನು ತಂದು ಭಾರತವನ್ನು ಇಸ್ಲಾಂ ರಾಷ್ಟ್ರವನ್ನಾಗಿ ಮಾಡುವ ಕುತಂತ್ರ ಇದರಲ್ಲಿದೆ. ಇಲ್ಲಿ ಆಗುವುದಿಲ್ಲವೆಂದರೆ ಯು. ಟಿ. ಖಾದರ, ಓವೈಸಿ ಮತ್ತು ಮಮತಾ ಬ್ಯಾನರ್ಜಿ ಪಾಕಿಸ್ತಾನಕ್ಕೆ ಹೋಗಲಿ. ಇಮ್ರಾನ್ ಖಾನ್ ಕೂಡ ಪಾಕಿಸ್ತಾನಕ್ಕೆ ಭಾರತೀಯರ ಪ್ರವೇಶಕ್ಕೆ ಅನುಮತಿ ನೀಡುವುದಿಲ್ಲ ಎಂದು ಈಗಾಗಲೇ ಸ್ಪಷ್ಪಪಡಿಸಿದ್ದಾರೆ. ಇವರಿಗೆ ಮಾನ ಮರ್ಯಾದೆ ಇದ್ದರೆ ದೇಶಕ್ಕೆ ಗೌರವ ತರುವ ಕೆಲಸ ಮಾಡಲಿ. ಬೆಂಕಿ ಹಚ್ಚುವ ಕೆಲಸ ಮಾಡುವುದಾದರೆ ಇಂಥವರ ನಡವಳಿಕೆ, ಚಟುವಟಿಕೆಗಳ ಮೇಲೆ ಇಂಟಲಿಜೆನ್ಸ್ ನಿರಂತರ ನಿಗಾ ಇಡಲಿ ಎಂದು ಅವರು ಹೇಳಿದರು.

ಕೇಂದ್ರ ಸಚಿವ ಸುರೇಶ ಅಂಗಡಿ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸುರೇಶ ಅಂಗಡಿ ಜನರಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಬಗ್ಗೆ ಭಯವಿರಲಿ ಎಂದು ಹೇಳಿದ್ದಾರೆ. ಅದನ್ನು ತಪ್ಪಾಗಿ ಅರ್ಥೈಸಬಾರದು ಎಂದು ಹೇಳಿದ ಅವರು, ಇಂದು ವಿಜಯಪುರದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ನಿಷೇಧಾನೆ ಹೊರತಾಗಿಯೂ ಪ್ರತಿಭಟನೆ ನಡೆಸಿ ಘೋಷಣೆ ಹಾಕಿದವರ ವಿರುದ್ಧ ಪ್ರಕರಣ ದಾಖಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ಹಿಂದೂ-ಮುಸ್ಲಿಂ ಎಂದು ವಿಭಜಿಸಿ ಶಾಂತಿ ಕದಡುವುದುೇ ಇವರ ಉದ್ದೇಶವಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವರನ್ನು ಅಸ್ಥಿರಗೊಳಿಸುವ ಕುತಂತ್ರವನ್ನು ಪಾಕಿಸ್ತಾನ ಸೇರಿದಂತೆ ನಾನಾ ರಾಷ್ಟ್ರಗಳು ಮಾಡುತ್ತಿವೆ ಎೞದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ರಾ. ಪಾಟೀಲ ಯತ್ನಾಳ ತಿಳಿಸಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights